ಕೇಂದ್ರ-ರಾಜ್ಯ ಬಿಜೆಪಿ ಸರ್ಕಾರಗಳು ಸುಳ್ಳು ಉತ್ಪಾದಿಸುವ ಕಾರ್ಖಾನೆಗಳಾಗಿವೆ: ಸಿದ್ದರಾಮಯ್ಯ
ಲೋಕದರ್ಶನ ವರದಿ
ರಾಣಿಬೆನ್ನೂರ 10: ಕೇಂದ್ರ ಮತ್ತು ರಾಜ್ಯದಲ್ಲಿರುವ ಬಿಜೆಪಿ ಸರ್ಕಾರಗಳು ಸುಳ್ಳುಗಳನ್ನು ಉತ್ಪಾದಿಸುವ ಕಾರ್ಖಾನೆಗಳಾ ಗಿವೆ. ಜನರನ್ನು ತಮ್ಮ ಮಾತಿನ ಮೋಡಿಯಿಂದ ಮರಳು ಮಾಡಿ ಸುಳ್ಳನ್ನೇ ಸತ್ಯವನ್ನಾಗಿ ನಂಬಿಸಲು ಬಿಜೆಪಿಯು ಸುಳ್ಳು ಗಳ ಸರಮಾಲೆಯನ್ನೇ ಹೇಳುತ್ತಿದೆ ಎಂದು ಮಾಜಿ ಮುಖ್ಯ ಮಂತ್ರಿ ಹಾಗೂ ವಿಪ ನಾಯಕಲ ಸಿದ್ದರಾಮಯ್ಯನವರ ಗಂಬೀರ ವಾಗಿ ಆರೋಪಿಸಿದರು.
ಅವರು ಇತ್ತೀಚೆಗೆ ಇಲ್ಲಿನ ವಿನಾಯಕ ನಗರದ ಕಾಂಗ್ರೇಸ್ ಕಾರ್ಯಾಲಯದಲ್ಲಿ ಏರಿ್ಡಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ರಾಜ್ಯದಲ್ಲಿ ಯಡಿಯೂರ್ಪ ಮತ್ತು ತದನಂತರ ಬೊಮ್ಮಾಯಿ ಸರ್ಕಾರಗಳು ಸುಳ್ಳುಗಳಲ್ಲಿಯೇ 2 ವರ್ಷ ಅಧಿಕಾರ ಪೂರೈಸಿದವು. ಈ ಅವಧಿಯಲ್ಲಿ ಹೇಳಿಕೊಳ್ಳುವಂತಹ ಅಭಿವೃದ್ಧಿ ಕಾರ್ಯಗಳು ನಡೆಯದೇ ರಾಜ್ಯದ ಜನರಿಗೆ ಬೇಸರವನ್ಮ್ನಂಟು ಮಾಡಿವೆ ಎಂದು ಹೇಳಿದರು.
ಮೇಕೆದಾಟು ಯೋಜನೆಯಲ್ಲಿ ಜಾರಿಗೆ ತರುವ ಉದ್ದೇಶ ಬಿಟ್ಟರೆ ಅದರಲ್ಲಿ ಯಾವುದೇ ರೀತಿಯ ಗೊಂದಲವಿಲ್ಲ. ತಮಿಳು ನಾಡು, ಪಾಚಿಡಿಚೆರಿ, ಕೇರಳ ಸರ್ಕಾರಗಳೂ ಸಹ ಸಮ್ಮತಿಸಿವೆ. 2018 ರಲ್ಲಿ ಸರ್ವೋಚ್ಛ ನ್ಯಾಯಾಲಯವು ಆಚಿಾ ರಾಜ್ಯಗಳಿಗೆ ಇಚಿತಿಷ್ಟು ನೀರನ್ನು ಬಿಡಬೇಕೆಂದು ಆದೇಶಿಸಿದೆ. ಆದರೆ ರಾಜ್ಯ ಸರ್ಕಾರವು ಈವರೆಗೂ ಏನೂ ಮಾಡಿಲ್ಲ. ಪರಿಸರ ಅನುವ್ಮತಿ ಯನ್ನೂ ಸಹ ಪಡೆದುಕೊಳ್ಳುವಲ್ಲಿ ವಿಫಲವಾಗಿದೆ ಎಂದರು.
ರಾಜ್ಯದ ಎಲ್ಲಾ ಮೂಲಗಳ ತೆರಿಗೆಯಿಂದ ಪ್ರತೀ ವರ್ಷ ಕೇಂದ್ರ ಸರ್ಕಾರಕ್ಕೆ 1.26 ಲಕ್ಷ ಕೋಟಿ ರೂ.ತೆರಿಗೆ ಕೊಡುತ್ತಿದೆ. ಆದರೆ ಕೇಂದ್ರದಿಂದ ನಮಗೆ ಕೇವಲ 47000 ಕೋಟಿ ಮಾತ್ರ ಕೊಟ್ಟಿದೆ. ಉಳಿದ 2.53 ಲಕ್ಷ ಕೋಟಿ ರೂ. ಕೇಂದ್ರವು ಉಳಿಸಿಕೊಂಡಿವೆ. ಪ್ರಧಾನಿ ಮನಮೋಹನ ಸಿಂಗ್ ಅವಧಿಯಲ್ಲಿ 53.11 ಲಕ್ಷ ಕೋಟಿ ಸಾಲವಿತ್ತು. ಆದರೀಗ 152 ಲಕ್ಷ ಕೋಟಿ ವಿದೇಶಿ ಸಾಲ ಮತ್ತು ರಾಜ್ಯದಲ್ಲಿ ನಾನು ಮುಖ್ಯಮಂತ್ರಿ ಆಗಿದ್ದಾಗ 2.42 ಲಕ್ಷ ಸಾವಿರ ಕೋಟಿ ಇತ್ತು. ಇದೀಗ 5.18 ಲಕ್ಷ ಕೋಟಿ ರೂ. ಸಾಲ ಇರುವುದಾಗಿ ಸಿದ್ದರಾಮಯ್ಯ ಹೇಳಿದರು.
ಮುಖ್ಯಮಂತ್ರಿ ಬೊಮ್ಮಯಿ ನೇತೃತ್ವದ ಸರ್ಕಾರವು ಡಬ್ಬಾ ಸರ್ಕಾರವಾಗಿದೆ. ಯಾವುದೇ ಯೋಜನೆಗಳು ಸಮರ್ಕವಾಗಿ ಜಾರಿಗೆಯಾಗಿಲ್ಲ. ಬರೀ ಭರವಸೆಯ ಮಾತುಗಳನ್ನೇ ಆಡುತ್ತಿದ್ದಾರೆ. ಈ ಬಗ್ಗೆ ವಿಧಾನಸಭಾ ಅಧಿವೇಶನದಲ್ಲಿ ವಿವರವಾಗಿ ಮಾತನಾಡಿರುವೆ ಎಂದವರು ವಿವರಿಸಿದರು.
ವಿಧಾನಸಭಾ ಮಾಜಿ ಅಧ್ಯಕ್ಷ ಕೆ.ಬಿ.ಕೋಳಿವಾಡ, ಮಾಜಿ ಸಚಿವರಾದ ರುದ್ರ್ಪ ಲಮಾಣಿ, ಜಯಮಾಲಾ, ಬಸವರಾಜ ಶಿವಣ್ಣನವರ, ಪ್ರಕಾಶ ಕೋಳಿವಾಡ, ಸೋಮಣ್ಣ ಬೇವಿನಮರದ, ಡಾಽ ಎಂ.ಎಂ.ಹಿರೇಮಠ, ಎಸ್.ಆರ್.ಪಾಟೀಲ, ಬಿ.ಎಚ್. ಬನ್ನಿಕೋಡ, ಅಜ್ಜಂಪೀರ್ ಖಾದ್ರಿ ಸೇರಿದಂತೆ ಪಕ್ಷದ ಮುಖಂಡರು ಉಪಸ್ಥಿತರಿದ್ದರು.