ದೇಶದ ಎಲ್ಲ ರೈತರಿಗೂ ಕೇಂದ್ರ ಸರ್ಕಾರ ತೊಂದರೆ ನೀಡಿದೆ : ರಾಹುಲ್
ನವದೆಹಲಿ,ಡಿಸೆಂಬರ್ 05: ಎಂಎಸ್ ಪಿ ಮತ್ತು ಎಪಿಎಂಸಿ ಇಲ್ಲದೆ ಬಿಹಾರದ ರೈತರು ಸಂಕಷ್ಟದಲ್ಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಇಡೀ ದೇಶದ ರೈತರನ್ನು ತೊಂದರೆಗೆ
ಸಿಲುಕಿಸಿದ್ದಾರೆ ಎಂದು ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಶನಿವಾರ ಆರೋಪಿಸಿದ್ದಾರೆ.
ಎಂಎಸ್
ಪಿ ಮತ್ತು ಎಪಿಎಂಸಿ ಇಲ್ಲದೆ ಬಿಹಾರದ ರೈತ ತೀವ್ರ ತೊಂದರೆಯಲ್ಲಿದ್ದಾರೆ, ಮತ್ತು ಈಗ ಪ್ರಧಾನಿ ಇಡೀ
ದೇಶವನ್ನು ಒಂದೇ ತೊಂದರೆಗೆ ತಳ್ಳುತ್ತಿದ್ದಾರೆ ಎಂದಿರುವ ರಾಹುಲ್ ಟ್ವೀಟ್ ಮಾಡಿದ್ದು, "ಈ ಪರಿಸ್ಥಿತಿಯಲ್ಲಿ ರೈತರನ್ನು ಬೆಂಬಲಿಸುವುದು ಪ್ರತಿಯೊಬ್ಬರ
ಕರ್ತವ್ಯವಾಗಿದೆ" ಎಂದು ಹೇಳಿದ್ದಾರೆ.
ಎಂಎಸ್
ಪಿ ಸಿಗದ ಕಾರಣ ಸಂಕಷ್ಟದಲ್ಲಿರುವ ಬಿಹಾರ ರೈತರ ವಿಡಿಯೋವನ್ನೂ ರಾಹುಲ್ ಗಾಂಧಿ ಹಂಚಿಕೊಂಡಿದ್ದಾರೆ. ಇದರಲ್ಲಿ ಔರಂಗಾಬಾದ್ನ ರೈತರಿಗೆ ಭತ್ತಕ್ಕೆ ಎಂಎಸ್ಪಿ
ನೀಡಲಾಗಿಲ್ಲ ಮತ್ತು ಅವರ ಬಿಕ್ಕಟ್ಟಿನ ಬಗ್ಗೆ ಸರ್ಕಾರ ಗಮನ ಹರಿಸುತ್ತಿಲ್ಲ. ಭತ್ತದ ಕೃಷಿ ಹಾಳಾಗಿದೆ
ಎಂದು ವಿಡಿಯೋ ಹೇಳಿದೆ.
ಕಾಂಗ್ರೆಸ್
ಸಂವಹನ ಮುಖ್ಯಸ್ಥ ರಂದೀಪ್ ಸಿಂಗ್ ಸುರ್ಜೆವಾಲಾ, “ರಾಜಪ್ರಭುತ್ವವನ್ನು ತ್ಯಜಿಸಿ ಮತ್ತು 'ರಾಜ ಧರ್ಮವನ್ನು
ಅಳವಡಿಸಿಕೊಳ್ಳಿ. ''ಅನ್ನದಾತರ ಕೂಗನ್ನು ಆಲಿಸಿ, ಅನಗತ್ಯ ಕಾನೂನುಗಳನ್ನು ರದ್ದುಗೊಳಿಸಿ. ಇತಿಹಾಸವು
ಎಂದಿಗೂ ಅಹಂಕಾರವನ್ನು ಕ್ಷಮಿಸಿಲ್ಲ, '' ಎಂದು ಟ್ವೀಟ್ ಮಾಡಿದ್ದಾರೆ.