ಎಲಬುರ್ಗ

ಆರಿದ್ರಾ ಮಳೆಗೆ ರೈತನ ಜಮೀನಲ್ಲಿ ತುಪ್ಪರಿ ಬೆಳೆ ಹಾನಿ

ಆರಿದ್ರಾ ಮಳೆಗೆ ರೈತನ ಜಮೀನಲ್ಲಿ ತುಪ್ಪರಿ ಬೆಳೆ ಹಾನಿ

ಯಲಬುರ್ಗಾ ಜು.08: ತಾಲೂಕಿನ ನಾನಾ ಗ್ರಾಮಗಳಲ್ಲಿ ಸುರಿದ ಮಳೆಗೆ ಅಪಾರ ಹಾನಿ ಉಂಟು ಮಾಡಿದೆ. ಆರಿದ್ರಾ ಮಳೆಗೆ ತಾಲೂಕು ವ್ಯಾಪ್ತಿಯ ಹಿರೇವಂಕಲಕುಂಟಾ ಮಂಗಳೂರು, ಮುಧೋಳ, ಚಿಕ್ಕಮ್ಯಾಗೇರಿ,ಯಲಬುರ್ಗಾ ಹೋಬಳಿ ಸೇರಿದಂತೆ ಇನ್ನಿತರಡೆ ಮಳೆ ಸುರಿದ ಪರಿಣಾಮವಾಗಿ ರೈತರ ಜಮೀನಲ್ಲಿ ಬೆಳೆದ ಬೆಳೆಗಳು ಸಂಪೂರ್ಣ ನಷ್ಟ ಭರಿಸಿದೆ.ಇನ್ನೊಂದರೆ ಗ್ರಾಮೀಣ ಭಾಗದಲ್ಲಿನ ರೈತರ ಜಮೀನಲ್ಲಿ ಗಾಳಿ ಗುಡುಗು ಸಿಡಿಲಿನ ಅಬ್ಬರಕ್ಕೆ ಅನ್ನದಾತರು ತತ್ತರಿಸುವಂತಾಗಿದೆ. ಕೆಲವಡೆ ಎತ್ತುಗಳು ಸಿಡಿಲಿನ ಬಡಿತಕ್ಕೆ ಮೃತ ಪಟ್ಟಿರುವ ಘಟನೆ ಸಂಭವಿಸಿದೆ. ತಾಲೂಕಿ ಹಿರೇವಡ್ರಕಲ್ ಗ್ರಾಮದಲ್ಲಿನ ರೈತ ಶಂಕ್ರ​‍್ಪ ಹೊಳಿಯಪ್ಪ ವಾದಿ ಅವರಿಗೆ ಸೇರಿದ 1 ಎಕರೆ ಜಮೀನಿಲ್ಲಿ ಬೆಳೆಸಲಾದ ತುಪ್ಪರಿ ಬೆಳೆಯು ಮಳೆಗೆ ಸಂಪೂರ್ಣ ನೆಲಕ್ಕಚ್ಚಿದೆ. ಇನ್ನೊಂದಡೆ ಸೀಡ್ಸ್‌ ಬೆಳೆಯ ಪದರಿ ಕಿತ್ತು ಹೋಗಿವೆ. (ಚಿಲ್ಲಿ) ಮೆಣಸು, ಕಲ್ಲಂಗಡಿ,ತುಪ್ಪರಿ,ಸಜೆ,ಮೆಕ್ಕೆ ಜೋಳ ಸೇರಿದಂತೆ ಬೆಳೆಗಳು ಹಾಳಾಗಿದೆ.ಕೃಷಿ ಹೊಂಡ,ಹಳ್ಳಗಳು,ಒಡ್ಡು ತುಂಬಿ  ತುಳುಕಿದ್ದು, ಭರ್ಜರಿಯಾಗಿ  ಹರಿದಿವೆ. ಮಸಾರಿ ಭಾಗದಲ್ಲಿ ಅಪಾರ ಹಾನಿಯಾದ ಹಿನ್ನೆಲೆ ಗ್ರಾಮ ಲೆಕ್ಕಧಿಕಾರಿಗಳು,ನಾಡ ಕಚೇರಿ ಅಧಿಕಾರಿಗಳು ಭೇಟಿ ನೀಡಿ ಪರೀಶೀಲನೆ ನಡೆಸಿದರು. 


ಸುದ್ದಿ ಓದಿ