ಮೂಲಭೂತ ಸೌಕರ್ಯಗಳಿಗೆ ದಿ. ಮಾಮನಿ ಹೆಚ್ಚಿನ ಒತ್ತು: ಅಗಡಿ
ಸವದತ್ತಿ 16: ತಾಲೂಕಿನಲ್ಲಿನ ಎಲ್ಲ ಗ್ರಾಮಗಳ ಜನರಿಗೆ ಬೇಕಾಗುವಂತಹ ಮೂಲಭೂತ ಸೌಕರ್ಯಗಳಾದ ರಸ್ತೆ ವಿದ್ಯುತ್ತ ಸಂಪರ್ಕ ಕುಡಿಯುವ ನೀರು ಮತ್ತು ಶಿಕ್ಷಣಕ್ಕಾಗಿ ದಿ.ಆನಂದ ಮಾಮನಿಯವರು ಹೆಚ್ಚಿನ ಒತ್ತು ನೀಡಿ ಗ್ರಾಮಗಳ ಅಭಿವೃದ್ಧಿಗೆ ಪ್ರೇರಣೆಯಾಗಿದ್ದರು ಎಂದು ಹಂಚಿನಾಳ ಗ್ರಾಮದ ಮಹಿಳಾ ಮುಖಂಡರಾದ ಮಧು ಅಗಡಿ ಹೇಳಿದರು.
ತಾಲೂಕಿನ ಹಂಚಿನಾಳ ಗ್ರಾಮದಲ್ಲಿ ಮುಖ್ಯ ಮಂತ್ರಿಗಳ ವಿಷೇಶ ಅನುದಾನದಡಿಯಲ್ಲಿ ಧಾರ್ಮಿಕ ದತ್ತಿ ಇಲಾಖೆ ವತಿಯಿಂದ ಮಂಜೂರಾದ 10 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ನಿರ್ಮಿಸುವ ಪಡದಪ್ಪಜ್ಜನ ದೇವಸ್ಥಾನದ ಸಮುದಾಯಭವನ ಭೂಮಿ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ರತ್ನಕ್ಕ ಆನಂದ ಮಾಮನಿಯವರು ಮಾತನಾಡಿ, ನಮ್ಮ ಯಜಮಾನರ ಅಧಿಕಾರದವಧಿಯಲ್ಲಿ ತಾಲೂಕಿನಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿದ್ದು, ಜನಪರವಾಗಿರುವಂತ ಕಾರ್ಯಗಳು ಇನ್ನೂ ಮುಂದುವರೆಯುತ್ತಿವೆ. ಆ ನಿಟ್ಟಿನಲ್ಲಿ ತಾಲೂಕಿನಲ್ಲಿ ಸಾರ್ವಜನಿಕರ ಸೇವೆ ಮಾಡಲು ನನಗೆ ಅವಕಾಶ ನೀಡಬೇಕೆಂದರು.
ಜಿ.ಪಂ ಸದಸ್ಯ ಗುರುನಾಥ ಗಂಗಲ, ಗ್ರಾಂ.ಪಂ ಅಧ್ಯಕ್ಷ ಮರಬಸಪ್ಪ ಗೊರವನಕೊಳ್ಳ, ಕೆ.ಎಸ್.ರೂಗಿ, ಇಂದಿರಾ ಗಂಗಲ, ಮಲ್ಲವ್ವ ಮಳಲಿ, ಮಹಾದೇವಿ ಹಿರೇಮಠ, ಕೆ.ಎಮ್.ಗಡ್ಡನಾಯ್ಕರ. ಕೃಷ್ಣರೆಡ್ಡಿ ಗಂಗಲ. ಶಿವರೆಡ್ಡಿ ಗಂಗಲ. ಸಂತೋಷ ಹಿರೇಮಠ, ಜಿ.ಎನ್.ಶ್ರೀಹರಿ ಸೇರಿದಂತೆ ಹಂಚಿನಾಳ ಗ್ರಾಮದ ಮುಖಂಡರು ಉಪಸ್ಥಿತರಿದ್ದರು
ಕಾರ್ಯಕ್ರಮದ ಕೊನೆಯಲ್ಲಿ ಹಂಚಿನಾಳ ಗ್ರಾಮದ ವತಿಯಿಂದ ರತ್ನಕ್ಕ ಆನಮದ ಮಾಮನಿಯವರನ್ನು ಸನ್ಮಾನಿಸಿ ಗೌರವಿಸಲಾಯಿತು.