ಜಿಲ್ಲಾ ಉಸ್ತುವಾರಿ ಸಚಿವರ ಮಾತಿಗೂ ಬೆಲೆ ಕೊಡದ ಕಾಖರ್ಾನೆಗಳು

ಜಿಲ್ಲಾ ಉಸ್ತುವಾರಿ ಸಚಿವರ ಮಾತಿಗೂ ಬೆಲೆ ಕೊಡದ ಕಾಖರ್ಾನೆಗಳು

ಬಳ್ಳಾರಿ 29: ಜಿಲ್ಲೆಯ ಜಿಂದಾಲ್ ಉಕ್ಕು ಕಾಖರ್ಾನೆ ಸೇರಿದಂತೆ ಇತರ ಕಾಖರ್ಾನೆಗಳಲ್ಲಿ ಉತ್ಪಾಧಿಸುವ ವಸ್ತುಗಳ ಸಾಗಾಣಿಕೆಯಲ್ಲಿ ಸ್ಥಳಿಯ ಲಾರಿ ಮಾಲಿಕರಿಗೆ ಆಧ್ಯತೆ ನೀಡದಿದ್ದರೇ ಡಿ.15ರೊಳಗೆ ಸರಕು, ಸಾಗಾಣಿಕೆ ಬಂದ್ ಮಾಡುವುದಾಗಿ ಲಾರಿ ಮಾಲಿಕರ ಸಂಘದ ಅಧ್ಯಕ್ಷ ಜಿ.ವಿಜಯಬಾಸ್ಕರ್ ರೆಡ್ಡಿ ಕರೆ ನೀಡಿದ್ದಾರೆ. 

ಈ ಕುರಿತು ಪತ್ರಿಕಾಭವನದಲ್ಲಿ ಸುದ್ದಿಗೋಷ್ಟಿ ನಡೆಸಿ ಜಿಲ್ಲೆಯ ಸ್ಪಾಂಜ್ಐರನ್ಓರ್, ಜಿಂದಾಲ್ ಉಕ್ಕು ಕಾಖರ್ಾನೆ, ಸಿಮೆಂಟ್ ಕಾಖರ್ಾನೆ, ಮೊದಲಾದ ಕಾಖರ್ಾನೆಗಳಲ್ಲಿ ಆರಂಭದಲ್ಲಿ ಸ್ಥಳಿಯ ಲಾರಿಗಳಿಗೆ ಪ್ರತೀ ತಿಂಗಳು 10 ರಿಂದ 12 ಲೋಡ್ ಸಾಗಿಸಲು ಅವಕಾಶ ನೀಡುತ್ತಿದ್ದರು. ಆದರೆ ಕೆಲ ವರ್ಷಗಳಿಂದ ಅದರ ಪ್ರಮಾಣ ಕಡಿಮೆಯಾಗಿದೆ. ಕಳೆದ 9 ತಿಂಗಳಿಂದ ಈ ಪ್ರಮಾಣವನ್ನು 3 ರಿಂದ 4 ಲೋಡ್ಗಳಿಗೆ ಇಳಿಸಿದ್ದಾರೆ. ಸ್ಥಳಿಯ ಕಾಖರ್ಾನೆಗಳನ್ನು ನಂಬಿ ಲಾರಿ ಮಾಲಿಕರು 30 ರಿಂದ 40 ಲಕ್ಷ ರೂಗಳನ್ನು ನೀಡಿ ಲಾರಿಗಳನ್ನು ಖರೀದಿ ಮಾಡಲಾಗಿದೆ. 

ಆದರೆ ಈಗ ನೀಡುತ್ತಿರುವ ಕೆಲವೇ ಲೋಡ್ಗಳಿಂದ ಬ್ಯಾಂಕುಗಳಿಗೆ ಲಾರಿ ಖರೀದಿಸಿದ ಕಂತುಗಳನ್ನು ಕಟ್ಟಲು ಸಾಲುತ್ತಿಲ್ಲ ಎಂದರು. ಕಾಖರ್ಾನೆಗಳಲ್ಲಿ ಹೊರ ರಾಜ್ಯದ ಲಾರಿಗಳಿಗೆ ಮಾತ್ರ ಹೆಚ್ಚಿನ ಆಧ್ಯತೆ ನೀಡಲಾಗುತ್ತಿದೆ ಎಂದು ಆರೋಪಿಸಿದರು. ಏಕೆಂದರೆ ಈ ಹಿಂದೆ ಜಿಂದಾಲ್ ಕಾಖರ್ಾನೆಯ ಉಪಾಧ್ಯಕ್ಷ ಡಾ|| ವಿನೋದ್ ನಾವೆಲ್ ಅವರಿಗೆ ಸೆ.12ರಂದು ಸಭೆ ನಡೆಸಿ ಮನವಿ ಪತ್ರವನ್ನು ನೀಡಿದ್ದೇವು. ಅದಕ್ಕೆ ಅವರು  ನಿಮಗೆ ಸಹಕಾರ ನೀಡುತ್ತೇವೆ ಎಂಬುವ ಬರವಸೆಯನ್ನು ನೀಡಿದ್ದರು. ಅಂತಯೇ ಜಿಲ್ಲಾ ಉಸ್ತುವಾರಿ ಸಚಿವ ಡಿಕೆ.ಶಿವಕುಮಾರ ಕೆಲದಿನಗಳ ಹಿಂದೆ ಜಿ.ಪಂ ನಲ್ಲಿ ಕೆಡಿಪಿ ಸಭೆಯಲ್ಲಿ ಕಾಖರ್ಾನೆ ಮಾಲಿಕರನ್ನು ಕರೆಸಿ ಸಹಕಾರ ನೀಡುವಂತೆ ತಿಳಿಸಿದ್ದರೂ ಇಲ್ಲಿಯವರೆಗೆ ಅವರ ಮಾತಿಗೆ ಯಾವೊಬ್ಬ ಕಾಖರ್ಾನೆಗಳ ಮುಖ್ಯಸ್ಥರು ಬೆಲೆ ನೀಡುತ್ತಿಲ್ಲ ಎಂದು ಆರೋಪಿಸಿದರು. 

ಕಾಖರ್ಾನೆಗಳನ್ನು ನಂಬಿ ಸಾವಿರಾರೂ ಲಾರಿಗಳು ಬೀದಿಗೆ ಇಳಿದಿವೆ. ಆದ ಕಾರಣ ಬರುವ ಡಿ.15ರೊಳಗಡೆ ನಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗದಿದ್ದಲ್ಲಿ ಜಿಲ್ಲೆಯ ಎಲ್ಲಾ ಕಾಖರ್ಾನೆಗಳ ಮುಂದೆ ಉಗ್ರ ಹೋರಾಟ ನಡೆಸಿ ಪ್ರತಿಭಟನೆ ನಡೆಸಿ ಸರಕು, ಸಾಗಾಣಿಕೆ ಬಂದ್ ಮಾಡಲು ನಿಶ್ಚಸಿದ್ದೇವೆ ಎಂದರು. ಈ ಸಂದರ್ಭದಲ್ಲಿ ಗೌರವಾಧ್ಯಕ್ಷ ರವಿಂದ್ರನಾಥ್ ಕಾರ್ಯದಶರ್ಿ ಎಂ.ಎಸ್ ಬಸವರಾಜ, ಖಜಾಂಚಿ ಪ್ರವಿಣಕುಮಾರ, ಸಲೆಹೆಗಾರ ಟಿ.ನರಸಿಂಹಲು ಸೇರಿದಂತೆ ನೂರಾರು ಜನ ಲಾರಿ ಮಾಲಿಕರು ಪತ್ರಿಕಾಗೋಷ್ಟಿಯಲ್ಲಿ ಭಾಗವಹಿಸಿದ್ದರು. 

ಸುದ್ದಿ ಓದಿ