ಬೆಳಗಾವಿ

ಬೆಟಗೇರಿ : ನವರಾತ್ರಿ ಮತ್ತು ವಿಜಯ ದಶಮಿ ಹಬ್ಬದ ಮಹಾಸಡಗರ

ಬೆಟಗೇರಿ : ನವರಾತ್ರಿ ಮತ್ತು ವಿಜಯ ದಶಮಿ ಹಬ್ಬದ ಮಹಾಸಡಗರ

ಲೋಕದರ್ಶನ ವರದಿ 

ಬೆಟಗೇರಿ 16 : ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದಲ್ಲಿ ನವರಾತ್ರಿ ಹಬ್ಬದ ಪ್ರಯುಕ್ತ ಅ.11ರಿಂದ ಸ್ಥಳೀಯ ಮಹಿಳೆಯರಿಂದ ಶ್ರೀದೇವಿಯ ಆರಾಧನೆ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಸಡಗರದಿಂದ ನಡೆಯುತ್ತಿವೆ. 

  ಅ.11 ರಿಂದ ಅ.19ರ ವರೆಗೆ 9 ದಿನಗಳ ಕಾಲ ಸ್ಥಳೀಯ ಮಹಿಳೆಯರು ಮತ್ತು ಚಿಕ್ಕ ವಯಸ್ಸಿನ ಹೆಣ್ಣು ಮಕ್ಕಳು ದಿನಕ್ಕೂಂದು ಬಣ್ಣದ ಸೀರೆಯುಟ್ಟು ನವೋಲ್ಲಾಸದಿಂದ ಸಂಭ್ರಮಿಸುತ್ತಿದ್ದಾರೆ. ದಿನ ಬೆಳಗಾಗುವಷ್ಟರಲ್ಲಿ ಬೆಟಗೇರಿ ಗ್ರಾಮದ ಹೊರವಲಯದ ಅಲ್ಲಲ್ಲಿರುವ ಬನ್ನಿ ಗಿಡಕ್ಕೆ ಶುಭ ಗಳಿಗೆಯಲ್ಲಿ ಪೂಜೆ, ಪುನಸ್ಕಾರ, ಗಿಡಕ್ಕೆ ಪ್ರದಕ್ಷಣೆ ಹಾಕುವುದು, ನೂಲು ಸುತ್ತುವದು, ಆರತಿ, ನೈವೇದ್ಯ ಸಮರೆ​‍್ನ ಜರುಗುತ್ತಿದೆ.  

  ಇಲ್ಲಿಯ ವಿವಿಧ ದೇವಾಲಯದಲ್ಲಿರುವ ದೇವರಿಗೆ ಮಹಾ ಪೂಜೆ, ವಿವಿಧ ಬಗೆಯ ಪುಷ್ಪಲಂಕಾರ, ದೀಪಾಲಂಕಾರ ಹಾಗೂ ನವರಾತ್ರಿಯ ಧಾರ್ಮಿಕ ಕಾರ್ಯಕ್ರಮಗಳು ಭಕ್ತಿಯ ಪರಾಕಾಷ್ಠೆ, ವೈಭವದಿಂದ ನಡೆಯುತ್ತಿವೆ. ಅದರಲ್ಲೂ ಸಡಗರದಿಂದ ಶ್ರೀದೇವಿಯ ಆರಾಧನೆಗೆ ಮಹಿಳೆಯರಿಂದ ನಡೆಯುತ್ತಿದೆ. 

ಆಯುಧ ಪೂಜೆ ಮತ್ತು ಬನ್ನಿ ವಿನಿಮಯ: ಮಂಗಳವಾರ ಅ.20ರಂದು ವಿಜಯ ದಶಮಿ ಹಬ್ಬದ ಪ್ರಯುಕ್ತ ಬೆಟಗೇರಿ ಗ್ರಾಮದಲ್ಲಿ ಮುಂಜಾನೆಯಿಂದ ಸಂಜೆತನಕ ಸ್ಥಳೀಯ ದೇವಾಲಯ ಮತ್ತು ಮನೆಗಳಲ್ಲಿ ಪ್ರತಿಷ್ಠಾಪಿಸಿದ 9 ಮತ್ತು 5 ದಿನಗಳ ಕಾಲ ಬತ್ತಿ ಹಾಕಿ(ಹಚ್ಚಿ)ದ್ದನ್ನು ಬತ್ತಿ ತಿರುವಿ ಹಾಕುವದು, ದೇವಸ್ಥಾನಗಳ ದೇವರಿಗೆ ಪುರ ಜನರಿಂದ ನೈವೇಧ್ಯ ಸಮರೆ​‍್ನ, ಪೂಜೆ, ಪುನಸ್ಕಾರ ಹಾಗೂ ಆಯುಧ (ಖಂಡೆ) ಪೂಜಾ ಕಾರ್ಯಕ್ರಮ ನಡೆಯಲಿದೆ. ಬುಧವಾರ ಅ.21ರಂದು ಗ್ರಾಮದ ಎಲ್ಲ ದೇವಾಲಯಗಳಲ್ಲಿ ಪೂಜೆ, ಪುನಸ್ಕಾರ ಜರುಗಿ,

ಸಂಜೆ 6ಗಂಟೆಗೆ ಪುರದೇವರ ಪಲ್ಲಕ್ಕಿ ಉತ್ಸವ ಇಲ್ಲಿಯ ಪ್ರಮುಖ ಬೀದಿಗಳಲ್ಲಿ ನಡೆದ ಬಳಿಕ ಸ್ಥಳೀಯ ಡಾ.ಅಂಬೇಡ್ಕರ ವೃತ್ತದಲ್ಲಿ ಇಲ್ಲಿಯ ವಿವಿಧ ದೇವರ ಪಲ್ಲಕ್ಕಿಗಳ ಸಮ್ಮುಖದಲ್ಲಿ ಬನ್ನಿ ವಿನಿಮಯ ಕಾರ್ಯಕ್ರಮದ ನಂತರ ಸ್ಥಳೀಯರು ಒಬ್ಬರಿಗೊಬ್ಬರೂ ಬನ್ನಿ ವಿನಿಮಯ ಮಾಡಿಕೊಳ್ಳುವದು ಜರುಗಲಿದೆ ಎಂದು ಸ್ಥಳೀಯ ವೇದಮೂರ್ತಿ ಈರಯ್ಯ ಹಿರೇಮಠ ತಿಳಿಸಿದ್ದಾರೆ. 

  ಈ ವೇಳೆ ಶೋಭಾ ಪಾಟೀಲ(ಚಂದರಗಿ), ಶೋಭಾ ಮುಧೋಳ, ರೇಣುಕಾ ಮುಧೋಳ, ಶಾಂತಾ ಮುಧೋಳ,  ಗೌರವ್ವ ಪೂಜೇರಿ, ಮಂಜುಳಾ ಮುಧೋಳ, ಶೀವಲೀಲಾ ಮುಧೋಳ, ಪೂರ್ಣಿಮಾ ಮುಧೋಳ, ಗಂಗಮ್ಮ ಮುಧೋಳ, ಮಹಾದೇವಿ ಮುಧೋಳ ಸೇರಿದಂತೆ ಹಲವಾರು ಜನ ಮಹಿಳೆಯರು, ಚಿಕ್ಕ ವಯಸ್ಸಿನ ಹೆಣ್ಣು ಮಕ್ಕಳು, ಇತರರು ಇದ್ದರು. 


ಸುದ್ದಿ ಓದಿ