ರಾಣೆಬೆನ್ನೂರ

ಎಲ್ಲ ರಾಷ್ಟ್ರಗಳಿಗಿಂತಲೂ ದೇಶದ ಸಂವಿಧಾನ ವಿಶೇಷವಾಗಿದೆ: ಕುಲಕರ್ಣಿ

ಎಲ್ಲ ರಾಷ್ಟ್ರಗಳಿಗಿಂತಲೂ ದೇಶದ ಸಂವಿಧಾನ ವಿಶೇಷವಾಗಿದೆ: ಕುಲಕರ್ಣಿ

ರಾಣೇಬೆನ್ನೂರು 26:  ದೇಶದ ಸಂವಿಧಾನ ಎಲ್ಲ ರಾಷ್ಟ್ರಗಳಿಗಿಂತಲೂ ವಿಶೇಷತೆಯಿಂದ ಕೊಡಿದೆ. ಸಂವಿಧಾನದ ಮೂಲಕ ಆಶೆಯನ್ನು ಪ್ರತಿಯೊಬ್ಬ ನಾಗರೀಕರು ಅರಿತುಕೂಂಡು ಕನಿಷ್ಟ ಜ್ಞಾನವನ್ನು ಹೊಂದಿದಾಗ ಮಾತ್ರ ಸಂವಿಧಾನದ ಉದ್ಧೇಶ ಮತ್ತು ಅದರ ಆಶಯಗಳನ್ನು ಸಮರ್ಪಕವಾಗಿ ಅನುಷ್ಠಾನಗೂಳಿಸಲು ಸಾಧ್ಯವಾಗುವುದು ಎಂದು ಹೆಚ್ಚುವರಿ ಹಿರಿಯ ದಿವಾಣಿ ನ್ಯಾಯಾಧೀಶ ಜಿ.ವ್ಹಿ ಕುಲಕರ್ಣಿ ಹೇಳಿದರು. 

ಅವರು ಶುಕ್ರವಾರ ಇಲ್ಲಿನ ಕೆ.ಎಲ್.ಈ ಶಿಕ್ಷಣ ಸಂಸ್ಥೆಯ ರಾಜ ರಾಜೇಶ್ವರಿ ಕಲಾ, ವಾಣಿಜ್ಯ ಮಹಿಳಾ ಮಹಾ ವಿದ್ಯಾಲಯದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ವಕೀಲರ ಸಂಘ ಆಯೋಜಿಸಿದ್ದ ಸಂವಿಧಾನ ದಿನಾಚರಣೆ ಮತ್ತು ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ರಾಷ್ಟ್ರೀಯ ಕಾನೂನು ಪ್ರಾಧಿಕಾರವು ಸಮಾಜದ ಕಟ್ಟ ಕಡೆಯ ಮನುಷ್ಯನಿಗೂ ಸಹ ಇದರ ಅರಿವು ಇರಬೇಕು. ಇದರಿಂದ ಸಮಾಜದಲ್ಲಿ ಕಾನೂನು ಬಾಹೀರ ಚಟುವಟಿಕೆಗಳು ತಡೆಯಲು ಸಾಧ್ಯವಿದೆ ಎನ್ನುವ ಬಹು ದೂರ ದೃಷ್ಠಿಯಿಂದ ಯೋಜನೆಯನ್ನು ಜಾರಿಗೆ ತಂದಿದೆ. ಅದನ್ನು ಪರಿಪೂರ್ಣವಾಗಿ ಪ್ರಸಾರಪಡಿಸುವ ಮತ್ತು ಜನಜಾಗೃತಿಗೂಳಿಸುವ ಕರ್ತವ್ಯ ಎಲ್ಲ ಸಂಘ ಸಂಸ್ಥೆಗಳು ಶಿಕ್ಷಣ ಸಂಸ್ಥೆಗಳು ಮಾಡಬೇಕಾದ ಅಗತ್ಯವಿದೆ ಎಂದರು.

ಆಜಾದಿ ಕಾ  ಅಮೃತ ಮಹೋತ್ಸವದ ನಿಮಿತ್ತವಾಗಿ ವರ್ಷದುದ್ದಕ್ಕೂ ಕಾನೂನು ಅರಿವು ನೆರವು ಜಾಗೃತಿ ಶಿಭಿರಗಳ ಮೂಲಕ ಗ್ರಾಮೀಣ ಪ್ರದೇಶಗಳ ಪ್ರತಿಯೊಂದು ಗ್ರಾಮಗಳ ಪಂಚಾಯಿತಿ ವ್ಯಾಪ್ತಿಯಲಿ,್ಲ ಮನೆ ಮನೆಗಳಿಗೆ ಭೆಟಿ ನೀಡುವುದರ ಮೂಲಕ ಅರಿವನ್ನು ಮೂಡಿಸುವ ಅಭಿಯಾನವನ್ನು ಇತ್ತೀಚಿಗಷ್ಟೇ ಕಾನೂನು ಸೇವಾ ಸಮಿತಿಯು ನೆರವೆರಿಸಿದೆ ಎಂದ ಅವರು ಬೇರೆ ಬೇರೆ ರೋಪದಲ್ಲಿ ಮತ್ತಿತರೆ ಕಾರ್ಯಕ್ರಮಗಳನ್ನು ನೆರವೆರಿಸುವ ಯೋಜನೆ ಸಮಿತಿಯಲ್ಲಿದೆ ಇದಕ್ಕೆ ಎಲ್ಲರು ಕೈ ಜೊಡಿಸಿ ಕಾನೂನು ಪ್ರಾಧಿಕಾರದ ಉದ್ದೇಶಿತ ಯೋಜನೆ ಯಶಸ್ವಿಗೂಳಿಸಲು ಮುಂದಾಗಬೇಕು ಎಂದು ಕರೆ ನೀಡಿದರು. 

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ, ಸ್ಥಳಿಯಸಂಸ್ಥೆಯ  ಕಾರ್ಯಾಧ್ಯಕ್ಷ  ವ್ಹಿ. ಪಿ. ಲಿಂಗನಗೌಡ್ರ ಅವರು ಮಾತನಾಡಿ ಸಮಾಜದಲ್ಲಿ ಶಾಂತಿ ನೆಮ್ಮದಿ ಮತ್ತು ಭಾವೈಕ್ಯತೆಯ ಬದುಕನ್ನು ಸಾಗಬೇಕಾದರೆ ಕಾನೂನಿನ ಜ್ಞಾನ ಅಗತ್ಯ ಮತ್ತು ಅವಶ್ಯವಾಗಿದೆ. ನ್ಯಾಯದಾನವು ಸಹ ಶೀಘ್ರವಾಗಿ ಈಡೇರಬೇಕಾಗಿದೆ. ಇದರಿಂದ ಜನ ಸಾಮಾನ್ಯರು ನ್ಯಾಯಾಲಯದ ಅಂಗಳಕ್ಕೆ ಅಲೆದಾಡುವುದನ್ನು ತಪ್ಪಿದಂತಾಗುತ್ತದೆ. ರಾಷ್ಟ್ರೀಯ ಕಾನೂನು ಪ್ರಾಧಿಕಾರದ ಯೋಜನೆಗಳು  ಶೀಘ್ರ ನ್ಯಾಯದಾನದ ಅಡಿಯಲ್ಲಿ ಸಾಗುತ್ತಿರುವುದು ಅತ್ಯಂತ ಸಂತೋಷದ ಸಂಗತಿಯಾಗಿದೆ.  ಇಂತಹ ಅರಿವು ನೆರವು ಶಿಭಿರಗಳು ಹೆಚ್ಚು ಹೆಚ್ಚಾಗಿ ನಡೆಯಬೇಕಾದ ಇಂದಿನ ಅಗತ್ಯವಿದೆ ಎಂದರು. 

ವೇದಿಕೆಯಲ್ಲಿ ವಕೀಲರ ಸಂಘದ ಉಪಾಧ್ಯಕ್ಷ ಕುಮಾರ ಡಿ ಮಡಿವಾಳರ, ಕಾರ್ಯದರ್ಶಿ ಜಿ.ಕೆ ಮುಂಡಾಸದ, ಸದಸ್ಯ ಶ್ರೀ ಬಿ.ಎಸ್.ಪಟ್ಟಣಶಟಿ,್ಟ ಪ್ರಾಚಾರ್ಯ ನಾರಾಯಣ ಹೆಗಡೆ,  ಸೇರಿದಂತೆ ಮತ್ತಿತರ ಗಣ್ಯರು  ಉಪನ್ಯಾಸಕರು ಉಪಸ್ಥಿತರಿದ್ದರು.

ವಿಶೇಷ ಉಪನ್ಯಾಸಕರಾಗಿ ಪಾಲ್ಗೂಂಡಿದ್ದ ಕಾನೂನು ಮಹಾವಿದ್ಯಾಲಯದ ಪ್ರೊ. ರಮೇಶ ಬಿ ಅವರು ಸಂವಿಧಾನದ ವಿಶೇಷತೆ ಮತ್ತು ಬದ್ದತೆ ಕುರಿತು ಉಪನ್ಯಾಸ ನೀಡಿದರು. ನಿವೇದಿತ, ಕಾವ್ಯ  ಪ್ರಾರ್ಥಿಸಿದರು. ಪ್ರಾಚಾರ್ಯ ಪ್ರೊ. ನಾರಾಯಣ ನಾಯಕ ಸ್ವಾಗತಿಸಿದರು, ಸುಜಾತ. ಹುಲೂರ ಪರಿಚಯಿಸಿದರು. ಶಬರಿ ನಿರೂಪಿಸಿ, ಪ್ರೊ. ಕವಿತಾ  ವಂದಿಸಿದರು.

ಸುದ್ದಿ ಓದಿ