ಚಿಕ್ಕೋಡಿ

ವೈದ್ಯಕೀಯ ಸೇವೆ ನೀಡುತ್ತಿರುವ ಡಾ. ಎಂ.ಬಿ. ಕುಂಬಾರ ಸೇವೆ ಸಮಾಜಮುಖಿ: ಸತೀಶ ಜಾರಕಿಹೊಳಿ

ವೈದ್ಯಕೀಯ ಸೇವೆ ನೀಡುತ್ತಿರುವ ಡಾ. ಎಂ.ಬಿ. ಕುಂಬಾರ ಸೇವೆ ಸಮಾಜಮುಖಿ: ಸತೀಶ ಜಾರಕಿಹೊಳಿ

ವೈದ್ಯಕೀಯ ಸೇವೆ ನೀಡುತ್ತಿರುವ ಡಾ. ಎಂ.ಬಿ. ಕುಂಬಾರ ಸೇವೆ ಸಮಾಜಮುಖಿ: ಸತೀಶ ಜಾರಕಿಹೊಳಿ

ಲೋಕದರ್ಶನ ವರದಿ

ಚಿಕ್ಕೋಡಿ 04: ಕಳೆದ ಮೂರು ದಶಕಗಳಿಂದ ವೈದ್ಯಕೀಯ ಸೇವೆ ನೀಡುತ್ತಿರುವ ನಾಗರಮುನ್ನೋಳ್ಳಿ ಪಾಂಡುರಂಗ ಆಸ್ಪತ್ರೆಯ ವೈದ್ಯ ಡಾ. ಎಂ.ಬಿ.ಕುಂಬಾರ ಸೇವೆ ಸಮಾಜಮುಖಿಯಾಗಿದೆ ಎಂದು ಕೆಪಿಸಿಸಿ ಕಾರ‍್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.

ಶನಿವಾರ ತಾಲೂಕಿನ ನಾಗರಮುನ್ನೋಳ್ಳಿ ಪಾಂಡುರಂಗ ಆಸ್ಪತ್ರೆಗೆ ಭೇಟಿ ನೀಡಿದ ಬಳಿಕ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಪಾಂಡುರಂಗ ಆಸ್ಪತ್ರೆಯ ವೈದ್ಯ ಕುಂಬಾರ ಅವರು ಗ್ರಾಮೀಣ ಪ್ರದೇಶದಲ್ಲಿ ಹಲವು ವರ್ಷಗಳಿಂದ ಪಾರ್ಶ್ವವಾಯು ರೋಗಿಗಳಿಗೆ ಚಿಕಿತ್ಸೆ ನೀಡುವ ಮೂಲಕ ಬಡ ಜನರಿಗೆ ಉತ್ತಮ ಆರೋಗ್ಯ ಸೇವೆ ನೀಡುತ್ತಾ ಬಂದಿರುವ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದರು.

ಕೋವಿಡ್ ಸಂದರ್ಭದಲ್ಲಿ ನುರಿತ ವೈದ್ಯರೊಂದಿಗೆ ಸೋಂಕಿತರ ಸೇವೆಯಲ್ಲಿ ತೊಡಗಿಕೊಂಡು ಆರೋಗ್ಯ ಚಿಕಿತ್ಸೆ ನೀಡಿದ್ದಾರೆ. ಬಡ ಜನರ ಕಡೆಯಿಂದ ಹೆಚ್ಚು ಹಣ ತೆಗೆದುಕೊಳ್ಳದೇ ಮಾನವೀಯತೆ ಆಧಾರದ ಮೇಲೆ ಚಿಕಿತ್ಸೆ ನೀಡಿದ್ದಾರೆ ಎಂಬುದನ್ನು ನಾನು ಕೇಳಿದ್ದೇ, ಇಂದು ಪ್ರತ್ಯೇಕ್ಷವಾಗಿ ನೋಡಿ ತಿಳಿದುಕೊಂಡಿರುವುದು ಸಂತಸ ತಂದಿದೆ ಎಂದರು.

ಗ್ರಾಪಂ ಮಾಜಿ ಅಧ್ಯಕ್ಷ ಸಿದ್ದಪ್ಪ ಮರ‍್ಯಾಯಿ ಮಾತನಾಡಿ, ಕುಂಬಾರ ಆಸ್ಪತ್ರೆಯಿಂದ ನಾಗರಮುನ್ನೋಳ್ಳಿ ನಾಲ್ಕು ರಾಜ್ಯದಲ್ಲಿ ಗುರ್ತಿಸಿಕೊಂಡಿದೆ. ಲಕ್ವಾ ರೋಗಿಗಳಿಗೆ ಚಿಕಿತ್ಸೆ ನೀಡುವ ಡಾ, ಕುಂಬಾರ ಅವರು ಪಾಂಡರಂಗನ ಭಕ್ತರಾಗಿದ್ದುಕೊಂಡು ಚಿಕಿತ್ಸೆ ನೀಡುತ್ತಾ ಲಕ್ಷಾಂತರ ಜನರ ಆರೋಗ್ಯ ಸುಧಾರಿಸಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಮಾಜಿ ಸಚಿವ ವೀರಕುಮಾರ ಪಾಟೀಲ, ಲಕ್ಷ್ಮಣರಾವ ಚಿಂಗಳೆ, ಮಹಾವೀರ ಮೋಹಿತೆ, ಎಚ್.ಎಸ್.ನಸಲಾಪೂರೆ, ವೈದ್ಯ ಡಾ, ಎಂ.ಬಿ.ಕುಂಬಾರ,  ವಿನಾಯಕ ಕುಂಬಾರ, ರಾಜು ಕುಂಬಾರ, ಬಸು ಕುಂಬಾರ, ಶರಾವತಿ ಕುಂಬಾರ  ಮುಂತಾದವರು ಇದ್ದರು.

ಸುದ್ದಿ ಓದಿ