ಮನುಷ್ಯ ಜೀವನ ನಡೆಸಲು ಕಣ್ಣು ಮುಖ್ಯ: ವೀರಣ್ಣ
ಲೋಕದರ್ಶನ ವರದಿ
ರಾಣಿಬೆನ್ನೂರ 12: ಮನುಷ್ಯ ಜೀವನ ನಡೆಸಲು ಕಣ್ಣು ಮುಖ್ಯ ಅಂಗವಾಗಿದ್ದು. ಅಚಿಧತ್ವ ನಿವಾರಣೆ ಮಾಡುವುದು ಸಂಸ್ಥೆಯ ಉದ್ದೇಶವಾಗಿದೆ. ಈ ಶಿಬಿರದ ಸದುಪಯೊಗವನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದು ಲಯನ್ಸ ಕ್ಲಬ್ ಅಧ್ಯಕ್ಷ ಟಿ. ವೀರಣ್ಣ ಹೇಳಿದರು.
ನಗರ ಲಯನ್ಸ ಶಾಲೆಯಲ್ಲಿ ಶನಿವಾರ ಶ್ರೀಕಂಚಿ ಕಾಮಕೋಟಿ ಮೆಡಿಕಲ್ ಟ್ರಸ್ಟ ಶಂಕರ ಕಣ್ಣಿನ ಆಸ್ಪತ್ರೆ ಶಿವಮೊಗ್ಗ, ಲಯನ್ಸ ಕ್ಲಬ್ ರಾಣಿಬೆನ್ನೂರ, ಸ್ವಾಭಿಮಾನಿ ಕರ್ನಾಟಕ ರಕ್ಷಣಾ ಮೇದಿಕೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಅಂಧತ್ವ ನಿವಾರಣಾ ಸಂಸ್ಥೆ ಹಾವೇರಿ, ಜಿಲ್ಲಾ ನೇತ್ರ ಸಂಚಾರಿ ಘಟಕ ಹಾವೇರಿ ಇವರುಗಳ ಸಂಯುಕ್ತಆಶ್ರಯದಲ್ಲಿ ಉಚಿತ ನೇತ್ರ ತಪಾಸಣೆ ಮತ್ತು ಕಣ್ಣಿನ ಪೊರೆ ಶಸ್ತ್ರಚಿಕಿತ್ಸಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಲಯನ್ಸ ಸಂಸ್ಥೆಯ ವತಿಯಿಂದ 45 ವರ್ಷಗಳಿಂದ ಜನರ ಸೇವೆ ಮಾಡುತ್ತಾ ಬಂದಿದ್ದೇವೆ. ನೇತ್ರ ತಪಾಸಣೆ, ಕೃತಕ ಕಾಲು ಜೋಡಣೆ, ರಕ್ತದಾನ, ಉಚಿತ ಅನ್ನದಾಸೋಹ ಇಂತಹ ಹಲವಾರು ಸೇವೆಯನ್ನು ಮಾಡುತ್ತಾ ಬಂದಿದ್ದೇವೆ ಎಂದರು.
ಇದೇ ಸಂದರ್ಭದಲ್ಲಿ ದೇಶದ ಸೇನಾಧಿಕಾರಿ ಜನರಲ್ ಬಿಪಿನ್ ರಾವತ್ ಹಾಗೂ ಅವರ ಧರ್ಮ ಪತ್ನಿ ಮದುಲಿಕ ಹಾಗೂ 11 ಜನ ಸೇನಾ ಸಿಬ್ಬಂದಿಯವರು ಹೆಲಿಕಾಪ್ಟರ್‌ನಲ್ಲಿ ಹುತಾತ್ಮರಾದ ಪ್ರಯುಕ್ತ ಅವರಿಗೆ ಸಭೆಯಲ್ಲಿ ಮೌನಾಚರಣೆ ಮಾಡುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಶಿಬಿರದಲ್ಲಿ 150 ಶಿಬಿರಾರ್ಥಿಗಳ ನೇತ್ರ ತಪಾಸಣೆ ನಡೆಸಿ ಅದರಲ್ಲಿ 97 ಶಿಬಿರಾರ್ಥಿಗಳನ್ನು ಶಿವಮೊಗ್ಗದ ಶಂಕರ ಕಣ್ಣಿನ ಆಸ್ಪತ್ರೆಗೆ ಕಳಿಸಿಕೊಡಲಾಯಿತು.
ಎಮ್.ಎಸ್. ಅರಕೇರಿ, ಟಿ.ಸಿ. ಪಾಟೀಲ, ರಾಜು ಅಡಿವೆಪ್ಪನವರ, ಶಿವಪ್ಪ ಗುರಿಕಾರ, ಜಯಣ್ಣ ಮುಚಡಿ, ಕೊಟ್ರಶಪ್ಪ ಯಮ್ಮಿ, ನಿತ್ಯಾನಚಿದ ಕುಂದಾಪುರ, ಪ್ರಭಲಿಂಗಪ್ಪ ಹಲಗೇರಿ, ಗುತ್ತೇಪ್ಪ ಹಳೇಮನಿ, ಉಮಾ ಮುದಗಲ್‌ಮಠ, ಜೆ.ಎಮ್ ಬಿದರಿ, ಆರ್. ವಿ. ಸುರಗೊಂಡ ಸೇರಿದಂತೆ ಮತ್ತಿತರರು ಇದ್ದರು.