ರಾಣೆಬೆನ್ನೂರ

ತಾಲೂಕಿನ ಅಭಿವೃದ್ಧಿಗೆ ಎಂದಿಗೂ ಹಿನ್ನಡೆ ಸಾಧ್ಯವಿಲ್ಲ: ಅರುಣಕುಮಾರ

ತಾಲೂಕಿನ ಅಭಿವೃದ್ಧಿಗೆ ಎಂದಿಗೂ ಹಿನ್ನಡೆ ಸಾಧ್ಯವಿಲ್ಲ: ಅರುಣಕುಮಾರ

ರಾಣೇಬೆನ್ನೂರ 21: ತಾಲೂಕಿನ ಸರ್ವಾಂಗೀಣ ಅಭಿವೃದ್ದಿಗೆ ಕಂಕಣಬದ್ದನಾಗಿದ್ದು, ಪ್ರಾಮಾಣಿಕ ಸೇವೆ ಮಾಡುವ ಮೂಲಕ ಈ ಕ್ಷೇತ್ರವನ್ನು ಮಾದರಿಯನ್ನಾಗಿಸುವ ಹಂಬಲವೂ ಸಹ ನನಗಿದ್ದು, ಉಳಿದಿರುವ ಒಂದೂವರೆ ವರ್ಷದಲ್ಲಿ ಉತ್ತಮ ಕಾರ್ಯ ಮಾಡಲು ಮುಂದಾಗಿದ್ದು, ಇದಕ್ಕೆ ಸಮಸ್ತ ನಾಗರೀಕರ ಸಹಕಾರ ಅತ್ಯವಶ್ಯಕವಾಗಿದೆ ಎಂದು ಶಾಸಕ ಅರುಣಕುಮಾರ ಪೂಜಾರ ಹೇಳಿದರು. 

ಅವರು ತಾಲೂಕಿನ ಐರಣಿ ಗ್ರಾಮದ ವಿವಿಧ ಭಾಗಗಳಲ್ಲಿ ಇತ್ತೀಚೆಗೆ ಕೆಆರ್‌ಐಡಿಎಲ್ ವತಿಯಿಂದ ಅಂದಾಜು 1ಕೋಟಿ ರೂ ವೆಚ್ಚದಲ್ಲಿ ಹಮ್ಮಿಕೊಳ್ಳಲಾದ ವಿವಿಧ ರಸ್ತೆ ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದರು. ನಗರ ಮತ್ತು ಗ್ರಾಮಸ್ಥರ ಸಹಕಾರವಿದ್ದರೆ ಅಭಿವೃದ್ದಿಗೆ ಎಂದೂ ಅಡತಡೆ ಆಗದು. ಗ್ರಾಮಸ್ಥರು ಏನೇ ಕೆಲಸ ಕಾರ್ಯಗಳಿದ್ದರೂ ಕ್ರಿಯಾ ಯೋಜನೆಗಳನ್ನು ರೂಪಿಸಿ ಅದರ ಬಗ್ಗೆ ಸರಿಯಾದ ರೀತಿಯಲ್ಲಿ ಚರ್ಚಿಸಿ ತಮ್ಮೊಂದಿಗೆ ಇದರ ಬಗ್ಗೆ ಮಾಹಿತಿ ನೀಡಿದರೆ ಸಂಬಂಧಿಸಿದ ಇಲಾಖೆಗಳೊಂದಿಗೆ ಚರ್ಚಿಸಿ ಅಗತ್ಯ ಕಾಮಗಾರಿ ಕೈಗೊಳ್ಳಲು ಮುಂದಾಗುವುದಾಗಿ ಭರವಸೆ ನೀಡಿದರು. 

ವಿವಿಧ ಗ್ರಾಮಗಳ ರಸ್ತೆ ಅಭಿವೃದ್ದಿಗೆ ಈಗಾಗಲೇ 17.50 ಕೋಟಿ ರೂ ಹಣ ಮಂಜೂರಾಗಿದ್ದು, ಇದರಲ್ಲಿ ಇಂದು ಐರಣಿ, ಹುಣಸಿಕಟ್ಟಿ, ಚಳಗೇರಿ, ಖಂಡೇರಾಯನಹಳ್ಳಿ, ಹುಲ್ಲತ್ತಿ, ಮೈದೂರು, ಗಂಗಾಪೂರ, ಚಿಕ್ಕಅರಳಿಹಳ್ಳಿ ಗ್ರಾಮಗಳಲ್ಲಿ ಒಟ್ಟು 4.10 ಕೋಟಿ ರೂಗಳ ಮೊತ್ತದ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಲಾಗಿದೆ ಎಂದು ಶಾಸಕರು ಗ್ರಾಮಸ್ಥರಿಗೆ ಮಾಹಿತಿ ನೀಡಿದರು. 

ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಚೋಳಪ್ಪ ಕಸವಾಳ, ನಗರಸಭಾ ಸದಸ್ಯ ಪ್ರಕಾಶ ಪೂಜಾರ, ಎಪಿಎಂಸಿ ಸದಸ್ಯ ರಮೆಶ ನಾಯಕ, ಗ್ರಾಪಂ ಅಧ್ಯಕ್ಷ ನಿಂಗಪ್ಪ ಕಳ್ಳಿಮನಿ, ಮಂಜುಳ ಕಿಲ್ಲಾರದ, ಪವನಕುಮಾರ ಮಲ್ಲಾಡದ, ಗುತ್ತಿಗೆದಾರ ಗುಡ್ಡಪ್ಪ ಓಲೇಕಾರ, ಎಇಇ  ರುದ್ರೇಶ ಪಿಎ, ವಿಕಾಸ ಮಂಜು ಪೂಜಾರ, ಹರೀಶ ಗೊಗ್ಗದ, ಶಿವಕುಮಾರ ನ್ಯಾಮತಿ, ಪವಿತ್ರಕುಮಾರ ನಾಗೇನಹಳ್ಳಿ ಸೇರಿದಂತೆ ಹಾಲಿ, ಮಾಜಿ ಗ್ರಾಪಂ ಸದಸ್ಯರುಗಳು, ಮುಖಂಡರುಗಳು ಗ್ರಾಮಸ್ಥರು ಉಪಸ್ಥಿತರಿದ್ದರು. 


ಸುದ್ದಿ ಓದಿ