ಕಾಗವಾಡ

ಸನ್ಮತಿ ಸಮಿತಿಯ ಶೈಕ್ಷಣಿಕ ಸೇವೆ ನಿಜಕ್ಕೂ ಶ್ಲಾಘನೀಯ: ರವೀಂದ್ರ ನಾಂದ್ರೆ

ಸನ್ಮತಿ ಸಮಿತಿಯ ಶೈಕ್ಷಣಿಕ ಸೇವೆ ನಿಜಕ್ಕೂ ಶ್ಲಾಘನೀಯ: ರವೀಂದ್ರ ನಾಂದ್ರೆ

ಲೋಕದರ್ಶನ ವರದಿ 

ಸನ್ಮತಿ ಶಿಕ್ಷಣ ಸಹಕಾರಿ ಸಮಿತಿಯ ವಾರ್ಷಿಕ ಸ್ನೇಹ ಸಮ್ಮೇಳನ, ಸತ್ಕಾರ ಸಮಾರಂಭ 

ಕಾಗವಾಡ 14: ಶೈಕ್ಷಣಿಕವಾಗಿ ಶೇಡಬಾಳ ಪಟ್ಟಣದ ಕೀರ್ತಿಯನ್ನು ರಾಜ್ಯ, ದೇಶ ಮಟ್ಟದಲ್ಲಿ ಪಸರಿಸುವಲ್ಲಿ ಸನ್ಮತಿ ಶಿಕ್ಷಣ ಸಹಕಾರಿ ಸಮಿತಿಯ ಪಾತ್ರ ಬಹಳ ಪ್ರಮುಖವಾಗಿದ್ದು, ಇಲ್ಲಿ ಕಲಿತ ವಿದ್ಯಾರ್ಥಿಗಳು ಇಂದು ದೇಶ-ವಿದೇಶಗಳಲ್ಲಿ ಉನ್ನತ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿರುವುದೇ ಇದಕ್ಕೆ ಸಾಕ್ಷಿಯಾಗಿದೆ ಎಂದು ಕಾಗವಾಡ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಬಿಆರ್‌ಪಿ ರವೀಂದ್ರ ನಾಂದಣಿ ಅಭಿಪ್ರಾಯ ಪಟ್ಟಿದ್ದಾರೆ. 

ಅವರು, ಶನಿವಾರ ದಿ. 14 ರಂದು ಪಟ್ಟಣದ ಸನ್ಮತಿ ಶಿಕ್ಷಣ ಸಹಕಾರಿ ಸಮಿತಿಯ ಸನ್ಮತಿ ವಿದ್ಯಾಲಯದ ವಾರ್ಷಿಕ ಸ್ನೇಹ ಸಮ್ಮೇಳನ ಮತ್ತು ಸತ್ಕಾರ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು, ಸನ್ಮಾನ ಸ್ವೀಕರಿಸಿ, ಮಾತನಾಡುತ್ತಿದ್ದರು. ಇಂದು ಶೇಡಬಾಳ ಪಟ್ಟಣದ ಪ್ರತಿ ಮನೆಯಲ್ಲಿಯೂ ಕನಿಷ್ಠ ಒಬ್ಬರಾರದರೂ ಪದವೀಧರಾಗಿದ್ದಾರೆ. ಮತ್ತು ಉನ್ನತ ಹುದ್ದೆಯಲ್ಲಿದ್ದಾರೆ ಎಂದರೇ ಅದಕ್ಕೆ ಸನ್ಮತಿ ಶಿಕ್ಷಣ ಸಮಿತಿಯೇ ಕಾರಣವಾಗಿದ್ದು, ಇದೇ ಶಾಲೆಯಲ್ಲಿ ನಾನೂ ಕೂಡಾ ಶಿಕ್ಷಣ ಪಡೆದುಕೊಂಡಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು. 

ಇನ್ನೋರ್ವ ಅತಿಥಿ ಅಜೀಮ ಪ್ರೇಮಜಿ ಫೌಂಡೇಶನ್‌ನ ಬಾಗಲಕೋಟೆ ಜಿಲ್ಲಾ ಸಂಸ್ಥೆಯ ಸಂಪನ್ಮೂಲ ವ್ಯಕ್ತಿ ಶೀತಲ ಮಾಲಗಾಂವೆ ಮಾತನಾಡಿ, ಸನ್ಮತಿ ಶಿಕ್ಷಣ ಸಂಸ್ಥೆಯು ಕಳೆದ 75 ವರ್ಷಗಳಿಂದ ಈ ಭಾಗದ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತ, ಶಿಕ್ಷಣ ಕ್ರಾಂತಿಯನ್ನೇ ಮಾಡಿದೆ ಎಂದರು. 

ಅಧ್ಯಕ್ಷತೆಯನ್ನು ಸನ್ಮತಿ ವಿದ್ಯಾಲಯದ ಚೇರಮನ್ ಸನ್ಮತಿ ಪಾಟೀಲ ವಹಿಸಿದ್ದರು. ಕಾರ್ಯಕ್ರಮವನ್ನು ಗಣ್ಯರು ಸರಸ್ವತಿ ದೇವಿ ಭಾವಚಿತ್ರದ ಪೂಜೆಯೊಂದಿಗೆ ದೀಪ ಬೆಳಗಿಸಿ, ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಗಣ್ಯರನ್ನು, ದಾನಿಗಳನ್ನು ಮತ್ತು ಶೈಕ್ಷಣಿಕ ವರ್ಷದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು  ಸನ್ಮಾನಿಸಲಾಯಿತು. ಅನೇಕ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ತಮ್ಮ ಅನಿಸಿಕೆ ಹಂಚಿಕೊಂಡರು. 

ಈ ವೇಳೆ ಎಸ್‌ಎಸ್‌ಎಸ್ ಸಮಿತಿಯ ಅಧ್ಯಕ್ಷ ವಿನೋದ ಬರಗಾಲೆ, ಉಪಾಧ್ಯಕ್ಷ ಅಜೀತ ನಾಂದ್ರೆ, ಆಡಳಿತ ಮಂಡಳಿಯ ಸದಸ್ಯರಾದ ಡಾ. ಅಶೋಕ ಪಾಟೀಲ, ಆರ್‌.ವಿ. ಸಂಗೋರಾಮ, ಅಶ್ವತ ಪಾಟೀಲ, ನೇಮಗೌಡಾ ಪಾಟೀಲ, ಯಶವಂತ ಬಾಧದ, ರಾಜು ಘೇನಪ್ಪಗೋಳ, ಮಹಾವೀರ ಪಾಟೀಲ, ಕುಮಾರ ಮಾಲಗಾಂವೆ, ಅಕ್ಕಾತಾಯಿ ಮುಜಾವರ, ಸುನೀತಾ ಮಾಕನ್ನವರ, ಮುಖಂಡ ಅಶೋಕ ಯಂದಗೌಡರ,  

ಮುಖ್ಯಾದ್ಯಾಪಕಿ ಎಂ.ಎನ್‌. ಕಾಳೇನಟ್ಟಿ, ಪಪೂ ಮಹಾವಿದ್ಯಾಲಯದ ಪ್ರಾಚಾರ್ಯ ಬಾಹುಬಲಿ ಬಣಜಿಗವಾಡೆ ಸೇರಿದಂತೆ ಎಲ್ಲ ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿ ವರ್ಗದವರು, ಪಾಲಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು, ಎಂ.ಎನ್‌. ಕಾಳೇನಟ್ಟಿ ಸ್ವಾಗತಿಸಿದರು. ಶಾಲಾ ವಿದ್ಯಾರ್ಥಿಗಳು ನಿರೂಪಿಸಿದರು. 


ಸುದ್ದಿ ಓದಿ