ಬಳ್ಳಾರಿ

“ಸುವರ್ಣ ಬಳ್ಳಾರಿ” ಎಂಬ ಹೆಸರು ಬಹಳ ಪ್ರಸಿದ್ಧಿಯಾಗಿದ ಬಳ್ಳಾರಿ ನಗರದಲ್ಲಿ ಎಲ್ಲೆಡೆ ಕಸ ಮತ್ತು ವಿವಿಧ ರೀತಿಯ ವ್ಯರ್ಥ ಪದಾರ್ಥಗಳು ತುಂಬಿಕೊಂಡಿವೆ

“ಸುವರ್ಣ ಬಳ್ಳಾರಿ” ಎಂಬ ಹೆಸರು ಬಹಳ ಪ್ರಸಿದ್ಧಿಯಾಗಿದ ಬಳ್ಳಾರಿ ನಗರದಲ್ಲಿ ಎಲ್ಲೆಡೆ ಕಸ ಮತ್ತು ವಿವಿಧ ರೀತಿಯ ವ್ಯರ್ಥ ಪದಾರ್ಥಗಳು ತುಂಬಿಕೊಂಡಿವೆ
The city of Bellary, which is famously known as "Golden Bellary", is filled with garbage and various

ಬಳ್ಳಾರಿ 17:   2) ಮಾನ್ಯ ಮಹಾಪೌರರು, ಬಳ್ಳಾರಿ ಮಹಾನಗರ ಪಾಲಿಕೆ, ಬಳ್ಳಾರಿ3) ಮಾನ್ಯ ಆಯುಕ್ತರು, ಬಳ್ಳಾರಿ ಮಹಾನಗರ ಪಾಲಿಕೆ, ಬಳ್ಳಾರಿ4) ಮಾನ್ಯ ಅರಣ್ಯ ಅಧಿಕಾರಿಗಳು, ಅರಣ್ಯ ಇಲಾಖೆಯ ಕಚೇರಿ, ಬಳ್ಳಾರಿಮಾನ್ಯ ಅಧಿಕಾರಿಗಳಾದ ತಮ್ಮಲ್ಲಿ ವಿನಮ್ರವಾಗಿ ವಿನಂತಿಸಿಕೊಳ್ಳುವುದೇನೆಂದರೆ, ಇತ್ತೀಚಿನ ದಿನಗಳಲ್ಲಿ “ಸುವರ್ಣ ಬಳ್ಳಾರಿ” ಎಂಬ ಹೆಸರು ಬಹಳ ಪ್ರಸಿದ್ಧಿಯಾಗಿದೆ. “ಸುವರ್ಣ” ಎಂದರೆ ಬಂಗಾರದಂತೆ ಹೊಳೆಯುವ ಬಳ್ಳಾರಿ ಎಂಬ ಅರ್ಥ. ಆದರೆ ವಾಸ್ತವದಲ್ಲಿ ಬಳ್ಳಾರಿ ನಗರದಲ್ಲಿ ಎಲ್ಲೆಡೆ ಕಸ ಮತ್ತು ವಿವಿಧ ರೀತಿಯ ವ್ಯರ್ಥ ಪದಾರ್ಥಗಳು ತುಂಬಿಕೊಂಡಿವೆ.

ರಾಜ್ ಕಾಲುವೆಗಳು ಕಸದಿಂದ ತುಂಬಿ ದುರ್ವಾಸನೆ ಉಂಟಾಗುತ್ತಿದೆ.ಮುಖ್ಯವಾಗಿ ಬೇಸಿಗೆ ಕಾಲದಲ್ಲಿ ಇದರಿಂದ ರೋಗಗಳು ಹರಡುವ ಸಾಧ್ಯತೆ ಇದೆ. ಆದ್ದರಿಂದ ಕನಿಷ್ಠ ವರ್ಷಕ್ಕೆ ಒಮ್ಮೆ ಆದರೂ ಕಾಲುವೆಗಳನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸುವಂತೆ ಕ್ರಮ ಕೈಗೊಳ್ಳಬೇಕು. ವಿಶೇಷವಾಗಿ ಶ್ರೀರಾಮಪುರ ಕಾಲೋನಿ, ಕೋಲ್ ಬಜಾರ್, ಬಳ್ಳಾರ​‍್ಪ ಕಾಲೋನಿ ಮುಂತಾದ ಪ್ರದೇಶಗಳಲ್ಲಿ ಮನೆಗಳ ಮುಂದೆ ಇರುವ ಉಪ ಕಾಲುವೆಗಳು ದುರ್ವಾಸನೆ ಬೀರುತ್ತಿವೆ. ಆದ್ದರಿಂದ ದಯವಿಟ್ಟು ಈ ಕಾಲುವೆಗಳನ್ನು ಕನಿಷ್ಠ ವಾರಕ್ಕೊಮ್ಮೆ ಸ್ವಚ್ಛಗೊಳಿಸುವಂತೆ ಕ್ರಮ ಕೈಗೊಳ್ಳುವಂತೆ ವಿನಂತಿಸುತ್ತೇವೆ.

ಇನ್ನೂ ಪ್ರಮುಖವಾಗಿ, ಎಲ್ಲೆಡೆ ಫುಟ್ಪಾತ್ ಮೇಲಿನ ವ್ಯಾಪಾರಸ್ಥರು ಹಾಗೂ ಕೆಲ ನಿವಾಸಿಗಳು ಎಷ್ಟೇ ಹೇಳಿದರೂ ಕೂಡ ಕಸ (ಹಸಿಕಸ)ವನ್ನು ರಸ್ತೆ ಮೇಲೆ ಬಿಸಾಡುವ ಅಭ್ಯಾಸ ಮಾಡಿಕೊಂಡಿದ್ದಾರೆ. ಇದಕ್ಕೆ ಮಹಾನಗರ ಪಾಲಿಕೆಯ ನಿರ್ಲಕ್ಷ್ಯವೂ ಕಾರಣವಾಗಿದೆ. ಆದ್ದರಿಂದ ಸಿಸಿ ಕ್ಯಾಮೆರಾಗಳ ಮೂಲಕ ಕಸ ಬಿಸಾಡುವವರನ್ನು ಗುರುತಿಸಿ, ಯಾರೇ ಆಗಿದ್ದರೂ ಅವರಿಗೆ ?5,000 ದಂಡ ವಿಧಿಸಿ, ಪತ್ರಿಕಾ ಹಾಗೂ ಮಾಧ್ಯಮಗಳ ಮೂಲಕ ಪ್ರಕಟಿಸಿದರೆ ಇತರರು ಕೂಡ ಕಸ ಬಿಸಾಡಲು ಭಯಪಡುತ್ತಾರೆ.ಹೀಗಾಗಿ ದಯವಿಟ್ಟು ಬೇಸಿಗೆ ಕಾಲದಲ್ಲಿ ರಾಜ್ ಕಾಲುವೆಗಳನ್ನು ಸ್ವಚ್ಛಗೊಳಿಸಿ, ರಸ್ತೆ ಮೇಲಿನ ಕಸವನ್ನು ತೆರವುಗೊಳಿಸಿ, ಧೂಳು ಮತ್ತು ದುರ್ವಾಸನೆ ಇಲ್ಲದ ಸ್ವಚ್ಛವಾದ ಬಳ್ಳಾರಿಯನ್ನು ನಿರ್ಮಿಸುವಂತೆ ಕ್ರಮ ಕೈಗೊಳ್ಳಬೇಕು.

ಆಗ ಮಾತ್ರ “ಸುವರ್ಣ ಬಳ್ಳಾರಿ” ಎಂಬ ಹೆಸರಿಗೆ ನಿಜವಾದ ಅರ್ಥ ಬರುತ್ತದೆ.ಇನ್ನೂ ಅರಣ್ಯ ಇಲಾಖೆಯವರು ಹಾಗೂ ಎಂಎಲ್‌ಎ ಅನುದಾನದಿಂದ ನೆಡಲಾಗಿರುವ ಗಿಡಗಳು ನೀರು ಸಿಗದೆ ಒಣಗಿಹೋಗುತ್ತಿರುವುದು ಕಂಡುಬರುತ್ತಿದೆ. ಉದಾಹರಣೆಗೆ ಎಸ್‌.ಎಚ್ 132 ರಸ್ತೆಯಲ್ಲಿರುವ ಗಿಡಗಳು ಮತ್ತು ಮರಗಳು ಇದಕ್ಕೆ ಸಾಕ್ಷಿಯಾಗಿದೆ.ಈ ಗಿಡಗಳನ್ನು ಸಂರಕ್ಷಿಸುವುದು ಮಳೆಗಾಲದಲ್ಲಿ ಅಲ್ಲ, ಮುಖ್ಯವಾಗಿ ಬೇಸಿಗೆ ಕಾಲದಲ್ಲಿ ಅಗತ್ಯವಾಗಿದೆ. ಆದ್ದರಿಂದ ಕನಿಷ್ಠ ವಾರಕ್ಕೊಮ್ಮೆ ರಸ್ತೆಯಲ್ಲಿರುವ ಗಿಡಗಳಿಗೆ ನೀರು ಹಾಕುವ ವ್ಯವಸ್ಥೆ ಮಾಡಬೇಕೆಂದು ವಿನಂತಿಸುತ್ತೇವೆ. ಇಲ್ಲವಾದರೆ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ನೆಡಲಾಗಿರುವ ಗಿಡಗಳು ಒಣಗಿ ಹೋಗುತ್ತವೆ ಮತ್ತು ಪ್ರತಿ ವರ್ಷ ಸಾರ್ವಜನಿಕ ಹಣವನ್ನು ಮತ್ತೆ ಖರ್ಚು ಮಾಡಬೇಕಾಗುತ್ತದೆ. 

ಸುದ್ದಿ ಓದಿ