ಸಾರಿಗೆ ನೌಕರರ ಬೇಡಿಕೆಯನ್ನು ಸರ್ಕಾರ ಈಡೇರಿಸಬೇಕು: ಜಯ ಮೃತ್ಯುಂಜಯ ಸ್ವಾಮೀಜಿ
ಅಥಣಿ 07: ಬಸನಗೌಡಾ ಯತ್ನಾಳ ಹಾಗೂ ರಾಷ್ಟ್ರೀಯ ಅದ್ಯಕ್ಷ ವಿಜಯಾನಂದ ಕಾಶಪ್ಪನ್ನವರ ಅವರು ದಿಟ್ಟ ನಿರ್ದಾರದಿಂದಲೆ ನಮಗೆ ಇವತ್ತಿನ ಹೋರಾಟಕ್ಕೆ ಒಂದು ಜಯ ಸಿಕ್ಕಿದೆ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮಿಜಿಗಳು ಹೇಳಿದರು.
ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗಾಗಿ ಸಹಕರಿಸಿದ ಪಂಚಮಸಾಲಿ ಬಂಧು ಬಾಂಧವರಿಗೆ ಬುದುವಾರ ಮಧ್ಯಾಹ್ನ ನಡೆದ ಕೃತಜ್ಞತೆ ಸಲ್ಲಿಸಿವ ಕಾರ್ಯಕ್ರಮಕ್ಕೆ ಅಥಣಿ ಆಗಮಿಸಿದ ಶ್ರೀಗಳು ಮಾತನಾಡಿದರು.
ನಮಗೆ ನಮ್ಮ ಸಮಾಜದ ಸಚಿವರು ಹಾಗೂ ಶಾಸಕರು ಹೋರಾಟವನ್ನು ನಿಲ್ಲಿಸಿ ಎಂದು ಎಷ್ಟೆ ಒತ್ತಾಯಿಸಿದರು. ಆ ವೇಳೆ ನಾನು ಹಿಂದೆ ತಗೆದಕೊಳ್ಳಬೆಕು ಎಂದು ಯೋಚನೆ ಮಾಡಬೇಕೆಂದು ಯೋಚಿಸಿದರೆ ನಮ್ಮ ಬನಸಗೌಡಾ ಯತ್ನಾಳ ಅವರ ದಿಟ್ ನಿರ್ಧಾರ ನಮ್ಮ ಆತ್ಮ ವಿಶ್ವಾಸ ಹೆಚ್ಚಿಸಿತು. ಇದರಿಂದ ನಾವು ಗೆಲುವು ಸಾಧಿಸಿದ್ದೇವೆ, ಒಂದು ವಿದಾನಸೌದ ಅಧಿವೇಶನದಲ್ಲಿ ಹೇಳಿದ ಮಾತಿಗೆ ಮುಖ್ಯಮಂತ್ರಿ ಯಡಿಯೂರಪ್ಪನ್ನವರು ತಪ್ಪಿದರೆ , ಸೆ. 15ರಂದು ಅವರು ನಮಗೆ ಕೊಟ್ಟ ಸಮಯ ಮುಗಿಯುತ್ತದೆ ಅ. 15ರಂದು ಮತ್ತೆ ಬೆಂಗಳೂರಿನಲ್ಲಿ ಇಪ್ಪತ್ತು ಲಕ್ಷ ಪಂಚಮಸಾಲಿ ಸಮಾಜದ ಜನರೊಂದಿಗೆ ಹೋರಾಟ ಮಾಡೋಣ ಎಲ್ಲರೂ ಸಜ್ಜಾಗಿರಿ ಎಂದು ಕರೆ ಕೊಟ್ಟರು.
ಕಾರ್ಯಕ್ರಮದ ನಂತರ ಮಾತನಾಡಿ ಕಳೆದ ಮೂರು ತಿಂಗಳಿಂದ ಹಿಂದೆ ಸಾರಿಗೆ ನೌಕರರಿಗೆ 6ನೇ ವೇತನ ಜಾರಿ ಮಾಡಲಾಗುವುದು ಎಂದು ಭರವಸೆ ನೀಡಿದರು. ಸರ್ಕಾರ ಯಲ್ಲೋ ಒಂದು ಕಡೆ ಹಿಂದೇಟು ಹಾಕುತ್ತಿದ್ದಾರೆ. ಸರ್ಕಾರ ಅವರ ಬೇಡಿಕೆಗೆ ಕೂಡಲೇ ದಿಟ್ಟ ಹೆಜ್ಜೆ ಇಡಬೇಕು, ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರ ಅವಧಿಯಲ್ಲಿ ಆಗುವಂತ ಕೆಲಸಕ್ಕೆ ಸರ್ಕಾರ ಅನುಮತಿ ನೀಡಬೇಕೆಂದು ಒತ್ತಾಯಿಸಿದರು. ಹಾಗೂ ಈ ಪ್ರತಿಭಟನೆ ಇಂದ ಸಾರ್ವಜನಿಕರಿಗೆ ವಿದ್ಯಾರ್ಥಿಗಳಿಗೆ ತುಂಬಾ ತೊಂದೆ ಉಂಟಾಗಿದೆ ಸರ್ಕಾರ ಜನಸಾಮಾನ್ಯರ ಹಿತದೃಷ್ಟಿಯಿಂದ ಸರ್ಕಾರ ಸಾರಿಗೆ ನೌಕರರಿಗೆ 6ನೇ ವೇತನವನ್ನು ನೀಡಬೇಕೆಂದು ಆಗ್ರಹಿಸಿದರು.
ಸಾರಿಗೆ ನೌಕರನನ್ನು ರಾಜ್ಯ ನೌಕರನನ್ನು ಘೋಷಿಸುವಂತೆ ಕೂಡಲಸಂಗಮ ಪಂಚಮಸಾಲಿ ಪೀಠದ ಸರ್ಕಾರಕ್ಕೆ ಮೊದಲೇ ಒತ್ತಾಯ ಮಾಡಲಾಗಿತ್ತು. ಸರ್ಕಾರ ನೌಕರರ ಬೇಡಿಕೆಯನ್ನು ತ್ವರಿತಗತಿಯಲ್ಲಿ ಈಡೇರಿಸಬೇಕೆಂದು ಸರ್ಕಾರಕ್ಕೆ ಬಸವ ಜಯಮೃತ್ಯುಂಜಯ ಸ್ವಾಮಿಜಿ ಆಗ್ರಹಿಸಿದರು.
ಈ ವೇಳೆ ಬಿ.ಎಲ್.ಪಾಟೀಲ, ಬಿ.ಆರ್.ಪಾಟೀಲ, ಪ್ರಕಾಶ ಕುಮಠಳ್ಳಿ, ಚನ್ನಪ್ಪಾ ಹಂಚಿನಾಳ, ತಾಲೂಕಾಧ್ಯಕ್ಷ ಅವಿನಾಶ ನಾಯಿಕ, ಜಿಲ್ಲಾ ಪ್ರದಾನ ಕಾರ್ಯದರ್ಶಿ ಚಿದಾನಂದ ಪಾಟೀಲ, ತಾಲೂಕಾ ಯುವ ಘಟಕಾದ್ಯಕ್ಷ ಪರಶುರಾಮ ನಂದೇಶ್ವರ, ನಗರ ಘಟಕದ್ಯಾಕ್ಷ ಸುನೀಲ ಪಾಟೀಲ, ಪ್ರಕಾಶ ಪಾಟೀಲ, ಸಂಜೀವ ವಾಂಗಿ ಮುಂತಾದವರು ಹಾಜರಿದ್ದರು.