ರಾಷ್ಟ್ರೀಯ

ದೇಶದ ಎಲ್ಲ ರೈತರಿಗೂ ಅನ್ವಯವಾಗುವಂತೆ ನಿರ್ಧಾರ ಕೈಗೊಳ್ಳಬೇಕು; ಕೇಂದ್ರ ಸರ್ಕಾರಕ್ಕೆ ಮುಖಂಡರ ಆಗ್ರಹ

ದೇಶದ ಎಲ್ಲ ರೈತರಿಗೂ ಅನ್ವಯವಾಗುವಂತೆ  ನಿರ್ಧಾರ ಕೈಗೊಳ್ಳಬೇಕು; ಕೇಂದ್ರ ಸರ್ಕಾರಕ್ಕೆ ಮುಖಂಡರ ಆಗ್ರಹ

ನವದೆಹಲಿ,  ಡಿಸೆಂಬರ್ 1: ಕೇಂದ್ರ    ಸರ್ಕಾರ   ಕೈಗೊಳ್ಳಲಿರುವ  ನಿರ್ಧಾರ    ದೇಶದ ಎಲ್ಲ ರೈತರಿಗೂ ಅನ್ವಯವಾಗಬೇಕು, ಪಂಜಾಬ್  ಗೆ ಮಾತ್ರ  ಅನ್ವಯವಾಗುವಂತೆ  ಕೈಗೊಂಡರೆ  ಅದನ್ನು   ನಾವು  ಒಪ್ಪುವುದಿಲ್ಲ ಎಂದು ದೆಹಲಿ ಗಡಿಯಲ್ಲಿ  ಪ್ರತಿಭಟನೆಯ ನೇತೃತ್ವ ವಹಿಸಿರುವ ರೈತ ಸಂಘಗಳ ನಾಯಕರು ಮಂಗಳವಾರ  ಹೇಳಿದ್ದಾರೆ. 

ಕೇಂದ್ರ  ಸರ್ಕಾರದ ಮೂರು ಹೊಸ ಕೃಷಿ ಕಾಯ್ದೆಗಳ  ವಿರುದ್ಧ  ಹರಿಯಾಣ-ದೆಹಲಿ ಗಡಿಯಲ್ಲಿ ರೈತ ಸಂಘಗಳು ನಡೆಸುತ್ತಿರುವ ಪ್ರತಿಭಟನೆ ಮಂಗಳವಾರ ಆರನೇ ದಿನಕ್ಕೆ ತಲುಪಿದೆ.

ಕೇಂದ್ರ ಸರ್ಕಾರ    ಸಂಜೆ  ರೈತ ಪ್ರತಿನಿಧಿಗಳ ನಡೆಸುತ್ತಿದ್ದು   ಈ ಸಭೆಗೆ  ರೈತ ಮುಖಂಡರನ್ನು  ಆಹ್ವಾನಿಸಿದೆ.  ಈ  ಸಭೆಯಲ್ಲಿ   ಗೃಹ ಸಚಿವ ಅಮಿತ್ ಶಾ  ಅವರೂ ಸಹ ಭಾಗವಹಿಸುವ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ ಚರ್ಚೆಯಲ್ಲಿ  ಒಮ್ಮತಕ್ಕೆ ಬರುವಂತಹ ಅಂಶಗಳ ಬಗ್ಗೆ   ರೈತ ನಾಯಕರು  ನಿರಂತರ ಸಮಾಲೋಚನೆ ನಡೆಸುತ್ತಿದ್ದಾರೆ.

ರೈತ ಸಮಸ್ಯೆಗಳನ್ನು ಬಗೆಹರಿಸಲು ಕೇಂದ್ರ ಸರ್ಕಾರ  ನಿಮ್ಮೊಂದಿಗೆ (ರೈತ ಸಂಘಗಳು) ಎರಡು ಬಾರಿ ಸಭೆ ನಡೆಸಿದೆ.  ಇದೇ ಸ್ಪೂರ್ತಿಯಿಂದ  ಡಿಸೆಂಬರ್ 1 ರಂದು ಉನ್ನತ ಮಟ್ಟದ ಸಚಿವರ ಸಮಿತಿ  ಸಭೆಗೆ ನಿಮ್ಮನ್ನು ಆಹ್ವಾನಿಸುತ್ತೇವೆ ”ಎಂದು ಕೇಂದ್ರ   ಕೃಷಿ ಕಾರ್ಯದರ್ಶಿ ಸಂಜಯ್ ಅಗರ್ವಾಲ್   ರೈತ ಮುಖಂಡರಿಗೆ ನೀಡಿರುವ  ಆಹ್ವಾನ ಪತ್ರದಲ್ಲಿ  ತಿಳಿಸಿದ್ದಾರೆ.

ಈ ನಡುವೆ  ವಿವಾದಿತ  ವಿಷಯಗಳ  ಬಗ್ಗೆ   ಒಮ್ಮತರೂಪಿಸಲು ದೇಶದ ಎಲ್ಲ ರೈತ ಸಂಘಗಳ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸುವಂತೆ  ರೈತ ಪ್ರತಿನಿಧಿಗಳು ಮಂಗಳವಾರ ನಡೆಯುವ ಸಭೆಯಲ್ಲಿ  ಕೇಂದ್ರ ಸರ್ಕಾರವನ್ನು   ಕೋರಲಿದ್ದಾರೆ. ಕೇಂದ್ರ ಸರ್ಕಾರದ   ಆಹ್ವಾನದ ಬಗ್ಗೆ , ಕಿಸಾನ್ ಯೂನಿಯನ್ ಆಫ್ ಇಂಡಿಯಾದ ಪ್ರಧಾನ ಕಾರ್ಯದರ್ಶಿ ಜಗಮೋಹನ್ ಸಿಂಗ್  ಮಾತನಾಡಿ,  ರೈತ ಸಂಘಗಳು ಸಭೆಯಲ್ಲಿ ಪಾಲ್ಗೊಂಡು  ದೇಶದ ಎಲ್ಲಾ ರೈತರ   ಪರವಾಗಿ ಸಾಮೂಹಿಕ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ ಎಂದು ಹೇಳಿದರು. "ಪಂಜಾಬ್ ಗೆ ಮಾತ್ರ  ನಿರ್ದಿಷ್ಟ ಪ್ಯಾಕೇಜ್,  ಇತರ  ಕೊಡುಗೆಗಳನ್ನು   ನಾವು ಒಪ್ಪುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಕೇಂದ್ರ ತಂದಿರುವ ರೈತ ಕಾನೂನುಗಳನ್ನು ರದ್ದುಗೊಳಿಸಬೇಕು ಎಂದು  ಆಗ್ರಹಿಸಿ ಪಂಜಾಬ್ ರೈತ ಸಂಘಗಳ  ನಿರ್ಧಾರ ಅಚಲವಾಗಿದ್ದರೆ,    ಕೃಷಿ ಕ್ಷೇತ್ರದ ಸುಧಾರಣೆಗಳಿಗೆ ಹೊಸ ಕಾನೂನುಗಳು ಹೆಚ್ಚು ಉಪಯುಕ್ತ  ಎಂದು ಕೇಂದ್ರ ಸರ್ಕಾರ ವಾದಿಸುತ್ತಿದೆ.

ಸುದ್ದಿ ಓದಿ