ಕುಷ್ಟಗಿ

ಶಿಕ್ಷಣ ಕ್ಷೇತ್ರದಲ್ಲಿ ಸರಕಾರ ಗಂಭೀರ ಸಮಸ್ಯೆ ಎದರುಸುತ್ತಿದೆ: ಶಾಸಕ ಅಮರೇಗೌಡ ಪಾಟೀಲ

ಶಿಕ್ಷಣ ಕ್ಷೇತ್ರದಲ್ಲಿ ಸರಕಾರ ಗಂಭೀರ ಸಮಸ್ಯೆ ಎದರುಸುತ್ತಿದೆ: ಶಾಸಕ ಅಮರೇಗೌಡ ಪಾಟೀಲ

ಕುಷ್ಟಗಿ 24: ಶಿಕ್ಷಣ ಕ್ಷೇತ್ರದಲ್ಲಿ ಸರಕಾರ ಗಂಭೀರ ಸಮಸ್ಯೆ ಎದರುಸುತ್ತಿದೆ ಎಂದು ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಕಳವಳ ವ್ಯಕ್ತಪಡಿಸಿದರು.  

ಕಲ್ಯಾಣ ಕರ್ನಾಟಕ ಕುಷ್ಟಗಿ ತಾಲೂಕಾ ಅನುದಾನ ರಹಿತ ಶಾಲಾ ಸಂಸ್ಥೆಗಳ ಒಕ್ಕೂಟ  ಹಾಗೂ ತಾಲೂಕಾ ಖಾಸಗಿ ಶಾಲಾ ಶಿಕ್ಷಕರ ಮತ್ತು ಶಿಕ್ಷಕೇತರರ ಸಂಘ ಇವರುಗಳ ಸಂಯುಕ್ತಾಶ್ರಯದ ಶನಿವಾರ ಬೆಳಿಗ್ಗೆ ಇಲ್ಲಿನ ಬುತ್ತಿ ಬಸವೇಶ್ವರ ಸಭಾ ಭವನದಲ್ಲಿ ಏರಿ​‍್ಡಸಿದ್ದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ರವರ 134ನೇ ಜನ್ಮದಿನಾಚರಣೆಯ ಪ್ರಯುಕ್ತ ಕುಷ್ಟಗಿ ತಾಲೂಕಾ ಮಟ್ಟದ ಖಾಸಗಿ ಶಾಲಾ ಶಿಕ್ಷಕರ ದಿನಾಚರಣೆ ಹಾಗೂ ಉತ್ತಮ ಶಿಕ್ಷಕರಿಗೆ ಗೌರವ ಸನ್ಮಾನ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ-2022ವನ್ನು ಉದ್ಘಾಟಿಸಿ ಮಾತನಾಡಿದ ಅವರು ಕುಷ್ಟಗಿ ತಾಲೂಕಿನ ಸರ್ಕಾರಿ  ಶಾಲೆಗಳಲ್ಲಿ  ಶೇ 30ರಷ್ಟು ಶಿಕ್ಷಕರ ಕೊರತೆ ಇದೆ ಇದರಿಂದ ಶಿಕ್ಷಣ ಗುಣಮಟ್ಟ ಕುಗ್ಗುತ್ತಿದೆ.  

ಶಿಕ್ಷಣ ನಿನ್ನ ಮೊನ್ನೆ ಹುಟ್ಟಿಲ್ಲ, ಹಿಂದಿನ ಕಾಲದ ರಾಜ ಮಹರಾಜ ಕಾಲದಲ್ಲಿ ಶಿಕ್ಷಣ ಇತ್ತು, ಕೇವಲ ಉಳ್ಳವರು ಮಾತ್ರ ಶಿಕ್ಷಣ ಪಡೆಯುತ್ತಿದ್ದರು. ಜನ ಸಾಮಾನ್ಯರಿಗೆ ಶಿಕ್ಷಣ ನಿಲುಕದ ನಕ್ಷತ್ರವಾಗಿತ್ತು. ಸ್ವತಂತ್ರ ನಂತರದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಮಹತ್ವದ ಬೆಳವಣಿಗೆ ಖಂಡಿದೆ. ಶಿಕ್ಷಣ ಪಡೆಯುವುದು ಪ್ರತಿಯೊಬ್ಬರ ಹಕ್ಕು ಎಲ್ಲರೂ ಕಡ್ಡಾಯವಾಗಿ ಶಿಕ್ಷಣವನ್ನು ಪಡೆಯಬೇಕು. ಶಿಕ್ಷಣ ಕ್ಷೇತ್ರದಲ್ಲಿ ಮಠಾಧೀಶರ ಕೊಡುಗೆ ಅಪಾರ ವಾಗಿದೆ ಅವರ ಅಭಿವೃದ್ಧಿಯನ್ನು ಸರಕಾರ ಪರಿಗಣಿಸಿ ವಿಶೇಷ ಅನುದಾನವನ್ನು ನೀಡಿ ಪೋಷಣೆ ಮಾಡುತ್ತಿದೆ ಎಂದು ಹೇಳಿದರು.   

ಸರಕಾರ ಕೂಡಲೇ ಶಿಕ್ಷಕರನ್ನು ನೇಮಕಾತಿ ಮಾಡಲು ಮುಂದಾಗಬೇಕು ಎಂದು ಅಧಿವೇಶನದಲ್ಲಿ ಮಾನ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಯವರನ್ನು ಒತ್ತಾಯಿಸಲಾಗಿದೆ ಎಂದು ಹೇಳಿದರು. ಖಾಸಗಿ ಶಾಲಾ ಸಂಘ ಸಂಸ್ಥೆಗಳಲ್ಲಿ ಒಗಟ್ಟು ಇಲ್ಲ, ತಮ್ಮ ವಿವಿಧ ಬೇಡಿಕೆಗಳನ್ನು ಎಲ್ಲರೂ ಒಗ್ಗಟ್ಟಿನಿಂದ ಪಡೆಯಬೇಕು ಸರ್ಕಾರದ ಗಮನ ಸೆಳಯಬೇಕು ಈ ನಿಮ್ಮ ಕಾರ್ಯಕ್ಕೆ ನಾವು ಸದಾಸಿದ್ದ ಎಂದು ಭರವಸೆ ನೀಡಿದರು. ಖಾಸಗಿ ಶಾಲೆಗಳು ಮಕ್ಕಳಿಗೆ ಗುಣತ್ಮಾಕ ಶಿಕ್ಷಣವನ್ನು ನೀಡುತ್ತಿವೆ ಸರಕಾರಕ್ಕೆ ಸಹಾಯ ಮಾಡುವ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ಇವರ ಕಾರ್ಯವನ್ನು ಶ್ಲಾಘೀಸಿದರು. ಸರಕಾರದ ಆರ್ಥಿಕ ತೊಂದರೆಯಿಂದಾಗಿ ಸಹಾಯ ಮಾಡಲು ಸರಕಾರಕ್ಕೆ ಶಕ್ತಿ ಇಲ್ಲ ಸರ್ಕಾರಿ  ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಸರಕಾರಿ ಶಾಲೆಗಳನ್ನು ಬಲಪಡೆಸುತ್ತದೆ. ಕೆ.ಕೆ.ಆರಿ​‍್ಡ.ಬಿನಿಂದ ಶೇ. 10ರಷ್ಟು ಅನುದಾನವನ್ನು ಖಾಸಗಿ ಶಾಲೆಗಳಿಗೆ ಬಿಡುಗಡೆಗೆ ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದರು. ಚಳಗೇರ ಮಠದ ವೀರಸಂಗಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ಮದ್ದಾನಿ ಹಿರೇಮಠದ ಕರಿಬಸವ ಶಿವಾಚಾರ್ಯ ಮಹಾಸ್ವಾಮಿಗಳು, ವಿಜಯ ವಿಶ್ವಲ ವಿದ್ಯಾಮಂದಿರ ಹನಮಂತಪ್ಪ ಯಾಳವಾರ ಸಂಜೆ ಮಹಾರಾಜರು ದಿವ್ಯ ಸಾನಿಧ್ಯವಸಿದ್ದರು. ಕು.ಕಾ.ಅ.ರ.ಸಾ.ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಶಿವನಗೌಡ ಎಸ್‌. ಪಾಟೀಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.  

ಮಾಜಿ ಶಾಸಕ ಹಾಗೂ ಬಿಜೆಪಿ ಜಿಲ್ಲಾ ಅಧ್ಯಕ್ಷ ದೊಡ್ಡನಗೌಡ ಪಾಟೀಲ್ ಶಿಕ್ಷಕರ ಸ್ಪೂರ್ತಿ, ಚೈತನ್ಯ,  ಜ್ಯೋತಿ ತನನ್ನು ತಾನು ಅರ​‍್ಿಸಿ ಜಗತ್ತಿಗೆ ಬೆಳಕು ನೀಡುತ್ತದೆ. ಶಿಕ್ಷಕರು ಮಕ್ಕಳ ಗುಣಮಟ್ಟದ ಶಿಕ್ಷಣಕ್ಕಾಗಿ ತಮ್ಮನ್ನು ತಾವು ಅರ​‍್ಿಸಿ ಕೊಳ್ಳುತ್ತಾರೆ ಶಿಕ್ಷಕರು ಮಕ್ಕಳ ಪಾಲಿಗೆ ನಿಜವಾದ ದೇವರು ಎಂದು ಶಿಕ್ಷಕರ ಕಾರ್ಯವನ್ನು ಶ್ಲಾಘೀಸಿದರು.  

ಈ ಸಂದರ್ಭದಲ್ಲಿ ಮಾಜಿ ಶಾಸಕ ಕೆ.ಶರಣಪ್ಪ  ವಕೀಲರು, ಸ್ಥಾಯಿ ಸಮಿತಿ ಅಧ್ಯಕ್ಷ ರಾಜೇಶ ಪತ್ತಾರ ಬಿಜೆಪಿ ರಾಷ್ಟ್ರೀಯ ಪರಿಷತ್ ಸದಸ್ಯ ಹಾಗೂ ವಿಜಯಚಂದ್ರಶೇಖರ ಶಿಕ್ಷಣ ಸಂಸ್ಥೆ ಅಧ್ಯಕ್ಷ ಸಿ.ವಿ. ಚಂದ್ರಶೇಖರ, ಕ್ಷೇತ್ರ ಶಿಕ್ಷಣಾಧಿಕಾರಿ ಸುರೇಂದ್ರ ಕಾಂಬಳೆ, ಕ್ಷೇತ್ರ ಸಮನ್ಯಾಯಧಿಕಾರಿಗಳು ಬಿ.ಆರಿ​‍್ಸ ಜಗದೀಶಪ್ಪ ಕೊ.ಜಿ.ಅ.ಶಾ.ಸಂಸ್ಥೆಗಳ ಒಕ್ಕೂಟದ ಗೌರವಾಧ್ಯಕ್ಷ ರಾಘವೇಂದ್ರ ಪಾನಘಂಟಿ ಇವರು ವಿಶೇಷ ಉಪನ್ಯಾಸ ನೀಡಿ ಸರಕಾರದ ಶಿಕ್ಷಕರ ದಿನಾಚರಣೆ ಸಂದರ್ಭದಲ್ಲಿ ಖಾಸಗಿ ಶಾಲೆಗಳ ಸಂಘದ ಪದಾಧಿಕಾರಿಗಳನ್ನು ಪರಿಗಣಿಸಿ ಸೂಕ್ತ ಸ್ಥಾನಮಾನ ನೀಡಬೇಕು. ಸರಕಾರದ ಫಲಾಪೇಕ್ಷ ಬಯಸದೇ ಕೆಲಸ ಮಾಡುವ ಸಂಸ್ಥೆ ಯಾವುದಾದರು ಇದ್ದರೆ ಅದು ಏಕೈಕ ಖಾಸಗಿ ಶಿಕ್ಷಣ ಸಂಸ್ಥೆಗಳು ಶಿಕ್ಷಕರ ಕಲ್ಯಾಣ ಕರ್ನಾಟಕ ಮಂಡಳಿಯಿಂದ ವಿಶೇಷ ಅನುದಾನ ಬಿಡುಗಡೆ ಪ್ರಯತ್ನಸಬೇಕು ಎಂದು ಶಾಸಕರಲ್ಲಿ ಮನವಿ ಮಾಡಿದರು. ರಾಜ್ಯದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಶೇ.45ರಷ್ಟು ಖಾಸಗಿ ಶಿಕ್ಷಣ ಸಂಸ್ಥೆಗಳ ಪಾತ್ರ ಬಹುಮುಖ್ಯ ವಾಗಿದೆ  ಜನಪ್ರತಿನಿಧಿಗಳು ನಿರ್ಲಕ್ಷಿಸಿಸಬೇಡಿ ಎಂದು ಎಚ್ಚರಿಸಿದರು. ಮುದೇನೂರ ಗ್ರಾಮದ ಸರಕಾರಿ ಪ್ರೌಢಶಾಲೆಯ ಪ್ರದಸ ರಾಜು ಬಾಳಿತೋಟ ಅವರನ್ನು ಸನ್ಮಾನಿಸಿ ಬೀಳ್ಕೊಟ್ಟರು.  

ಈ ಸಂದರ್ಭದಲ್ಲಿ ಕು.ತಾ.ಅ.ರ.ಶಾ ಸಂಸ್ಥೆಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಎ.ವೈ. ಲೋಕರೆ, ಕು.ತಾ.ಖಾ.ಶಾ.ಶಿ.ಸಿ ಸಂಘದ ಅಧ್ಯಕ್ಷ ಹನಮಂತಪ್ಪ ತೋಟದ, ಕು.ತಾ..ಶಾ.ಶಿ.ಶಿ.ಸಂಘದ ಪ್ರಧಾನ ಕಾರ್ಯದರ್ಶಿ ನಾಗರಾಜು ಮಾಟಲದಿನ್ನಿ, ಕಲ್ಯಾಣ ಕರ್ನಾಟಕ ಕುಷ್ಟಗಿ ತಾಲೂಕಾ ಅನುದಾನ ರಹಿತ ಶಾಲಾ ಸಂಸ್ಥೆಗಳ ಒಕ್ಕೂಟದ ಉಪಾಧ್ಯಕ್ಷ ಶ್ರೀನಿವಾಸ ಎಲ್‌. ಜಾಗೀರದಾರ, ರವೀಂದ್ರನಾಥ ಎಂ, ಪತ್ತಾರ, ಮಹಾಂತೇಶ ಕಲ್ಲಪ್ಪನವರ, ಖಜಾಂಚಿ ಮಹಾಂತೇಶ ಬಿ. ಆರೇರ, ಸಂಘಟನಾ ಕಾರ್ಯದರ್ಶಿ ಸಂಜೋತಾ ಚಿದಾನಂದ ಇಂಡಿ, ವಿಷ್ಣು ಪಿ. ರಜಪೂತ, ಸುಂದರ ಹೆಚ್ ಚೌಡ್ಕಿ, ಸದಸ್ಯ ಶಿವಕುಮಾರ ಎಸ್‌. ತೊಂಟಾಪುರ, ಕೆ.ವಾಯ್‌. ಕಂದಕೂರ, ನಾಗರಾಜ ನಾಗೂರು, ಉಷಾ ದಂಡಿನ ಹಾಗೂ ತಾಲೂಕಾ ಖಾಸಗಿ ಶಾಲಾ ಶಿಕ್ಷಕರ ಮತ್ತು ಶಿಕ್ಷಕೇತರರ ಸಂಘ, ತಾಲೂಕಿನ ಎಲ್ಲಾ ಖಾಸಗಿ ಶಾಲಾ ಆಡಳಿತ ಮಂಡಳಿಯ ಸರ್ವಸದಸ್ಯರು ಮತ್ತು ಮುಖ್ಯೋಪಾಧ್ಯಯರು, ಶಿಕ್ಷಕವೃಂದ ಹಾಗೂ ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು. ಶಿಕ್ಷಕ ಮಹಾಂತೇಶ ಬಂಡ್ರಗಲ್ ಸ್ವಾಗತಿಸಿದರು. ಶಿಕ್ಷಕ ಮುತ್ತು ವಡ್ಡರ ನಿರೂಪಿಸಿದರು. ದೈಹಿಕ ಶಿಕ್ಷಕ ನಿಂಗಪ್ಪ ಕಂಚಿ ವಂದಿಸಿದರು. 


ಸುದ್ದಿ ಓದಿ