ಉಕ್ರೇನ್ನಲ್ಲಿ ಮೃತಪಟ್ಟ ಕುಟುಂಬದವರಿಗೆ ಸಾಂತ್ವನ
ಲೋಕದರ್ಶನ ವರದಿ
ರಾಣಿಬೆನ್ನೂರ: ಮಾ.07 ಉಕ್ರೇನ್ನಲ್ಲಿ ಮೃತಪಟ್ಟ ತಾಲೂಕಿನ ಚಳಗೇರಿಯ ಮೃತ ಕುಟುಂಬದವರ ಮನೆಗೆ ಸಿರಿಗೇರಿಯ ತರಳಬಾಳು ಜಗದ್ಗುರು ಡಾ. ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳು ಭೇಟಿ ನೀಡಿ ಸಾಂತ್ವಾನ ಹೇಳಿದರು.
ಈ ದುರ್ಘಟನೆ ಅನೀರೀಕಿತ ಹಾಗೂ ಅಚ್ಚರಿ ಮೂಡಿಸಿತು. ದೇಶದಲ್ಲಿಯೇ ಓರ್ವ ಮಾತ್ರ ಭಾರತೀಯ ವೈದ್ಯಕೀಯ ವಿದ್ಯಾರ್ಥಿ ಉಕ್ರೇನ್ನಲ್ಲಿ ಸಾವನ್ನಪ್ಪಿರುವುದು ಬಹಳಷ್ಟು ನೋವು ತರುವ ಸಂಗತಿಯಾಗಿದೆ ಎಂದರು.
ಮೃತ ನವೀನನು ಪ್ರತಿಭಾವಂತನಾಗಿದ್ದು, ವೈದ್ಯಕೀಯ ವ್ಯಾಸಾಂಗ ಮುಗಿಸಿ ಹುಟ್ಟೂರಿನಲ್ಲಿಯೇ ಜನಸೇವೆ ಮಾಡಬೇಕೆಂಬ ಕನಸು ಕಂಡಿದ್ದ. ಆ ಕನಸು ನನಸಾಗಿಸಲು ತಂದೆ ಶೇಖರಗೌಡ ತಾಯಿ ವಿಜಯಲಕ್ಷ್ಮೀ ಬಹಳಷ್ಟು ಶ್ರಮಿಸಿದ್ದರು.
ಇಂತಹ ವಿದ್ಯಾರ್ಥಿಯ ಅಗಲಿಕೆಯನ್ನು ಸಹಿಸುವ ಶಕ್ತಿಯನ್ನು ನೀಡಲಿ. ಮೃತ ನವೀನನ ಆತ್ಮಕ್ಕೆ ಶಾಂತಿ ದೊರೆಯಲಿ ಎಂದು ಶ್ರೀಗಳು ಹೇಳಿದರು. ವಿ.ಬಿ.ಬಣಕಾರ, ಜಿ.ಜಿ.ಹೊಟ್ಟಿಗೌಡ್ರ, ಮಂಜುನಾಥ ಗೌಡಶಿವಣ್ಣನವರ, ಜೆಟ್ಟೆಪ್ಪ ಕರೇಗೌಡ್ರ, ವೀರನಗೌಡ ಪೋಲಿಸಗೌಡ್ರ, ಮಂಜಣ್ಣ ಲಿಂಗದಹಳ್ಳಿ ಸೇರಿದಂತೆ ಮತ್ತಿತರರು ಇದ್ದರು.