ದೇಶದ ಶಿಕ್ಷಣ ವ್ಯವಸ್ಥೆ ಸುಮಾರು 10 ವರ್ಷ ಹಿಂದಕ್ಕೆ ಹೋಗಿದೆ: ಡಾ. ವೀರಣ್ಣಾ ವಿಷಾದ
ಲೋಕದರ್ಶನ ವರದಿ
ಶಿಗ್ಗಾವಿ 16: ಕೊರೊನಾ ಮೂರು ಅಲೆಯಿಂದ ಈಗಾಗಲೇ ದೇಶದಲ್ಲಿ ಶಿಕ್ಷಣದ ಮಟ್ಟ ಶೇ 50 ರಷ್ಟು ಕುಸಿತ ಕಂಡು ದೇಶದ ಮಕ್ಕಳು ಶಿಕ್ಷಣದಿಂದ ವಂಚಿತರಾಗಿ ದೇಶದ ಶಿಕ್ಷಣ ವ್ಯವಸ್ಥೆ ಸುಮಾರು 10 ವರ್ಷ ಹಿಂದಕ್ಕೆ ಹೋಗಿದೆ ಎಂದು ಪಟ್ಟಣದ ಜನಪ್ರಿಯ ವೈದ್ಯ ಡಾ. ಬಿ.ಹೆಚ್. ವೀರಣ್ಣಾ ವಿಷಾದ ವ್ಯಕ್ತಪಡಿಸಿದರು.
ಪಟ್ಟಣದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಗುರುಬ್ರಹ್ಮಗುರು ವಿಷ್ಣು, ಗುರುದೇವೋ ಮಹೇಶ್ವರ ಎಂಬ ನಾಣ ನುಡಿಯ ಪ್ರಕಾರಮಕ್ಕಳು ತಂದೆ-ತಾಯಿ ಮತ್ತು ಕುಟುಂಬದ ಸದಸ್ಯರ ಮಾತು ಕೇಳದೆ ಇರಬಹುದು ಆದರೆ ಗುರುಗಳ ಮಾತನ್ನು ಯಥಾವತ್ತಾಗಿ ಶ್ರದ್ದೆಯಿಂದ ಪಾಲಿಸುತ್ತಾರೆ ಕಾರಣಗುರುಗಳು ಮನಸ್ಸು ಮಾಡಿದರೇ ಏನು ಬೇಕಾದರೂ ಮಾಡಬಹುದು ಎಂಬುದಕ್ಕೆ ಈಗ ದೇಶದತುಂಬ ಬುಗಿಲೆದ್ದಿರುವ ಹಿಜಾಬ ಸಂಸ್ಕೃತಿಯ ಬಗ್ಗೆ ಸರಕಾರಗಳು ಮದ್ಯವಹಿಸದೇ ಆಯಾ ಶಿಕ್ಷಣ ಸಂಸ್ಥೆಗಳಿಗೆ ಜವ್ದಾಬಾರಿ ನೀಡಿದರೆ ಅತಂಹ ಶಿಕ್ಷಣ ಸಂಸ್ಥೆಯ ಗುರುಗಳ ಮುಖಾಂತರ ಮಕ್ಕಳ ಮನಪರಿವರ್ತನೆ ಮಾಡಿ ವಿವಾದವನ್ನುಹಂತ ಹಂತವಾಗಿ ಬಗೆಹರಿಸಲು ಸಹಾಯವಾಗುತ್ತದೆ ಎಂದರು.
ಹಿಜಾಬ ಸಂಸ್ಕೃತಿಯ ಬಗ್ಗೆ ಅವರು ಇವರು ಮಾತನಾಡಿ ಗೊಂದಲ ಸೃಷ್ಟಿಸಿ ದೇಶದ ಹಾಗೂ ರಾಜ್ಯದ ವಾತಾವರಣ ಹದಗೆಡುತ್ತಿದೆ ಮತ್ತು ಕೆಲವೊಂದು ಪುಂಡ ಪೋಕರಿಗಳಿಗೆ ವೈಯಕ್ತಿಕ ಪ್ರತಿಷ್ಠೆ ಮತ್ತು ಪ್ರಚೋದನೆ ನೀಡಿದಂತಾಗುತ್ತದೆ ಕಾರಣಯಾರು ಸಹಿತ ಮದ್ಯಸ್ಥಿಕೆ ವಹಿಸದೇ ಆಯಾ ಶಿಕ್ಷಣ ಸಂಸ್ಥೆಗಳ ಅಯಾ ಗುರುಗಳ ನೇತೃತ್ವದಲ್ಲಿ ಹಿಜಾಬ ದರಿಸುವವರನ್ನು ಮತ್ತು ಶ್ಯಾಲು ಹಾಕುವವರ ಇಬ್ಬರನ್ನು ಕರೆಸಿ ಅವರಿಗೆ ವೈಯಕ್ತಿಕವಾಗಿ ಆಪ್ತಸಮಾಲೋಚನೆ ಮಾಡಿದರೇ ಹಂತ ಹಂತವಾಗಿ ಈ ಸಮಸ್ಯೆಯನ್ನು ಬಗೆಹರಿಸಲು ಹಾಗೂ ಸಂಯೋಜಿತ ಶಿಕ್ಷಣ ವ್ಯವಸ್ಥೆಯಿದ್ದಲ್ಲಿ ಶಿಕ್ಷಣ ಮೂಲಭೂತ ಹಕ್ಕಾಗಿರುವುದರಿಂದ ಕಷ್ಟದಾಯಕವಾಗಿದ್ದು ಪೋಲಿಸ ವ್ಯವಸ್ಥೆ, ನ್ಯಾಯಾಲಯದಲ್ಲಿಯೂ ಸಹಿತಇದರ ಬಗ್ಗೆ ತೀರ್ುಕೊಡುವುದು ಕ್ಲಿಷ್ಟಕರವಾಗುತ್ತದೆ ಎಂದರು.
ಆದ್ದರಿಂದ ಸ್ವಲ್ಪ ದಿನದ ಮಟ್ಟಿಗೆ ಗುರುಗಳಿಗೆ ಹೆಚ್ಚಿನ ಜವ್ದಾಬಾರಿವಹಿಸಿ ಪ್ರತಿನಿತ್ಯಅವರ ಮುಖಾಂತರಅನುಸರಣೆ ಮಾಡಿದರೇ ಈ ಸಮಸ್ಯೆಯನ್ನು ಹಂತ ಹಂತವಾಗಿ ಬಗೆಹರಿಸಲು ಸಾದ್ಯವಿದೆ ಹೊರತು ಬೇರೆಯಾವುದೇತಂತ್ರಗಾರಿಕೆಯಿಂದ ಆಗುವುದಿಲ್ಲ ಎಂದರು.