ನಿರಂತರ ಪ್ರಾಮಾಣಿಕ ಶ್ರಮವಿದ್ದಾಗ ಮಾತ್ರ ಗುರಿ ಸಾಧನೆ: ಕಾಕಿ
ಲೋಕದರ್ಶನ ವರದಿ
ರಾಣಿಬೆನ್ನೂರ 08: ಮಕ್ಕಳು ಸಂಸ್ಕಾರ ಸಂಸ್ಕೃತಿ ಧಾರ್ಮಿಕ ಮನೋಭಾವನೆಯ ಜೊತೆಗೆ ಉತ್ತಮವಾದ ಶಿಕ್ಷಣ ಪಡೆದು, ಸಮಾಜಮುಖಿಯಾದಂತಹ ಗುರಿಯನ್ನು ಹೊಂದಿ ಆಗ ಗುರಿಯನ್ನು ತಲುಪುವವರಿಗೂ ನಿರಂತರ ಪ್ರಾಮಾಣಿಕ ಶ್ರಮವಿದ್ದಾಗ ಮಾತ್ರ ಸಮಾಜದಲ್ಲಿ ಗುರಿಯನ್ನು ಸಾಧಿಸಿ ಆದರ್ಶರಾಗಿ ಹೊರಹೊಮ್ಮಲು ಸಾಧ್ಯವಾಗುತ್ತದೆ ಎಂದು ಜೆಸಿಐ ಜೆಸಿಐ ಅಧ್ಯಕ್ಷ ವೆಂಕಟೇಶ ಕಾಕಿ ಹೇಳಿದರು.
ತಾಲೂಕಿನ ಚೌಡಯ್ಯದಾನಪುರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಜೆಸಿಐ ಸಂಸ್ಥೆ ರಾಣಿಬೆನ್ನೂರ ಇವರ ವತಿಯಿಂದ ಏರಿ್ಡಸಿದ್ದ ರಾಷ್ಟ್ರೀಯ ಭಾವೈಕ್ಯತಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಪ್ರೀತಿ ವಿಶ್ವಾಸ, ಸ್ನೇಹ ಹಾಗೂ ಭಾವೈಕ್ಯತೆಯಿಂದ ಮುನ್ನಡೆದಾಗ ಆದರ್ಶಮಯವಾದ ಪರಿಸರವನ್ನು ಕಾಣಲು ಸಾಧ್ಯ ಎಂದರು.
ಜಗತ್ತಿನಲ್ಲಿ ಶ್ರೇಷ್ಠವಾದ ಸಂಪತ್ತು ಮಾನವನಲ್ಲಿದೆ. ಅದನ್ನರಿತು ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಾಗಬೇಕು ಅಂದಾಗ ಮಾನವ ದೇವಮಾನವನಾಗಲು ಸಾಧ್ಯ. ದ್ವೇಷ, ಅಸೂಯೆ, ಜಾತೀಯತೆ ಎಂಬ ವೈಷಮ್ಯದಂತಹ ಕೀಳು ಪ್ರವೃತ್ತಿಯನ್ನು ಅಂಟಿಸಿಕೊಳ್ಳದೆ ಮುನ್ನಡೆದಾಗ ನೆಮ್ಮದಿಯ ಬದುಕು ಕಾಣಲು ಸಾಧ್ಯ ಎಂದರು.
ಜೆಸಿಐ ಪೂರ್ವಾಧ್ಯಕ್ಷ ಪ್ರಭುಲಿಂಗಪ್ಪ ಹಲಗೇರಿ, ನಿಕಟ ಪೂರ್ವಾಧ್ಯಕ್ಷ ಆರ್.ವಿ. ಪಾಟೀಲ, ಕೋಶಾಧ್ಯಕ್ಷ ಪ್ರಕಾಶ ಬನ್ನಿಕೋಡ ಮಾತನಾಡಿದರು. ಎಸ್ಡಿಎಂಸಿ ಅಧ್ಯಕ್ಷ ಜಿ.ವಿ. ದೀಪಾವಳಿ ಕಾರ್ಯಕ್ರಮ ಉದ್ಘಾಟಿಸಿದರು. ಜೆಸಿಐ ಸದಸ್ಯರಾದ ವಿನಯ ಗುಲಗಂಜಿ, ಭೋಜರಾಜ ಗುಲಗಂಜಿ, ಎಸ್ಡಿಎಂಸಿ ಸದಸ್ಯ ಮಾಬುಸಾಬ ನದಾಫ, ಶಾಲಾ ಮುಖ್ಯೋಪಾಧ್ಯಾಯರುಗಳಾದ ಐ ಹೆಚ್ ಮೈದೂರ, ವಿಜಯ ಪೂಜಾರ, ಡಾ.ವಿನಾಯಕ, ಶಿಕ್ಷಕ ಎಸ್ಎಸ್ ಮುಳಗುಂದ, ಅಂಗನವಾಡಿ ಶಿಕ್ಷಕಿಯರಾದ ವನಜಾಕ್ಷಿ ಪೂಜಾರ, ಮಂಗಳಾ ಉಪ್ಪಿನ ಸೇರಿದಂತೆ ಶಿಕ್ಷಕಕರು ಮತ್ತು ಮಕ್ಕಳು ಇದ್ದರು.