ರಾಣೆಬೆನ್ನೂರ

ಮೋದಿಜಿ ಕಾರ್ಯವೈಖರಿಯನ್ನು ದೇಶವೇ ಕೊಂಡಾಡುತ್ತಿದೆ: ಬೊಮ್ಮಾಯಿ

ಮೋದಿಜಿ ಕಾರ್ಯವೈಖರಿಯನ್ನು ದೇಶವೇ ಕೊಂಡಾಡುತ್ತಿದೆ: ಬೊಮ್ಮಾಯಿ

ಲೋಕದರ್ಶನ ವರದಿ 

ರಾಣೀಬೆನ್ನೂರ  21: ಉಕ್ರೇನ್ ದೇಶದಲ್ಲಿ ರಷ್ಯಾದ ಶೆಲ್ ದಾಳಿಗೆ ಬಲಿಯಾಗಿದ್ದ ಹಾವೇರಿ ಜಿಲ್ಲೆಯ ರಾಣೇಬೆನ್ನೂರ ತಾಲೂಕಿನ ಚಳಗೇರಿ ಗ್ರಾಮದ ನವೀನ್ ಗ್ಯಾನಗೌಡ್ರ ಎಂಬ ವೈದ್ಯಕೀಯ ವಿದ್ಯಾರ್ಥಿಯ ಪಾರ್ಥಿವ ಶರೀರವನ್ನು ತರಲು ಕೇಂದ್ರ ಸರಕಾರವು ಪವಾಡ ರೀತಿಯಲ್ಲಿ ದೈತ್ಯ ಕಾರ್ಯಾಚರಣೆ ಮೂಲಕ ಸುರಕ್ಷಿತವಾಗಿ ತಾಯ್ನಾಡಿಗೆ ತರಲು ಕೇಂದ್ರ ಸರಕಾರವು ಶಕ್ತಿ ಮೀರಿ ಪ್ರಯತ್ನಿಸಿ ಯಶಸ್ವಿಯಾಗಿದೆ. ಈ ಬಗ್ಗೆ ದೇಶದ ಪ್ರಧಾನಿ ಮೋದಿಜಿಯವರ ಕಾರ್ಯವೈಖರಿಯನ್ನು ಇಂದು ಇಡೀ ದೇಶವೇ ಕೊಂಡಾಡುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. 

   

ಸೋಮವಾರ ಚಳಗೇರಿ ಗ್ರಾಮದ ಮೃತ ನವೀನ್ ನಿವಾಸದಲ್ಲಿ ನವೀನ್ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದು ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಉಕ್ರೇನ್‌ನಲ್ಲಿ ಕಳೆದ 25 ದಿನಗಳ ಹಿಂದಿನಿಂದ ಘೋರ ಯುದ್ಧ ನಡೆಯುತ್ತಿದೆ. ಈ ಸಂದರ್ಭದಲ್ಲಿ ರಷ್ಯಾದ ದಾಳಿಗೆ ಮೃತನಾದ ನವೀನ್‌ನ ಪಾರ್ಥಿವ ಶರೀರ ಮೂರು ದಿನಗಳ ನಂತರ ಪತ್ತೆಯಾಯಿತು. ಪ್ರಧಾನಿ ಮೋದಿ ಹಾಗೂ ವಿದೇಶಾಂಗ ಸಚಿವಾಲಯದ ಸಚಿವರುಗಳು, ಅಧಿಕಾರಿಗಳು ನಿರಂತರವಾಗಿ ಪ್ರಯ್ತನಿಸಿ ಮೃತದೇಹವನ್ನು ಕೋಲ್ಡ್‌ ಸ್ಟೋರೇಜ್‌ನಲ್ಲಿಟ್ಟು ನಂತರ ತವರೂರಿಗೆ ರವಾನಿಸಿದ್ದು ಕೇಂದ್ರ ಸರಕಾರದ ಐತಿಹಾಸಿಕ ಹೋರಾಟವೆಂದೇ ಭಾವಿಸುರುವುದಾಗಿ ಬೊಮ್ಮಾಯಿ ಹೇಳಿದರು. 

   ನವೀನ್ ಮೃತನಾದ ಸಂದರ್ಭದಲ್ಲಿ ಹಾಗೂ ಇಂದಿನ ವಾಸ್ತವದಲ್ಲೂ ಸಹ ಉಕ್ರೇನ್‌ನಲ್ಲಿ ಊಹಿಸಲಾರದಷ್ಟು ಭಾರೀ ಯುದ್ಧ ನಡೆಯುತ್ತಿದೆ. ಸಾವಿರಾರು ನಾಗರೀಕರು, ಯೋಧರು ಯುದ್ಧದಲ್ಲಿ ಸಾವನ್ನಪ್ಪಿದ್ದಾರೆ. ಸಾವನ್ನಪ್ಪಿದ ಎಲ್ಲರನ್ನೂ ಸಾಮೂಹಿಕ ಅಂತ್ಯ ಸಂಸ್ಕಾರ ಮಾಡುವ ಪರಸ್ಥಿತಿ ಉಕ್ರೇನ್‌ನಲ್ಲಿ ಉಂಟಾಗಿದೆ. ಇಂತಹ ಸಂದರ್ಭದಲ್ಲೂ ಸಹ ಕೇಂದ್ರ ಸರಕಾರವು ದಿಟ್ಟ ನಿರ್ಧಾರ ಕೈಗೊಂಡು ನವೀನ್ ಪಾರ್ಥಿವ ಶರೀರವನ್ನು ಉಕ್ರೇನ್‌ನಿಂದ ತಾಯ್ನಾಡಿಗೆ ತರುವಲ್ಲಿ ಬಹಳಷ್ಟು ಶ್ರಮಿಸಿದೆ. ಮೋದಿಯವರಿಗೆ, ಜೈ ಶಂಕರ್ ಅವರಿಗೆ ಹಾಗೂ ಪಾರ್ಥಿವ ಶರೀರ ತರಲು ಪ್ರಯತ್ನಿಸಿದ ಎಲ್ಲರಿಗೂ ಧನ್ಯವಾದಗಳನ್ನು ಅರ​‍್ಿಸುವುದಾಗಿ ಬೊಮ್ಮಾಯಿ ಹೇಳಿದರು. 

  

 ದೇಶದ 19ಸಾವಿರಕ್ಕೂ ಅಧಿಕ ಹಾಗೂ ರಾಜ್ಯದ 572 ವಿದ್ಯಾರ್ಥಿಗಳನ್ನು ತಾಯ್ನಾಡಿಗೆ ಕರೆತರುವಲ್ಲಿ ಕೇಂದ್ರ ಸರಕಾರವು ಕೈಗೊಂಡ ಆಪರೇಷನ್ ಗಂಗಾ ಕಾರ್ಯಕ್ರಮವು ಯಶಸ್ವಿಯಾಗಿದೆ. ರಾಜ್ಯ ಸರಕಾರವೂ ಸಹ ಈಬಗ್ಗೆ ಕೇಂದ್ರ ಸರಕಾರಕ್ಕೆ ಪಾರ್ಥಿವ ಶರೀರ ತರಲು ಮನವಿ ಮಾಡಿಕೊಳ್ಳಲಾಗಿತ್ತು, ನವೀನ್ ತಂದೆ ತಾಯಿಗಳ ಆಶಯೂ ಸಹ ಅದೇ ಆಗಿತ್ತು, ಅಂತಿಮವಾಘಿ ನವೀನ್ ಮಥದೇಹ ತಾಯ್ನಾಡಿಗೆ ಕರೆತಂದದ್ದು ಸಾಹಸವೇ ಆಗಿದೆ. ಇದಂದು ಅನೀರಿಕ್ಷತ ಬೆಳವಣಿಗೆಯಾಗಿದ್ದು, ನವೀನ್ ಕುಟುಂಬಕ್ಕೆ ದುಃಖ ನಿಭಾಯಿಸುವ ಶಕ್ತಿಯನ್ನು ಆ ಭಗವಂತನು ನೀಡಲಿ ಎಂದು ಹೇಳಿದರು. 

  ಉಕ್ರೇನ್‌ನಿಂದ ತಾಯ್ನಾಡಿಗೆ ಮರಳಿದ ಅನೇಕ ವೈದ್ಯಕೀಯ ವಿದ್ಯಾರ್ಥಿಗಳು ತಮ್ಮ ನೋವನ್ನು ತೋಡಿಕೊಂಡರು, ಈ ಬಗ್ಗೆ ರಾಜ್ಯ ಹಾಗೂ ಕೇಂದ್ರ ಸರಕಾರವು ವಿದ್ಯಾರ್ಥಿಗಳ ಹಿತದೃಷ್ಠಿಯಿಂದ ಉತ್ತಮ ನಿರ್ಣಯ ಕೈಗೊಳ್ಳಲಿದೆ. ಈ ಬಗ್ಗೆ ಉಭಯ ಸರಕಾರಗಳು ಉನ್ನತಮಟ್ಟದ ವೈದ್ಯಕೀಯ ಶಿಕ್ಷಣ ಇಲಾಖೆಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಾಗಿದೆ. ವಿದ್ಯಾರ್ಥಿಗಳಿಗೆ ನ್ಯಾಯ ದೊರಕಿಸಿಕೊಡುವ ಪ್ರಯತ್ನಗಳು ನಡೆದಿವೆ. ಅಲ್ಲಿಯವರೆಗೂ ಸಹ ವೈದ್ಯಕೀಯ ವಿದ್ಯಾರ್ಥಿಗಳು ಕಾಯಬೇಕು ಎಂದವರು ತಿಳಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ, ಶಾಸಕ ಅರುಣಕುಮಾರ ಪೂಜಾರ, ಸಾಂಸದ ಶಿವಕುಮಾರ ಉದಾಸಿ, ಜಿ.ಎಂ.ಸಿದ್ದೇಶ, ಶಾಸಕರಾದ ವಿರುಪಾಕ್ಷಪ್ಪ ಬಳ್ಳಾರಿ, ಎಂ.ಪಿ.ರೇಣುಕಾಚಾರ್ಯ ಸಏರಿದಂತೆ ಮತ್ತಿತರರು ಇದ್ದರು. 


ಸುದ್ದಿ ಓದಿ