ರಾಷ್ಟ್ರೀಯ

ಈರುಳ್ಳಿ ರಫ್ತು: ನಿರ್ಬಂಧ ಸಡಿಲಗೊಳಿಸಿದ ಕೇಂದ್ರ

ಈರುಳ್ಳಿ ರಫ್ತು:  ನಿರ್ಬಂಧ  ಸಡಿಲಗೊಳಿಸಿದ ಕೇಂದ್ರ

ನವದೆಹಲಿ, ಸೆಪ್ಟೆಂಬರ್ 19: ವಿದೇಶಗಳಿಗೆ ಈರುಳ್ಳಿ ರಫ್ತು ಮಾಡದಂತೆ  ಕೇಂದ್ರ ಸರ್ಕಾರ ಹಾಕಿದ್ದ ನಿರ್ಬಂಧವನ್ನು ಸಡಿಲಗೊಳಿಸಿ  ಈಗಾಗಲೇ ಬಾಂಗ್ಲಾದೇಶ ಸೇರಿದಂತೆ ಇತರೆ  ರಾಷ್ಟ್ರಗಳಿಗೆ  ಈರುಳ್ಳಿ ರಫ್ತು ಮಾಡಲು ಅನುಮತಿ ನೀಡಿದೆ.

ದೇಶದಲ್ಲಿ  ಈರುಳ್ಳಿ ಬೆಲೆಯಲ್ಲಿ ಭಾರೀ ಏರಿಕೆ ಕಂಡುಬಂದಿದ್ದರಿಂದ ಹಾಗೂ ಮಳೆಯಿಂದ ಈರುಳ್ಳಿ ನಾಶವಾದ ಹಿನ್ನೆಲೆ ಎಲ್ಲ ಬಗೆಯ ಈರುಳ್ಳಿ ರಫ್ತಿಗೆ ಕೇಂದ್ರ ಸರ್ಕಾರ ಕಡಿವಾಣ ಹಾಕಿತ್ತು. ಆದರೆ ಈಗ ಅನೇಕ  ಬಂದರಿನಲ್ಲಿ ದಾಸ್ತಾನು  ಮಾಡಲಾಗಿರುವ ಈರುಳ್ಳಿ ಹಾಳಾಗುವ ಮೊದಲು  ನೆರೆಯ ದೇಶಗಳಿಗೆ ರಫ್ತು ಮಾಡಲು  ಅನುಮತಿ ನೀಡಿದೆ.  

ಬಾಂಗ್ಲಾಗೆ ಹೊರಟಿದ್ದ ಈರುಳ್ಳಿ ತುಂಬಿದ ವಾಹನಗಳನ್ನ ಪಶ್ಚಿಮ ಬಂಗಾಳದ ಗಡಿಯ ಬಳಿಯೇ ನಿಲ್ಲಿಸಲಾಗಿತ್ತು. ಈ ಕುರಿತು ಬಾಂಗ್ಲಾದೇಶ ಭಾರತಕ್ಕೆ ದೂರಿದ್ದ ಹಿನ್ನೆಲೆಯಲ್ಲಿ , ರಫ್ತಿನ ಮೇಲಿನ ನಿರ್ಬಂಧವನ್ನು ಸದ್ಯ ತಾತ್ಕಲಿಕವಾಗಿ ಹಿಂಪಡೆಯಲಾಗಿದೆ.

ಈಗಾಗಲೇ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಒಂದು ಕೆ.ಜಿ ಈರುಳ್ಳಿ ಬೆಲೆ ಕೆಜಿಗೆ 40 ರೂಪಾಯಿ ಗಡಿ ದಾಟಿದೆ. ಮುಂದಿನ ದಿನಗಳಲ್ಲಿ 60ರೂಗಿಂತಲೂ ಹೆಚ್ಚಾಗುವ ಸಾಧ್ಯತೆಗಳಿವೆ. 

ಸುದ್ದಿ ಓದಿ