ರಾಣೆಬೆನ್ನೂರ

ರಾಣೇಬೆನ್ನೂರಲ್ಲಿ ವಿಧಾನ ಪರಿಷತ್ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ಆರಂಭ.

ರಾಣೇಬೆನ್ನೂರಲ್ಲಿ ವಿಧಾನ ಪರಿಷತ್ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ಆರಂಭ.

ಲೋಕದರ್ಶನ ವರದಿ 


ರಾಣೆಬೆನ್ನೂರ 04: ಭಾರತೀಯ ಜನತಾ ಪಕ್ಷ ದೇಶದ ಸಮಗ್ರ ರಕ್ಷಣೆಯ ಜೊತೆಗೆ ಎಲ್ಲ ಸಮುದಾಯದ ಹಿತವನ್ನು ಬಯಸುತ್ತಾ ತನ್ನ ಜನಪ್ರೀಯತೆ ಪಡೆದು ಇಂದು ಕೇಂದ್ರ ಮತ್ತು ರಾಜ್ಯ ಸರ್ಕಾರ ಜನಪರ ಯೋಜನೆಗಳನ್ನು ಜಾರಿಗೂಳಿಸಿ ಉತ್ತಮ ಕಾರ್ಯ ಮಾಡುತ್ತಲಿರುವುದರಿಂದಲೇ  ಇಂದು ಸರ್ವ ಸಮುದಾಯವು ಬಿಜೆಪಿಯತ್ತ ಮುಖ ಮಾಡುತ್ತಿದ್ದಾರೆ ಎಂದು ವಿಧಾನ ಪರಿಷತ್ ಕ್ಷೇತ್ರದ ಚುನಾವಣಾ ಅಭ್ಯರ್ಥಿ ಪ್ರದೀಪ ಶೆಟ್ಟರ್ ಹೇಳಿದರು. 

   ಅವರು ಶುಕ್ರವಾರ ನಗರದ ಮೃತ್ಯುಂಜಯ ಕಲ್ಯಾಣಮಂಟಪದಲ್ಲಿ  ಕ್ಷೇತ್ರ ಪ್ರಚಾರ ಕಾರ್ಯದಲ್ಲಿ ಪಾಲ್ಗೂಂಡಿದ್ದ ಶೆಟ್ಟರ್ ಮಾಧ್ಯಮ ಗೋಷ್ಠಿಯಲ್ಲಿ ಚುನಾವಣೆ ಕುರಿತು ಮಾನಾಡಿದರು. ಗ್ರಾಮೀಣ ಪ್ರದೇಶಗಳ ಮತ್ತು ಪಂಚಾಯತಿಗಳ ಸಮಗ್ರ ಅಭಿವೃದ್ದಿ ಹೂಂದಬೇಕಾದರೆ ಈ ಚುನಾವಣೆ ಬಹು ಮುಖ್ಯ ಪಾತ್ರ ವಹಿಸುತ್ತವೆ. ಈ ಚುನಾವನೇಯಿಂದಲೇ ಭವಿಷ್ಯದಲ್ಲಿ ಬರುವ ವಿಧಾನ ಸಭಾ ಕ್ಷೇತ್ರ ಚುನಾವಣೆ ನಿರ್ಣಾಯಕ ಪಾತ್ರ ವಹಿಸಲಿದೆ ಎಂದ ಅವರು ಬಿಜೆಪಿ ದೇಶದ ಸಮಗ್ರ ಅಭಿವೃದ್ದಿಗೆ ಪಣ ತೂಟ್ಟಿದೆ, ಸದಸ್ಯರು ಯಾವುದೇ ಆಶೆ ಅಮಿಶಗಳಿಗೆ ಬಲಿಯಾಗದೆ ಅಭ್ಯರ್ಥಿಯ ಚಿತ್ರದ ಮುಂದೆ ಅಂಕಿಯನ್ನು ನಮೂದಿಸಿ ಗೆಲುವಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.  

    ಮಾಧ್ಯಮ ಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ಮಹೇಶ ತೆಂಗಿನಕಾಯಿ, ಆರ್‌.ಶಂಕರ್, ಅರುಣಕುಮಾರ ಪೂಜಾರ, ಸಿದ್ದರಾಜ ಕಲಕೋಟಿ, ಚೋಳಪ್ಪ ಕಸವಾಳ, ಡಾಽಽ ಬಿ.ಎಸ್ ಕೇಲಗಾರ, ದೀಪಕ್ ಹರಪನಹಳ್ಳಿ, ಪವನ ಮಲ್ಲಾಡದ, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. 


ಸುದ್ದಿ ಓದಿ