ಶಿಗ್ಗಾವ್

ಟಿವಿ ಮಾಧ್ಯಮದಿಂದ ಕುಟುಂಬ ವ್ಯವಸ್ಥೆಗೆ ಧಕ್ಕೆಯಾಗಿದೆ: ಮಹಾದೇವ ಯಲಿಗಾರ

ಟಿವಿ ಮಾಧ್ಯಮದಿಂದ ಕುಟುಂಬ ವ್ಯವಸ್ಥೆಗೆ ಧಕ್ಕೆಯಾಗಿದೆ: ಮಹಾದೇವ ಯಲಿಗಾರ


ಲೋಕದರ್ಶನ ವರದಿ   

ಶಿಗ್ಗಾವಿ 17:  ನಮ್ಮ ಗ್ರಾಮೀಣ ರಂಗ ಕಲೆಯಾದ ನಾಟಕಗಳು ಕುಟುಂಬದಲ್ಲಿ ಒಗ್ಗಟ್ಟನ್ನು ಮೂಡಿಸುವತ್ತ ಕೆಲಸ ಮಾಡುತ್ತಿದ್ದವು ಆದರೆ ಇಂದಿನ ದಿನಗಳಲ್ಲಿ ಟಿ.ವಿಯಲ್ಲಿ ಬರುವ ಧಾರಾವಾಹಿಗಳು ಅತ್ತೆ ಸೊಸೆ ಹೇಗೆ ಜಗಳವಾಡಬೇಕು ಸಂಸಾರ ಹೇಗೆ ಒಡೆಯಬೇಕು ಎಂದು ಹೇಳಿಕೊಡುತ್ತವೆ ಎಂದು ಹುಬ್ಬಳ್ಳಿಯ ವಿಶೇಷ ಪೋಲಿಸ್ ಅಧಿಕಾರಿ ಮಹಾದೇವ ಯಲಿಗಾರ ಹೇಳಿದರು  

ಪಟ್ಟಣದ ಸಂತೆ ಮೈದಾನದಲ್ಲಿ ಪಂ.ಪುಟ್ಟರಾಜ ಗವಾಯಿಗಳ ಕಲಾ ಸಂಸ್ಥೆ ಹಾಗೂ ಕನ್ನಡ ಮತ್ತು ಸಂಸ್ರ್ಕತಿ ಇಲಾಖೆಯ ಸಹಯೋಗದಲ್ಲಿ ನಡೆದ ಸಾಮಾಜಿಕ ನಾಟಕ ಪ್ರದರ್ಶನ ಕಾರ್ಯಕ್ರಮದ ಜ್ಯೋತಿ ಬೆಳಗಿಸಿ ಮಾತನಾಡಿದ ಅವರು ನಾವು ಸಂತ ಶಿಶುವಿನಾಳ ಶರೀಫರ ತತ್ವ ಚಿಂತನೆಗಳನ್ನು ತಿಳಿದುಕೊಂಡು ಅವರ ಹಾದಿಯಲ್ಲಿ ನಡೆಯಬೇಕಾಗಿದೆ ಎಂದರು  

ರೈತ ಹೋರಾಟಗಾರ್ತಿ ಮಾಣಿಕ್ಯ ಚಿಲ್ಲೂರ ಅವರು ಮಾತನಾಡಿ ನಮ್ಮ ವಿಶಿಷ್ಟ ಸಂಸ್ರ್ಕತಿಯ ರಾಷ್ರ್ಟ ಈ ರಾಷ್ರ್ಟದ ಸಂಪತ್ತು ರೈತ ಮತ್ತು ಕ್ರಷಿ ಹಾಗಾಗಿ ನಮ್ಮ ರೈತರನ್ನು ಗೌರವಿಸುವ ಕೆಲಸ ಆಗಬೇಕಿದೆ ಎಂದರು. ದಿವ್ಯ ಸಾನಿಧ್ಯ ವಹಿಸಿದ್ದ ವಿರಕ್ತಮಠದ ಸಂಗನಬಸವ ಮಹಾಸ್ವಾಮಿಗಳು ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದರು  

ಈ ಸಂದರ್ಭದಲ್ಲಿ ಡಾ ಜಿ.ಸಿ.ನಿಡಗುಂದಿ, ಡಾ ಸಿ.ಡಿ.ಯತ್ನಳ್ಳಿ, ಎಸ್‌.ಎನ್‌.ಮುಗಳಿ, ಎಸ್‌.ಕೆ.ಹೂಗಾರ, ಬಿ.ಎಚ್‌.ಚಲವಾದಿ ಸಿದ್ದಲಿಂಗಪ್ಪ ನೇರೆಗಲ್, ಜಯದೇವ ಅಗಡಿ, ಶಿವಾನಂದ ಮ್ಯಾಗೇರಿ, ಶಿವಾನಂದ ಬಾಗೂರ, ಅವರನ್ನು ಸಂಸ್ದೆಯವತಿಯಿಂದ ಸನ್ಮಾನಿಸಲಾಯಿತು.   

ಕಾರ್ಯಕ್ರಮದಲ್ಲಿ ತಿಪ್ಪಣ್ಣ ಸಾತಣ್ಣವರ, ಮಂಜುನಾಥ ಬ್ಯಾಹಟ್ಟಿ, ಮಂಜುನಾಥ ಮಣ್ಣಣ್ಣವರ, ಮಹಾಲಿಂಗಪ್ಪ ಕುನ್ನೂರ, ಎಸ್‌.ಬಿ?ಅಯ್ಯಣ್ಣವರ, ನಾರಾಯಣ ಮೋರೆ, ಸುಭಾಷ ಚವ್ವಾಣ ಲಲಿತಾ ಹಿರೇಮಠ ಸಂಸ್ಥೆಯ ನಿರ್ಧೇಶಕರಾದ ವೀರುಪಾಕ್ಷಪ್ಪ ಬಗಾಡೆ, ಶಿವಾನಂದ ಹೊಸಮನಿ, ಶೇಖಣ್ಣ ಜೋಳದ, ಚಿನ್ನಪ್ಪ ಕುಂದಗೋಳ, ಮಲ್ಲಿಕಾರ್ಜುನ ಗೊಬ್ಬರಗುಂಪಿ, ಶಂಕರ ಅರ್ಕಸಾಲಿ, ನಾಗರಾಜ ಶಿಂಧೆ, ಸುಮಂಗಲಾ ಹೆಸರೂರ, ವಿಜಯಲಕ್ಷ್ಮೀ ಹೆಸರೂರ, ಅನೀತಾ ಗೊಬ್ಬರಗುಂಪಿ ಇತರರು ಇದ್ದರು  

ಸಂಸ್ಥೆಯ ಗೌರವಾಧ್ಯಕ್ಷ  ಕೊಟ್ರೇಶ ಮಾಸ್ತರ ಬೆಳಗಲಿ ಅಧ್ಯಕ್ಷತೆ ವಹಿಸಿದ್ದರು ಅಧ್ಯಕ್ಷ ಪಕ್ಕಿರೇಶ ಕೊಂಡಾಯಿ ಪ್ರಾಸ್ತಾವಿಕವಾಗಿ ಮಾತನಾಡಿದರು ನಿರ್ಧೇಶಕ ರಮೇಶ ಸಾತಣ್ಣವರ ಸ್ವಾಗತಿಸಿದರು, ಶರೀಫ ಮಾಕಪ್ಪನವರ ನಿರೂಪಿಸಿದರು ಶಿವಾನಂದ ಹೊಸಮನಿ ವಂದಿಸಿದರು ನಂತರ ಬಡವ ಬದುಕಲೇಬೇಕು ಎನ್ನುವ ನಾಟಕ ಪ್ರದರ್ಶನಗೊಂಡಿತು. 


ಸುದ್ದಿ ಓದಿ