ಮಿಲ್ಲರಪೇಟೆಯ ಮುಖ್ಯರಸ್ತೆ ದುರಸ್ಥಿಗೆ ಜಿಲ್ಲಾಡಳಿತ ನಿರ್ಲಕ್ಷ್ಯ

ಮಿಲ್ಲರಪೇಟೆಯ ಮುಖ್ಯರಸ್ತೆ ದುರಸ್ಥಿಗೆ ಜಿಲ್ಲಾಡಳಿತ ನಿರ್ಲಕ್ಷ್ಯ

 ಬಳ್ಳಾರಿ,ಡಿ.11: ದೊಡ್ಡ-ದೊಡ್ಡ ವಾಹನಗಳು, ಕಾರುಗಳಲ್ಲಿ ಸಂಚರಿಸುವ ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ಮಿಲ್ಲರಪೇಟೆಯ ಮುಖ್ಯರಸ್ತೆ ದುರಸ್ಥಿ ಕಾಣದೇ ಹಲವಾರು ವರ್ಷಗಳಾಗಿವೆ. 

ಈ ರಸ್ತೆಯ ಗುಂಡಿ ದೂಳಿನಿಂದ ನಡೆದುಕೊಂಡು ಹೋಗುವ ಸಾರ್ವಜನಿಕರಿಗೆ (ಪಾದಚಾರಿಗಳಿಗೆ), ದ್ವಿಚಕ್ರವಾಹನದಲ್ಲಿ ಓಡಾಡುವ ಸವಾರರಿಗೆ ದಿನನಿತ್ಯ ಸಂಕಷ್ಟದಲ್ಲಿ ಹೋಗಬೇಕಾಗಿದೆ. ಇದು ಜಿಲ್ಲಾಡಳಿತಕ್ಕೆ ಅರ್ಥವಾಗುತ್ತಿಲ್ಲ ಎಂದು ಕಮಚರ್ೆಡು ಮಠದ ಕಲ್ಯಾಣಸ್ವಾಮಿ ಆಕ್ರೋಶ ವ್ಯೆಕ್ತ ಪಡಿಸಿದರು. ಕನರ್ಾಟಕ ಜನಸೈನ್ಯ ಸಂಘಟನೆಯಿಂದ ನಗರದ ಮಿಲ್ಲರಪೇಟೆಯ ಮುಖ್ಯರಸ್ತೆ ದುರಸ್ಥಿಗಾಗಿ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆ ಧರಣಿಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ಕಳೆದ ಎರಡು ವರ್ಷಗಳಿಂದ ಅಂಜೀನಪ್ಪ ಜಿನ್ನಿಂದ ಅಂದ್ರಾಳ ಸರ್ಕಲ್ವರೆಗೆ ರಸ್ತೆಗೆ ಸಂಬಂಧಪಟ್ಟ ಪಾಲಿಕೆಯಾಗಲಿ, ಲೋಕೊಪಯೋಗಿ ಇಲಾಖೆಯಾಗಲಿ ಈ ಹಾಳಾಗಿರುವ ರಸ್ತೆ ಗುಂಡಿಗಳನ್ನು ಮುಚ್ಚಲು ಮುಂದಾಗಿಲ್ಲ. ಇದರಿಂದಾಗಿ ರಸ್ತೆಯಲ್ಲಿ ಓಡಾಡುವ ಜನಸಾಮಾನ್ಯರಿಗೆ ತೀರ್ವ ಸಂಕಷ್ಟ ವದಗಿಬಂದಿದೆ. ರಸ್ತೆ ಅಕ್ಕ, ಪಕ್ಕದಲ್ಲಿರುವ ಅಂಗಡಿ, ಮಳಿಗೆ, ಮನೆಗಳ ನಿವಾಸಿಗಳಿಗೆ ದೂಳಿನಿಂದಾಗಿ ಹಲವಾರು ರೋಗ, ರುಜಿಗಳಿಂದ ಬಳಲುವಂತ ಸ್ಥಿತಿ ವದಗಿಬಂದಿದೆ. ಈ ಬಗ್ಗೆ ಈಗಾಗಲೇ ಅನೇಕ ಬಾರಿ ಹೋರಾಟ ನಡೆಸಿದ್ದರೂ ದುರಸ್ಥಿ ಮಾಡಿಸಿವುದಾಗಿ ಸುಳ್ಳು ಬರವಷೆಗಳನ್ನು ನೀಡುವ ಅಧಿಕಾರಿಗಳು ಪುನಹ ಆ ರಸ್ತೆಕಡೆ ತಿರುಗಿ ನೋಡಿಲ್ಲ ಎಂದು ಆರೋಪಿಸಿದರು. ರಸ್ತೆಗಳ ಅಭಿವೃದ್ದಿಗೆ ಅಧಿಕಾರಿಗಳು ಪ್ರತಮ ಆಧ್ಯತೆ ನೀಡಕಬೇಕೆಂದು ಆಗ್ರಹ ಪಡಿಸಿದರು. ಈ ಸಂಘಟನೆಯ ಸಂಸ್ಥಾಪಕ ರಾಜ್ಯಧ್ಯಕ್ಷ ಕೆ.ಯರಿಸ್ವಾಮಿ ಮಾತನಾಡಿ ನಮ್ಮ ಸಂಘಟನೆ ಈ ಸಮಸ್ಯೆಯ ವಿರುದ್ದ ಹೋರಾಟ ಹಮ್ಮಿಕೊಂಡಿದ್ದು ಭಗೆಹರಿಯುವರೆಗೂ ಹೋರಾಟ ಮುಂದುವರೆಸಲಿದ್ದೇವೆ ಎಂದು ಹೇಳಿದರು. 

ಈ ಪ್ರತಿಭಟನೆಯಲ್ಲಿ ಸಂಘಟನೆಯ ಮುಖಂಡರುಗಳಾದ ಹೆಚ್.ರಾಜೇಶ್, ರವಿತೇಜ, ಹೊನ್ನುರುಸ್ವಾಮಿ, ರಾಜಸಿಂದುಗೌಡ, ಚಂಚಯ್ಯ, ಹಾರೂನ್ ಭಾಷಾ, ಫವನ್ ರೆಡ್ಡಿ, ಲಕ್ಷ್ಮಿನಾರಾಯಣ, ಫಾರೂಖ್, ಶ್ರೀನಿವಾಸ್, ರಾಧಾಕೃಷ್ಣ, ಗಣೇಶ್, ದಾದು, ಸೇರಿದಂತೆ ನೂರಾರು ಜನ ಸಂಘಟನಾಕಾರರು ಈ ಪ್ರತಿಭಟನೆಯಲ್ಲಿ ಭಾಗವಹಿಸಿ ಘೊಷಣೆಗಳನ್ನು ಕೂಗುತ್ತಿದ್ದರು.


 

ಸುದ್ದಿ ಓದಿ