ಯಮಕನಮರಡಿ ಕ್ಷೇತ್ರದಲ್ಲಿ ಮುಂದುವರೆದ ಶಾಲೆಗಳ ಅಭಿವೃದ್ಧಿ ಪರ್ವ
ಯಮಕನಮರಡಿ 21: ಮತಕ್ಷೇತ್ರದ ಹಳೇವಂಟಮೂರಿ ಗ್ರಾಮದ ಶಾಲೆಗೆ ಮಂಜೂರಾದ ತಲಾ ?36 ಲಕ್ಷ ವೆಚ್ಚದ ಎರಡು ಶಾಲಾ ಕೊಠಡಿಗಳ ಹಾಗೂ ಚಿಲಭಾವಿ ಗ್ರಾಮದ ಶಾಲೆಗೆ ಮಂಜೂರಾದ 18 ಲಕ್ಷ ವೆಚ್ಚದ ಒಂದು ಶಾಲಾ ಕೊಠಡಿಯ ನಿರ್ಮಾಣಕ್ಕೆ ಇಂದು ಅಡಿಗಲ್ಲು ನೆರವೇರಿಸಲಾಯಿತು.ಮಾನ್ಯ ಲೋಕೋಪಯೋಗಿ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಸತೀಶಣ್ಣಾ ಜಾರಕಿಹೊಳಿ, ಸಂಸದೆ ಕು. ಪ್ರಿಯಾಂಕಾ ಅಕ್ಕಾ ಜಾರಕಿಹೊಳಿ ಹಾಗೂ ಯುವ ನಾಯಕರಾದ ಕು. ರಾಹುಲಣ್ಣಾ ಜಾರಕಿಹೊಳಿ ಅವರ ಮಾರ್ಗದರ್ಶನದಲ್ಲಿ ಕ್ಷೇತ್ರದ ಶೈಕ್ಷಣಿಕ ಮೂಲಸೌಕರ್ಯ ಅಭಿವೃದ್ಧಿಗೆ ನಿರಂತರ ಆದ್ಯತೆ ನೀಡಲಾಗುತ್ತಿದೆ. ಶ್ರೀ ಸತೀಶ ಜಾರಕಿಹೊಳಿ ಅವರು ಲೋಕೋಪಯೋಗಿ ಸಚಿವರಾದ ಬಳಿಕ ಯಮಕನಮರಡಿ ಕ್ಷೇತ್ರಕ್ಕೆ 250ಕ್ಕೂ ಹೆಚ್ಚು ಹೊಸ ಶಾಲಾ ಕೊಠಡಿಗಳು ಮಂಜೂರಾಗಿರುವುದು ಶಿಕ್ಷಣ ಕ್ಷೇತ್ರದ ಅಭಿವೃದ್ಧಿಯಲ್ಲೊಂದು ಐತಿಹಾಸಿಕ ಹೆಜ್ಜೆಯಾಗಿದೆ.ಗುಣಮಟ್ಟದ ಶಿಕ್ಷಣಕ್ಕೆ ಬಲಿಷ್ಠ ಮೂಲಸೌಕರ್ಯ ಶ್ರಿ ಅಭಿವೃದ್ಧಿಯ ಪಥದಲ್ಲಿ ಯಮಕನಮರಡಿ. ಈ ಸಂದರ್ಭದಲ್ಲಿ ಸಚಿವರ ಆಪ್ತ ಸಹಾಯಕರಾದ ಶ್ರೀ ಜಂಗಲಿಸಾಬ್ ನಾಯಿಕ ಲಗಮಣ್ಣಾ ಪನಗುದ್ದಿ ಜನಪ್ರತಿನಿಧಿಗಳು ಶಿಕ್ಷಕರು ವಿದ್ಯಾರ್ಥಿಗಳು ಊರಿನ ಹಿರಿಯರು ಉಪಸ್ಥಿತರಿದ್ದರು