ವರುಣದೇವನ ಆರ್ಭಟಕ್ಕೆ ತತ್ತರಿಸಿದ ಅನ್ನದಾತ
ಉಕ್ಕೇರಿದ ನದಿ ನೀರು ಜಮೀನಿಗೆ ನುಗ್ಗಿ ರಾತ್ರೋ ರಾತ್ರಿ ಕೋಟ್ಯಾಂತರ ರೂ. ಬೆಳೆಹಾನಿ
ಸಂತೋಷಕುಮಾರ ಕಾಮತ
ಮಾಂಜರಿ 13: ಬೆಳಗಾವಿ ಜಿಲ್ಲೆಯ ಗಡಿಭಾಗವಾಗಿರುವ ಚಿಕ್ಕೋಡಿ ನಿಪ್ಪಾಣಿ ಕಾಗವಾಡ ತಾಲೂಕಿನಲ್ಲಿ ಕಳೆದ 2ವಾರದಿಂದ ವರುಣದೇವ ಅಬ್ಬರಿಸಿ ಬೊಬ್ಬೆರೆದಿದ್ದಾನೆ. ಕಳೆದ ತಿಂಗಳು ಸುರಿದ ಮಳೆಯಿಂದಾಗಿ ಕೋಟ್ಯಾಂತರ ರೂಪಾಯಿ ಬೆಳೆಹಾನಿಯಾಗಿದ್ದು, ಇದೀಗ ಮತ್ತೆ ಸುರಿಯುತ್ತಿರುವ ಅಕಾಲಿಕ ಮಳೆಯಿಂದಾಗಿ ಮತ್ತೊಮ್ಮೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಳೆದ 2 ವಾರದಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಗೆ ಅಪಾರ ಪ್ರಮಾಣದ ಬೆಳೆಹಾನಿ ಸಂಭವಿಸಿದೆ. ನಿಪ್ಪಾಣಿ ಚಿಕ್ಕೋಡಿ ಕಾಗವಾಡ ತಾಲೂಕಿನ ಧೂದಗಂಗಾ ವೇದಗಂಗಾ ಕೃಷ್ಣಾ ನದಿ ತೀರದ ಅಕ್ಕ ಪಕ್ಕದ ತೋಟಗಳಿಗೆ ಮಳೆ ನೀರು ನುಗ್ಗಿದ್ದು, ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ಸತತ ಮಳೆಯಿಂದ ಧೂದಗಂಗಾ ವೇದಗಂಗಾ ಮತ್ತು ಕೃಷ್ಣಾ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಆದ್ದರಿಂದ ಚಿಕ್ಕೋಡಿ ನಿಪ್ಪಾಣಿ ಕಾಗವಾಡ ತಾಲೂಕಿನ ದೂಧಗಂಗಾ ವೇದಗಂಗಾ ಮತ್ತು ಕೃಷ್ಣಾ ನದಿ ತೀರದ ಜಮೀನು ಮತ್ತು ಅಕ್ಕ ಪಕ್ಕದ ತೋಟಗಳಿಗೆ ನೀರು ನುಗ್ಗಿದೆ. ಅದರ ಪರಿಣಾಮ ರಾತ್ರೋ ರಾತ್ರಿ ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆನಾಶವಾಗಿದೆ.
ದೂದಗಂಗಾ ವೇದಗಂಗಾ ಮತ್ತು ಕೃಷ್ಣಾ ನದಿ ನೀರು ನುಗ್ಗಿ ಅಕ್ಕಪಕ್ಕದ ಜಮೀನಿನ ಬೆಳೆ ನಾಶ
ಕಳೆದ 2ವಾರದಿಂದ ಚಿಕ್ಕೋಡಿ ನಿಪ್ಪಾಣಿ ಕಾಗವಾಡ ತಾಲೂಕಿನಲ್ಲಿ ಸುರಿಯುತ್ತಿರುವ ಭಾರಿ ಪ್ರಮಾಣದ ಮಳೆ ಹಾಗೂ ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ಕಷ್ಣಾ ಧೂದಗಂಗಾ ವೇದಗಂಗಾ ನದಿ ಉಕ್ಕಿ ಹರಿಯುತ್ತಿದ್ದು ನದಿ ನೀರು ನದಿ ದಡದ ಜಮೀನಿನಲ್ಲಿ ನುಗ್ಗಿ ಅಪಾರ ಪ್ರಮಾಣದ ಬೆಳೆ ಹಾನಿ ಹಾಳಾಗಿತ್ತು. ಇದೀಗ ಬೆಳೆದ ಫಸಲು ನೀರು ಪಾಲಾಗಿದೆ.
200 ಹೆಕ್ಟೇರ್ ಹೆಚ್ಚಿನ ಪ್ರದೇಶಕ್ಕೆ ಹಾನಿ
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ನಿಪ್ಪಾಣಿ ಮತ್ತು ಕಾಗವಾಡ ತಾಲೂಕಿನಲ್ಲಿ ಕಳೆದ ಮಂಗಳವಾರ ದೊರೆತ ಮಾಹಿತಿಯಂತೆ ಮಳೆಯಿಂದಾಗಿ 200 ಹೆಕ್ಟೇರ್ಗೂ ಹೆಚ್ಚಿನ ಪ್ರದೇಶದಲ್ಲಿ ಬೆಳೆಹಾನಿಯಾಗಿದೆ. ಅದರಲ್ಲಿ 128 ಹೆಕ್ಟೇರ್ ಶೇಂಗಾ. ಟೊಮೆಟೊ, 50 ಹೆಕ್ಟೇರ್ ಸೋಯಾಬಿನ್, 24 ಹೆಕ್ಟೇರ್ ವಿವಿಧ ಹೂ ತೋಟದ ಬೆಳೆಹಾನಿಯಾಗಿದೆ. ಉಳಿದಂತೆ 70 ಹೆಕ್ಟೇರ್ ಪ್ರದೇಶದ ಕ್ಯಾರೆಟ್, ಬೀನ್ಸ್, ಎಲೆಕೋಸು, ಬೀಟ್ರೋಟ್ ಬೆಳೆನಾಶವಾಗಿದೆ. ಕೇವಲ 3 ದಿನಗಳಲ್ಲಿ 1.30 ಕೋಟಿ ಮೌಲ್ಯ ರಷ್ಟು ಬೆಳೆಹಾನಿಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಬೇಡಿಕೆಯಿದ್ದರೂ ಹೂವುಗಳಿಗಿಲ್ಲ ಬೆಲೆ
ಕಡಿಮೆ ಬೆಲೆಗೆ ಹೂ ಮಾರಾಟ
ಮಾರುಕಟ್ಟೆಯಲ್ಲಿ ಹೂವಿಗೆ ಭರ್ಜರಿ ಬೆಲೆಯಿದ್ದರು, ಗಡಿಭಾಗದ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ನಿಪ್ಪಾಣಿ ಕಾಗವಾಡ ತಾಲ್ಲೂಕಿನ ಹೂವು ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ಹಬ್ಬದ ಪ್ರಯುಕ್ತ ಮಾರುಕಟ್ಟೆಯಲ್ಲಿ ಹೂವಿನ ಬೆಲೆ ಗಗನಕ್ಕೇರಿಯಾಗಿತ್ತು. ಕನಕಾಂಬರ, ಮಲ್ಲಿಗೆ ಹೂವು ಒಂದೂವರೆ ಸಾವಿರ ರೂಪಾಯಿ ಗಡಿದಾಟಿತ್ತು. ಸೇವಂತಿಗೆ, ರೋಜ್ ಹೂಗಳು ಸಹ ಬೆಲೆ ಏರಿಕೆಯಾಗಿತ್ತು. ಆದರೆ ಮಾರುಕಟ್ಟೆಯಲ್ಲಿ ಬೆಲೆ ಏರಿಕೆಯಾದರು ಗಡಿಭಾಗದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಮಳೆಯಿಂದಾಗಿ ಹಾಳಾದ ಹೂವುಗಳು
ಕಳೆದೊಂದು ವಾರದಿಂದ ಮಳೆಯಾಗ್ತಿರೊ ಹಿನ್ನಲೆ, ಚೆಂಡು ಹೂ, ಸೇವಂತಿಗೆ ಹೂವಿನಲ್ಲಿ ತೇವಾಂಶ ಹೆಚ್ಚಾಗಿ ಹೂವಿಗೆ ಬೇಡಿಕೆ ಕುಸಿತವಾಗಿದೆ. ಹಾಗಾಗಿ ಹಬ್ಬದ ಸಂದರ್ಭದಲ್ಲಿ ಭರ್ಜರಿ ಲಾಭದ ನೀರೀಕ್ಷೆಯಲ್ಲಿದ್ದ ರೈತರಿಗೆ ನಿರಾಸೆಯಾಗಿದೆ.
ಕಡಿಮೆ ಬೆಲೆಗೆ ಹೂವು ಮಾರಾಟ ಮಾಡಿದ ರೈತರು
ಮಳೆಯಿಂದಾ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಮತ್ತು ಚಿಕ್ಕೋಡಿ ಕಾಗವಾಡ ತಾಲೂಕು ಒಂದರಲ್ಲೆ 28 ಹೆಕ್ಟೇರ್ ನಷ್ಟು ಹೂವು ಬೆಳೆನಾಶವಾಗಿದೆ. ಲಕ್ಷ ಲಕ್ಷ ಬಂಡವಾಳ ಹಾಕಿದ್ದ ರೈತರ ಬೆಳೆಗಳು ಅಕಾಲಿಕ ಮಳೆಯಿಂದ ಗುಣಮಟ್ಟವಿಲ್ಲದೆ ನೆಲಕಚ್ಚಿದೆ. ಸಿಗುವ ಅಲ್ಪ ಸ್ವಲ್ಪ ಹಣದಲ್ಲಿ ಹೂವು ಮಾರುಕಟ್ಟೆಗೆ ಸಾಗಿಸಿದರೂ, ಮಾರಾಟ ವೆಚ್ಚವೂ ಉಳಿಯುತ್ತಿಲ್ಲ. ಹಾಗಾಗಿ ಬಹುತೇಕ ರೈತರು ಸಿಕ್ಕ ಸಿಕ್ಕ ಬೆಲೆಗೆ ತೋಟಗಳ ಬಳಿಯೇ ಹೂವಿನ ಮಾರಾಟಕ್ಕೆ ಮುಂದಾಗಿದ್ದಾರೆ.