ನೀರಿನ ರಭಸಕ್ಕೆ ಕೊಚ್ಚಿ ಹೋದ ಆಕಳು
ಶಿಗ್ಗಾವಿ 13: ತಾಲೂಕಿನ ಹಿರೇಮಲ್ಲೂರ ಗ್ರಾಮದ ಬಳಿ ತುಂಬಿ ಹರಿಯುತ್ತಿದ್ದ ಹಳ್ಳದಲ್ಲಿ ಆಕಳು ಕೊಚ್ಚಿ ಹೋಗಿ ಮೃತಪಟ್ಟ ಘಟನೆ ಶನಿವಾರ ನಡೆದಿದೆ.ಹಿರೇಮಲ್ಲೂರ ಗ್ರಾಮದ ರೈತ ಚನ್ನಪ್ಪಗೌಡ ಕರಿಗೌಡ್ರ ತನ್ನ ಎರಡು ಆಕಳುಗಳನ್ನು ಮೇಯಿಸಲು ಹಳ್ಳ ದಾಟಿ ಹೊಲಕ್ಕೆ ಹೊರಟ ಸಂಧರ್ಭದಲ್ಲಿ ನೀರಿನ ರಭಸಕ್ಕೆ ಕೈಯಲ್ಲಿದ್ದ ಎರಡು ಆಕಳುಗಳು ಕೊಚ್ಚಿ ಹೋಗಿದ್ದು, ಸ್ಥಳೀಯರ ಸಹಾಯದಿಂದ ಒಂದು ಆಕಳನ್ನು ರಕ್ಷಿಸಲಾಗಿದ್ದು, ಇನ್ನೊಂದು ಆಕಳು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದೆ. ಈ ಕುರಿತಂತೆ ಶಿಗ್ಗಾವಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.