‘ದೇಶದ ಭದ್ರತೆ, ಆರ್ಥಿಕ ಸಮಾನತೆಗೆ ಸಾಂಗಿಕವಾಗಿ ದುಡಿಯಬೇಕು’ : ಬುರಡಿಕಟ್ಟಿ
ಲೋಕದರ್ಶನ ವರದಿ
ರಾಣೇಬೆನ್ನೂರು 30; ದೇಶದ ಭದ್ರತೆಗೆ ಮತ್ತು ಆರ್ಥಿಕ ಸಮಾನತೆಗೆ ಎಲ್ಲರೂ ಸಾಂಗಿಕವಾಗಿ ದುಡಿಯಬೇಕಾದ ಇಂದಿನ ಬಹು ಅಗತ್ಯವಿದೆ ಎಂದು ರಾಣೇಬೆನ್ನೂರು ವಕೀಲರ ಸಂಘದ ಅಧ್ಯಕ್ಷ ಬಿ.ಹೆಚ್.ಬುರಡಿಕಟ್ಟಿ ಹೇಳಿದರು.
ಅವರು ಇಲ್ಲಿನ ಕೋರ್ಟ್ ಆವರಣದಲ್ಲಿರುವ ಸ್ವಾತಂತ್ರ್ಯ ವೀರ ಯೋಧ ಲಿಂ.ಮೆಣಸಿನಹಾಳ ತಿಮ್ಮನಗೌಡರ ಸ್ಮಾರಕದ ಬಳಿ ದೇಶದ 73ನೇ ಗಣರಾಜ್ಯೋತ್ಸವ ಕಾರ್ಯಕ್ರಮದ ದ್ವಜಾರೋಹಣ ನೆರವೇರಿಸಿ ಮಾತನಾಡಿದರು.
ದೇಶದಲ್ಲಿ ಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಅಪಾರ ಸಾಧನೆ ನಡೆದಿದೆ. ಇದರಿಂದ ವಿಶ್ವದ ಎಲ್ಲಾ ರಾಷ್ಟ್ರಗಳು ಭಾರತದತ್ತ ಮುಖ ಮಾಡುವಂತಾಗಿದೆ ಎಂದ ಅವರು, ಏಕತೆ, ಭಾವೈಕ್ಯತೆ ಮತ್ತು ಬ್ರಾತತ್ವ ಬದುಕು ನಮ್ಮ ಮೂಲ ಮಂತ್ರವಾಗಿದ್ದು, ಅದರಂತೆಯೇ ಒಂದಾಗಿ ಒಗ್ಗಟ್ಟಾಗಿ ಸಮಗ್ರ ದೇಶದ ಭದ್ರ ಬುನಾಧಿಗೆ ಮತ್ತಷ್ಟು ಶ್ರಮಿಸಬೇಕಾದ ಇಂದಿನ ಅಗತ್ಯವಿದೆ ಎಂದರು.
ಕಾರ್ಯಕ್ರಮದಲ್ಲಿ ಸ್ಥಳೀಯ ನ್ಯಾಯಾಲಯದ ವಿವಿಧ ವಿಭಾಗಗಳ ನ್ಯಾಯಾಧೀಶರಾದ ಅಣ್ಣುಗೌಡ ಪಾಟೀಲ, ರಾಜೇಶ ಕಮತೆ, ಜೆ.ಯೋಗೇಶ, ಜಿ.ವಿ.ಕುಲಕರ್ಣಿ, ನಿರ್ಮಲಾ ಮುನವಳ್ಳಿಮಠ, ಉಪಾಧ್ಯಕ್ಷ ಕೆ.ಡಿ.ಮಡಿವಾಳರ, ಪಿ.ಪಿ.ಮುರುಗೇಶ ಅಂಕದ, ಕಾರ್ಯದರ್ಶಿ ಜಿ.ಕೆ.ಮುಂಡಾಸದ, ಕೆ.ಎನ್.ಕೋರಧಾನ್ಯಮಠ, ಚಂದ್ರು ಕರೇಗೌಡ್ರ, ಎಸ್.ಎಸ್.ಮುದ್ದಪ್ಪಳವರ, ವಿಠಲ ಪುಠಾಣಿಕರ, ಎಸ್.ಎಚ್.ಸಿದ್ದಪ್ಪನವರ, ಎಲ್.ಎಫ್.ಕೆಂಗೊಂಡ, ಬಿ.ಆರ್.ಮಡಿವಾಳರ, ಹೆಚ್.ಜಿ.ಅಂಜಿ, ಎಸ್.ವಿ.ತೋಗರ್ಶಿ, ಸವಿತಾ ಮುಂಡಾಸದ, ಸುಮಾ ಸಾವುಕಾರ, ಅನುಪಮ ಕಣವಿ, ಸರೋಜಾ ಹೂಲಿಹಳ್ಳಿ, ಎಮ್.ಎಚ್.ಗೌಳಿ, ದೀಲೀಪ ಹಳ್ಳಳ್ಳಿ, ಪ್ರಕಾಶ ಸೇರಿದಂತೆ ಮತ್ತಿತರ ವಕೀಲರು ನ್ಯಾಯಾಲಯದ ಸಿಬ್ಬಂದಿ, ಗಣ್ಯರು ಪಾಲ್ಗೊಂಡಿದ್ದರು.