ದೇಶದ ಸಮಗ್ರ ಅಭಿವೃದ್ಧಿಗೆ ಸುಭದ್ರ ಶಾಸನದ ಅವಶ್ಯಕತೆ ಇದೆ: ಚಿನ್ನಿಕಟ್ಟಿ
ಲೋಕದರ್ಶನ ವರದಿ
ರಾಣಿಬೆನ್ನೂರ 30: ಸ್ವತಂತ್ರ ಭಾರತದ ಹಿಂದಿನ ವೈಭೋಗವನ್ನು ಮರುಕಳಿಸಲು ಮತ್ತು ದೇಶದ ಸಮಗ್ರ ಅಭಿವೃದ್ಧಿ ಆಡಳಿತವನ್ನು ಮಾಡಲು ಒಂದು ಸುಭದ್ರ ಶಾಸನದ ಅವಶ್ಯಕತೆ ಇತ್ತು. ಆ ಸುಭದ್ರ ಶಾಸನವನ್ನು ತಯಾರಿಸಲು ಅಂದಿನ ಹಿರಿಯ ನಾಯಕರುಗಳು ಹಾಗೂ ವಿಧ್ವಾಂಸರು ಒಗ್ಗೂಡಿ ಭವ್ಯ ಭಾರತಕ್ಕೆ ಒಂದು ಮಾದರಿ ಶಾಸನವನ್ನು ಸಂವಿಧಾನದ ರೂಪದಲ್ಲಿ ತಯಾರಿಸಿದರು. ಸದರಿ ಸಂವಿಧಾನವನ್ನು ದೇಶಕ್ಕೆ ಅಳವಡಿಸಿದ ದಿನವನ್ನು ಗಣರಾಜ್ಯೋತ್ಸವ ದಿನವನ್ನಾಗಿ ನಾವು ನಿವೇಲ್ಲರೂ ಆಚರಿಸುತ್ತಾ ಬಂದಿರುತ್ತೇವೆ ಎಂದು ನಗರಸಭೆ ಅಧ್ಯಕ್ಷೆ ರೂಪಾ ಚಿನ್ನಿಕಟ್ಟಿ ಹೇಳಿದರು.
ನಗರದ ಅಶೋಕ ಸರ್ಕಲ್ನಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಏರಿ್ಡಸಲಾಗಿದ್ದ 73ನೇ ಗಣರಾಜ್ಯೋತ್ಸವದ ಪ್ರಯುಕ್ತ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ವಿಶ್ವದಲ್ಲಿಯೇ ಅತೀ ದೊಡ್ಡ ಹಾಗೂ ಲಿಖಿತ ಸಂವಿಧಾನವನ್ನು ಹೊಂದಿರುವ ನಾವು ಆ ಸಂವಿಧಾನಕ್ಕೆ ಪ್ರತಿದಿನ ಗೌರವಪೂರ್ವಕವಾಗಿ ನಡೆದುಕೊಳ್ಳಬೇಕಾಗಿರುತ್ತದೆ. ಸಂವಿಧಾನದ ರಚನೆಗೆ ಕಾರಣರಾದ ಡಾಽಽಬಿ.ಆರ್.ಅಂಬೇಡ್ಕರ್ ಹಾಗೂ ತಂಡವನ್ನು ಈ ದಿನ ನಾವು ನೆನಪಿಸಿಕೊಳ್ಳುತ್ತಾ, ಅವರ ಆದರ್ಶಗಳನ್ನು ಹಾಗೂ ಸಲಹೆಗಳನ್ನು ಪಾಲಿಸಲು ಬದ್ಧರಾಗಿರಬೇಕಾಗಿದೆ. ಇಂದಿನ ಗಣರಾಜ್ಯೋತ್ಸವ ದಿನ ನಾವೇಲ್ಲರು ಇದರ ಬಗ್ಗೆ ಕಾರ್ಯೋನ್ಮುಖರಾಗೋಣ ಎಂದರು.
ವೈವಿಧ್ಯತೆಯಲ್ಲಿ ಏಕತೆ, ಸರ್ವಧರ್ಮ ಸಮನ್ವಯತೆ ಭಾರತದ ವಿಶೇಷತೆ. ಇಂತಹ ವಿಶೇಷತೆ ಇರುವ ದೇಶದ ಪ್ರಜೆಗಳಾದ ನಾವುಗಳೇ ಧನ್ಯರು. ಸ್ವಾಂತತ್ರಕ್ಕಾಗಿ ಹೋರಾಟ ಮಾಡಿದ ಮಹನೀಯರ ಆಶಯಗಳನ್ನು ಈಡೇರಿಸಬೇಕಾಗಿದ್ದು, ಇದಕ್ಕಾಗಿ ಭಾರತದ ಸರ್ವೋತೋಮುಖ ಅಭಿವೃದ್ಧಿಗಾಗಿ ನಾವೇಲ್ಲರೂ ಹೆಚ್ಚು ದುಡಿಯಬೇಕಾಗಿರುತ್ತದೆ ಎಂದರು.
ರಾಷ್ಟ್ರಪಿತ ಗಾಂಧೀಜೀಯವರ ಕನಸನ್ನು ನನಸಾಗಿಸಲು ಹೊರಟಿರುವ ಈಗಿನ ಪ್ರಧಾನ ಮಂತ್ರಿಗಳು ಸ್ವಚ್ಚ-ಭಾರತ ಆಂದೋಲನವನ್ನು ಪ್ರಾರಂಭಿಸಿ ದೇಶದ ಅ-ನೈರ್ಮಲ್ಯವನ್ನು ಸಂಪೂರ್ಣವಾಗಿ ಹೊಡೆದೊಡಿಸಲು ಪ್ರಯತ್ನಿಸುತ್ತಿರುವ ಪ್ರಧಾನ ಮಂತ್ರಿಗಳ ಅತ್ಯುನ್ನತ ಕಾರ್ಯಕ್ರಮಕ್ಕೆ ನಾವೆಲ್ಲರು ಸಹಕಾರ ನೀಡಿ ಯಶಸ್ವಿಗೊಳಿಸಬೇಕಾಗಿರುತ್ತದೆ ಎಂದರು.
ಭಾರತದೇಶಕ್ಕೆ ವ್ಯಾಪಿಸುತ್ತಿರುವ ಓಮಿಕ್ರಾನ್, ಕೋವಿಡ್-19 ರ ಮೂರನೇ ಹಂತದ ವೈರಸನ್ನು ಹಂತ-ಹಂತವಾಗಿ ನಿಯಂತ್ರಣಕ್ಕೆ ತರಲು ಅವಿರತವಾಗಿ ಹೋರಾಡುತ್ತಿರುವ ಘನ ಸರ್ಕಾರಕ್ಕೆ, ಜಿಲ್ಲಾಡಳಿತ, ತಾಲ್ಲೂಕ ಆಡಳಿತ, ಆರೋಗ್ಯ ಇಲಾಖೆ, ಪೋಲಿಸ ಇಲಾಖೆ ಮತ್ತು ನಗರಸಭೆಗಳಿಗೆ ಈ ಸಂದರ್ಭದಲ್ಲಿ ನಾನು ಧನ್ಯವಾದಗಳನ್ನು ತಿಳಿಸುತ್ತೇನೆ ಹಾಗೂ ಎಲ್ಲ ನಾಗರಿಕರು ಕೋವಿಡ್-19 ರ ನಿಯಮಗಳನ್ನು ಪಾಲಿಸುವುದರ ಜೊತೆಗೆ ಕಡ್ಡಾಯವಾಗಿ ಮಾಸ್ಕ ಧರಿಸಬೇಕು ಮತ್ತು ಎಲ್ಲರೂ ಕಡ್ಡಾಯವಾಗಿ ವ್ಯಾಕ್ಸೀನೇಷನ್ ಪಡೆದುಕೊಂಡು ಸಹಕರಿಸೋಣ ಎಂದರು.
ನಗರದಲ್ಲಿ ಈಗಾಗಲೇ ಘನತ್ಯಾಜ್ಯ ವಸ್ತು ನಿರ್ವಹಣಾ ವ್ಯವಸ್ಥೆಯನ್ನು ಜಾರಿಗೆ ತಂದಿದ್ದೂ ಪ್ರತಿ ದಿನ ಮನೆ ಬಾಗಿಲಿಗೆ ಕಸದ ವಾಹನ ಬಂದು ಕಸವನ್ನು ಸಂಗ್ರಹಿಸಲಾಗುತ್ತಿದೆ ಸಾರ್ವಜನಿಕರು ನೀಡುವ ಹಸಿ ಕಸದಿಂದ ಗೊಬ್ಬರವನ್ನು ತಯಾರಿಸಿ ಮಾರಾಟ ಮಾಡಲಾಗುತ್ತಿದೆ ಒಣ ತ್ಯಾಜ್ಯವನ್ನು ಮರು ಬಳಕೆ ಮಾಡಲು ಕ್ರಮವಹಿಸಿ ಪ್ಲಾಸ್ಟೀಕ್ ತ್ಯಾಜ್ಯವನ್ನು ಸಿಮೇಂಟ್ ಕಾರ್ಖಾನೆಗೆ ಕಳುಹಿಸಲಾಗುತ್ತಿದೆ ತ್ಯಾಜ್ಯ ಸಂಸ್ಕರಣೆಯನ್ನು ಇನ್ನಷ್ಟು ಉತ್ತಮಗೊಳಿಸಲು ಅಂದಾಜು ರೂ;87.00 ಲಕ್ಷಗಳ ಯಂತ್ರೋಪಕರಣವನ್ನು ಖರೀದಿ ಮಡಲಾಗುತ್ತಿದೆ ಅಲ್ಲದೆ ನಗರದ ನಿತ್ಯ ಸಮಸ್ಯಯಾದ ಪ್ಲಾಸ್ಟೀಕ್ ಬಾಟಲ್ ಗಳ ವಿಲೇವಾರಿಗೆ ಶ್ರೆಡ್ಡಿಂಗ ಯಂತ್ರೋಪಕರಣವನ್ನು ಸಾರ್ವಜನಿಕ ಉಪಯೋಗಕ್ಕಾಗಿ ಮೋಬೈಲ್ ಟಾಯಲೆಟ್ ವ್ಯವಸ್ಥೆಯನ್ನು ಮಾಡಲಾಗುತ್ತಿದೆ. ಸಾರ್ವಜನಿಕರು ಪ್ರತಿ ದಿನ ಕಸವನ್ನು ಹಸಿಕಸ - ಒಣಕಸ ಹಾನಿಕಾರಕ ಕಸವೆಂದು ವಿಂಗಡಿಸಿ ಕಸ-ಸಂಗ್ರಹಕರಿಗೆ ನೀಡಿ ನಗರದ ಸ್ವಚ್ಚತೆಯನ್ನು ಕಾಪಾಡಲು ಸಹಕರಿಸಬೇಕೆ ಎಂದು ರೂಪಾ ಚಿನ್ನಿಕಟ್ಟಿ ಕರೆ ನೀಡಿದರು.
ನಗರಸಭಾ ಉಪಾಧ್ಯಕ್ಷೆ ಕಸ್ತೂರಿ ಚಿಕ್ಕಬಿದರಿ, ತಹಶೀಲ್ದಾರ ಶಂಕರ ಜಿ.ಎಸ್, ಪೌರಾಯುಕತ ಉದಯಕುಮಾರ ಬಿ.ಟಿ, ಡಿವೈಎಸ್ಪಿ ಟಿ.ವಿ.ಸುರೇಶ, ನಗರಯೋಜನ ಪ್ರಾಧಿಕಾರದ ಅಧ್ಯಕ್ಷ ಚೋಳಪ್ಪ ಕಸವಾಳ, ಅರಣ್ಯ ಕೈಗಾರಿಕ ನಿಗಮದ ನಿರ್ದೇಶಕಿ ಭಾರತಿ ಜಂಬಿಗಿ, ನಗರಸಭಾ ಸದಸ್ಯರು ಸೇರದಂತೆ ಮತ್ತಿರರು ಇದ್ದರು.