ಕಸಾಯಿಖಾನೆಯಲ್ಲಿನ ಗೋವುಗಳನ್ನು ರಕ್ಷಿಸಿದ ಪೊಲೀಸರು
ರಾಣಿಬೆನ್ನೂರ 03: ಮಾಂಸ ಮಾರಾಟಕ್ಕಾಗಿ ಅಕ್ರಮವಾಗಿ 7 ಆಕಳು ಕರುಗಳನ್ನು ಕೂಡಿ ಹಾಕಲಾಗಿದ್ದ ಕಸಾಯಿಖಾನೆಯ (ಶೆಡ್) ಮೇಲೆ ಪೊಲೀಸರು ದೀಡೀರ್ ದಾಳಿ ಗೋವುಗಳನ್ನು ಸಂರಕ್ಷಿಸಿದ ಘಟನೆ ರವಿವಾರದಂದು ನಗರದಲ್ಲಿ ನಡೆದಿದೆ. ಸ್ಥಳೀಯ ಇಸ್ಲಾಂಪುರ ಓಣಿಯಲ್ಲಿನ ರಫಿಕಸಾಬ ಮುಲ್ಲಾಗೆ ಸೇರಿದ ಈ ಶೆಡ್‌ನಲ್ಲಿ ಸಂಗ್ರಹಿಸಿಡಲಾಗಿದ್ದ ಕರುಗಳಿರುವುದನ್ನು ಮಾಹಿತಿ ಪಡೆದು ಪೊಲೀಸರಿಂದ ದಾಳಿ ನಡೆಸಲಾಗಿದೆ. ಜೊತೆಗೆ ಒಂದು ಆಕಳು ಮತ್ತು ಎಮ್ಮೆಯನ್ನು ಕಡಿದು ಮಾಂಸ ಮಾರಾಟ ಮಾಡುತ್ತಿದ್ದುದು ಸಹ ಈ ಸಂದರ್ಭದಲ್ಲಿ ಬೆಳಕಿಗೆ ಬಂದಿದೆ. ಈ ಬಗ್ಗೆ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲುಗೊಂಡಿದೆ.