ಬಜೆಟ್ ಸಮತೋಲನದಿಂದ ಕೂಡಿದೆ: ಲಿಂಗನಗೌಡ್ರ
ಲೋಕದರ್ಶನ ವರದಿ
ರಾಣಿಬೆನ್ನೂರ 02: ಕರೋನಾದಿಂದಾಗಿ ಆರ್ಥಿಕ ಹಿಂಜರಿತಕ್ಕೆ ಒಳಗಾದ ಈ ಸಂದರ್ಭದಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಕೇಂದ್ರದ ಬಜೆಟ್ 2022-23ನೇ ಸಾಲಿನ ಆಯ-ವ್ಯೆಯ ಮುಂಗಡ ಪತ್ರವು ಸಮತೋಲನದಿಂದ ಕೂಡಿದೆ ಎಂದು ಹುಬ್ಬಳ್ಳಿ ಕರ್ನಾಟಕ ವಾಣಿಜ್ಯೋಧ್ಯಮ ಸಂಸ್ಥೆಯ ಮಾಜಿ ಅಧ್ಯಕ್ಷ ವಿ.ಪಿ.ಲಿಂಗನಗೌಡ್ರ ಅವರು ಮಾಧ್ಯಮಕ್ಕೆ ಪ್ರತಿಕ್ರಿಯಿಸಿ ತಮ್ಮ ಹರ್ಷ ವ್ಯಕ್ತಪಡಿಸಿದ್ದಾರೆ.
ಹಣಕಾಸು ಸಚಿವರು ಕೆಲವೊಂದು ಮೂಲಭೂತ ಸೌಕರ್ಯಗಳನ್ನು ಒದಗಿಸುವುದರ ಜೊತೆಗೆ ಆರ್ಥಿಕ ಸುದಾರಣೆಗೆ ಒತ್ತುಕೊಟ್ಟಿದ್ದಾರೆ, ಅವುಗಳಲ್ಲಿ 25000 ಕಿಲೋಮಿಟರ ರಸ್ತೆ ಅಭಿವೃದ್ದಿ, 400 ಒಂದೇ ಭಾರತ ಹೊಸ ರೈಲುಗಳು ಮತ್ತು 2023ರ ವರ್ಷವನ್ನು ಸಿರಿದಾನ್ಯ ವರ್ಷವೆಂದು ಘೋಷಿಸಿದ್ದು, ಇದರಿಂದ ರೈತರಿಗೆ ತುಂಬಾ ಅನುಕುಲವಾಗಲಿದೆ. ಮತ್ತು ಗ್ರಾಮಿಣ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅನುಕೂಲವಾಗಲು ಹೊಸ ಚಾನಲ್ಗಳನ್ನು ಘೋಷಣೆ ಮಾಡಿ ಪ್ರತಿ ತರಗತಿಗಳಿಗೆ ಟಿ.ವಿಗಳನ್ನು ಒದಗಿಸುವದರ ಮೂಲಕ ಆನಲೈನ್ ಶಿಕ್ಷಣ ಪಡೆಯಲು ಅವಕಾಶ ಕಲ್ಪಿಸಿದ್ದಾರೆ.
2 ಲಕ್ಷ ಅಂಗನವಾಡಿಗಳನ್ನು ಮೆಲ್ದರ್ಜೆಗೆ ಏರಿಕೆ ಮಾಡಿದ್ದಾರೆ. 1 ಲಕ್ಷ 50 ಸಾವಿರ ಅಂಚೆಕಛೇರಿಗಳನ್ನು ಬ್ಯಾಂಕ ದರ್ಜೆಗೆ ಏರಿಸಿದ್ದು ಸ್ವಾಗತಾರ್ಹ, ಉದ್ದಿಮೆಗಳ ಪುನಶ್ಚೇತನ ಮತ್ತು ಅಭಿವೃದ್ದಿಗಾಗಿ ಹೊಸದಾಗಿ ಸ್ಥಾಪನೆಯಾದ ಉದ್ದಿಮೆಗಳಿಗೆ ಒಂದು ವರ್ಷ ತೆರಿಗೆ ವಿನಾಯತಿ ನಿಡಿದ್ದು ಚೇತರಿಕೆಗೆ ಸಹಕಾರಿಯಾಗಿದೆ. ಜಮಿನು ನೊಂದಣಿಯನ್ನು ಡಿಜಿಟಲಿಕರಣಗೊಳಿಸಿ “ ಒಂದು ದೇಶ ಒಂದು ನೊಂದಣಿ ” ಮತ್ತು ಎಂಟು ಬಾಷೆಗಳಲ್ಲಿ ಆಸ್ತಿ ನೊಂದಣಿ ಜಾರಿಗೊಳಿಸಿರುವುದು ಕ್ರಾಂತಿಕಾರಿ ಬದಲಾವಣೆ, ಓಷದ ಮತ್ತು ಆರೋಗ್ಯ ಉಪಕರಣಗಳಿಗೆ ಹಾಗೂ ರಾಸಾಯನಿಕಗಳ ಮೆಲೆ ತೆರಿಗೆ ಕಡಿತಗೊಳಿಸಿರುವುದು ಜನಸಾಮಾನ್ಯರಿಗೆ ಅನುಕೂಲವಾಗಲಿದೆ ಎಂದಿದ್ದಾರೆ. ಇನ್ನೂ ಜನಸಾಮಾನ್ಯರ ಬೇಡಿಕೆಯಾಗಿದ್ದ ಆದಾಯ ತೆರಿಗೆ ಮಿತಿಯನ್ನು ಹೆಚ್ಚಿಗೆ ಮಾಡಿದ್ದರೆ ಒಳಿತಾಗುತಿತ್ತು, ಒಟ್ಟಿನಲ್ಲಿ ದೇಶದ ಸರ್ವತೋಮುಖ ಅಭಿವೃದ್ದಿಗಾಗಿ ಈ ಆಯವ್ಯಯ ಪತ್ರವು ಪೂರಕವಾಗಿದೆ ಎಂದಿದ್ದಾರೆ- ವಿ.ಪಿ.ಲಿಂಗನಗೌಡ್ರ. ಮಾಜಿ ಅಧ್ಯಕ್ಷರು ಕರ್ನಾಟಕ ವಾಣಿಜ್ಯೋಧ್ಯಮ ಸಂಸ್ಥೆ ಹುಬ್ಬಳ್ಳಿ.