ಶಿಗ್ಗಾವ್

ಮಾದಕ ವಸ್ತುಗಳ ಬಹಿಷ್ಕಾರ ಕಾರ್ಯಕ್ರಮ

ಮಾದಕ ವಸ್ತುಗಳ ಬಹಿಷ್ಕಾರ ಕಾರ್ಯಕ್ರಮ


ಲೋಕದರ್ಶನ ವರದಿ 

ಶಿಗ್ಗಾವಿ 04: ಪಟ್ಟಣದ ರಂಭಾಪುರಿ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ "ಮಾದಕ ವಸ್ತುಗಳ  ಬಹಿಷ್ಕಾರ" ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತ್ತು. 

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಶಿಗ್ಗಾವಿಯ ಪಿಎಸ್‌ಐ ಸಂತೋಷಕುಮಾರ ಪಾಟೀಲ್, ಇಂದಿನ ಯುವಕ ಯುವತಿಯರು ಮಾದಕ ವಸ್ತುಗಳಿಂದ  ಮೋಹ ಗೊಂಡು ತಮ್ಮ ಭವ್ಯ ಭವಿಷ್ಯದ ಹಾದಿಗೆ ತಾವೇ ಕಲ್ಲು ಹಾಕಿಕೊಳ್ಳುತ್ತಿದ್ದಾರೆ, ಅಲ್ಲದೇ ಪರವಾನಿಗೆ ಇಲ್ಲದೆ ವಾಹನ ಚಲಾಯಿಸುವುದು, ಹಾಗೂ ಅಲ್ಪ ವಯಸ್ಸಿನಲ್ಲಿ ಇಂತಹ ಅಪರಾಧ ಚಟುವಟಿಕೆಗಳಲ್ಲಿ ಭಾಗವಹಿಸುವುದು ಅಕ್ಷಮ್ಯ ಅಪರಾಧ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. 

ಕಾರ್ಯಕ್ರಮದಲ್ಲಿ ಪ್ರೋ. ಎಮ್ ಎಸ್ ಸಿದ್ದಪ್ಪನವರ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ ಎಸ್ ವ್ಹಿ ಬಳೆಗಾರ, ಪ್ರೊ ಎಸ್ ವ್ಹಿ ಕುಲಕರ್ಣಿ, ಪ್ರೊ ಶಿವಯ್ಯ ಪೂಜಾರ, ಪ್ರೊ ಎಮ್ ಎಸ್ ಸಂಗಣ್ಣನವರ, ಪ್ರೊ ಎಸ್ ಎನ್ ತೀರ್ಥ, ಬಿ ಸಿ ಹೊನ್ನಣ್ಣವರ, ಎಮ್ ಎನ್ ಹುಣಸಿಕಟ್ಟಿ, ಮಲ್ಲೇಶಿ ಭೇಟಿ ಸೇರಿದಂತೆ ಬೋಧಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. 


ಸುದ್ದಿ ಓದಿ