ಕೊರೋನಾದಿಂದ ಮಾಜಿ ಶಾಸಕ ಮನೋಹರ ಕಟ್ಟಿಮನಿ ಸಾವು
ಚಿಕ್ಕೋಡಿ 10: ಸರಳ ಸಜ್ಜನ ರಾಜಕಾರಣಿ, ಎಲ್ಲರೊಂದಿಗೆ ಪ್ರೀತಿ-ವಿಶ್ವಾಸದಿಂದ ಜನಮನ ಗೆದ್ದಿರುವ ಚಿಕ್ಕೋಡಿ ವಿಧಾನಸಭೆ ಕ್ಷೇತ್ರದ ಮಾಜಿ ಶಾಸಕ ಮನೋಹರ ಶಿವಪುತ್ರ ಕಟ್ಟಿಮನಿ(65) ಅವರು ಸೋಮವಾರ ಬೆಳಿಗ್ಗೆ ಕೋವಿಡ್ ಮಹಾಮಾರಿಗೆ ಬಲಿಯಾಗಿದ್ದಾರೆ.
ಅನಾರೋಗ್ಯಂದ ಬಳಲುತ್ತಿದ್ದ ಮಾಜಿ ಶಾಸಕ ಮನೋಹರ ಕಟ್ಟಿಮನಿ ಅವರು ಕಳೆದ ಒಂದು ವಾರದಿಂದ ಬೆಳಗಾವಿ ಕೆಎಲ್ಇ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಕೊನೆಗಳಿಗೆಯಲ್ಲಿ ಕೊರೊನಾ ಪೊಸಿಟಿವ ಬಂದಿರುವ ಕಾರಣದಿಂದ ಅವರು ಗುಣಮುಖರಾಗದೇ ಸೋಮವಾರ ಕೊನೆಯುಸಿರುಳೆದಿದ್ದಾರೆ.
1999ರಲ್ಲಿ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಚಿಕ್ಕೋಡಿ ವಿಧಾನಸಭೆ ಕ್ಷೇತ್ರದಿಂದ ಸಂಯುಕ್ತ ಜನತಾದಳದಿಂದ ಶಾಸಕರಾಗಿ ಆಯ್ಕೆಯಾಗಿದ್ದರು. ಶಾಸಕರಾಗುವ ಮುಂಚೆ ಅವರು ಚಿಕ್ಕೋಡಿ ಪುರಸಭೆ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಬೆಳಗಾವಿ ಜಿಲ್ಲೆಯ ಹಿರಿಯ ಜನಪ್ರತಿನಿಧಿಗಳೊಂದಿಗೆ ಉತ್ತಮ ಬಾಂಧವ್ಯ ಇಟ್ಟುಕೊಂಡಿದ್ದ ಅವರು, ಚಿಕ್ಕೋಡಿ ವಿಧಾನಸಭೆ ಕ್ಷೇತ್ರದಲ್ಲಿ 1999 ರಿಂದ 2004ರವರೆಗೆ ಜನಪ್ರೀಯ ಶಾಸಕರಾಗಿ ಸೇವೆ ಸಲ್ಲಿಸಿದ್ದರು.
ಆಹಾರ ಸಚಿವ ಉಮೇಶ ಕತ್ತಿ ಅವರು ಮನೋಹರ ಕಟ್ಟಿಮನಿ ಅವರಿಗೆ ರಾಜಕೀಯ ಮಾರ್ಗದರ್ಶನ ಮಾಡುವ ಮೂಲಕ ಒಂದು ಅವಧಿಗೆ ಅವರನ್ನು ವಿಧಾನಸಭೆ ಮೆಟ್ಟಿಲು ಹತ್ತಿಸಿದ್ದು ವಿಶೇಷವಾಗಿತ್ತು. ಸಚಿವ ಉಮೇಶ ಕತ್ತಿ ಅವರು ಬಿಜೆಪಿ ಸೇರಿದ ಬಳಿಕ ಮನೋಹರ ಕಟ್ಟಿಮನಿ ಅವರು ಸಹ ಬಿಜೆಪಿ ಸೇರ್ಪಡೆಗೊಂಡಿದ್ದರು.
ಕಳೆದ ಹದಿನೈದು ದಿನಗಳ ಹಿಂದೆಯಷ್ಟೇ ಹಿರಿಯ ರಾಜಕೀಯ ದುರೀಣ ಬಿ.ಆರ್.ಸಂಗಪ್ಪಗೋಳ ಅವರು ಸಹ ಕೋವಿಡ್ಗೆ ಬಲಿಯಾಗಿದ್ದರು. ಈಗ ಮನೋಹರ ಕಟಿಮನಿ ವಿಧಿವಶರಾಗಿದ್ದು ಚಿಕ್ಕೋಡಿ ತಾಲೂಕು ಇಬ್ಬರು ಗಣ್ಯ ವ್ಯಕ್ತಿಗಳನ್ನು ಕಳೆದುಕೊಂಡಂತಾಗಿದೆ.
ಮನೋಹರ ಕಟ್ಟಿಮನಿ ಅವರಿಗೆ ಪತ್ನಿ, ಓರ್ವ ಪುತ್ರ ಓರ್ವ ಪುತ್ರಿ ಇದ್ದಾರೆ.
ಚಿಕ್ಕೋಡಿ ಕ್ಷೇತ್ರದಿಂದ ಒಂದು ಬಾರಿ ಶಾಸಕರಾಗಿದ್ದ ಮನೋಹರ ಕಟ್ಟಿಮನಿ ಅವರು ನಿಧನರಾಗಿರುವುದು ಚಿಕ್ಕೋಡಿ ತಾಲೂಕಿಗೆ ತುಂಬಲರಾದಷ್ಟು ನಷ್ಟವಾಗಿದೆ. ಒಬ್ಬ ಪ್ರಾಮಾಣಿಕ ವ್ಯಕ್ತಿಯನ್ನು ಕಳೆದುಕೊಂಡಂತಾಗಿದೆ. ಅವರ ಕುಟುಂಬಕ್ಕೆ ದು:ಖ ಸಹಿಸುವ ಶಕ್ತಿ ನೀಡಲೇಂದು ಪ್ರಾಥರ್ಿಸುತ್ತೇನೆ.
ಗಣೇಶ ಹುಕ್ಕೇರಿ ಶಾಸಕರು ಚಿಕ್ಕೋಡಿ-ಸದಲಗಾ.
ನಿಷ್ಟಾವಂತ ರಾಜಕಾರಣಿ ಮನೋಹರ ಕಟ್ಟಿಮನಿ ಅವರು ಶಾಸಕರಾಗಿದ್ದ ವೇಳೆಯಲ್ಲಿ ಚಿಕ್ಕೋಡಿಗೆ ಅವರದ್ದೆ ಆದ ಕೊಡುಗೆ ನೀಡಿದ್ದರು. ಈಗ ಅವರು ನಿಧನರಾಗಿದ್ದು ತುಂಬಾ ದು:ಖವಾಗಿದೆ. ಅವರ ಕುಟುಂಬಕ್ಕೆ ದು:ಖ ಭರಿಸುವ ಶಕ್ತಿ ನೀಡಲು ದೇವರಲ್ಲಿ ಪ್ರಾಥರ್ಿಸುತ್ತೇನೆ.
ದುಂಡಪ್ಪ ಬೆಂಡವಾಡೆ ರಾಜ್ಯ ಉಪಾಧ್ಯಕ್ಷರು
ಬಿಜೆಪಿ ರೈತ ಮೋಚರ್ಾ