ಮನರಂಜನೆ

ಮೊದಲ ಪ್ಯಾನ್​ ಇಂಡಿಯಾ ಸಿನಿಮಾದ ಹೆಸರು ಘೋಷಿಸಿದ ನಟ ರವಿತೇಜಾ

ಮೊದಲ ಪ್ಯಾನ್​ ಇಂಡಿಯಾ ಸಿನಿಮಾದ ಹೆಸರು ಘೋಷಿಸಿದ ನಟ ರವಿತೇಜಾ

ಚೆನ್ನೈ: ನ. 3: ನಟ ರವಿತೇಜಾ ಅವರ ಮೊದಲ ಪ್ಯಾನ್ ಇಂಡಿಯಾ ಸಿನಿಮಾ 'ಟೈಗರ್ ನಾಗೇಶ್ವರ ರಾವ್' ನ ಪೋಸ್ಟರ್​​ ಇಂದು ಬಿಡುಗಡೆಯಾಗಿದೆ. ಈ ವಿಚಾರವನ್ನು ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ಶೀರ್ಷಿಕೆಯ ಪೋಸ್ಟರ್​ನನ್ನು ಟ್ವಿಟರ್​​ನಲ್ಲಿ, ಸಿನಿಮಾ ನಿರ್ಮಾಣ ಸಂಸ್ಥೆ ಅಭಿಷೇಕ್ ಆರ್ಟ್ಸ್ ಹಂಚಿಕೊಂಡಿದೆ. "ಕಳ್ಳರು, ದರೋಡೆಕೋರರು ಇದ್ದರು. ನಂತರ #ಟೈಗರ್​​ ನಾಗೇಶ್ವರರಾವ್ ಇದ್ದರು ಎಂದು ಬರೆದಿದ್ದಾರೆ.

ರವಿತೇಜಾ ಅವರ 71ನೇ ಸಿನಿಮಾ ಇದಾಗಿದ್ದು, ಇದರಲ್ಲಿ ಸ್ಟುವರ್ಟ್‌ಪುರಂನ ಕುಖ್ಯಾತ ಕಳ್ಳನ ಪಾತ್ರದಲ್ಲಿ ನಟಿಸಿದ್ದಾರೆ.

ಕಥೆ ಮತ್ತು ನಿರ್ದೇಶನ ವಂಶಿ ಮಾಡಿದ್ದು, ಟೈಗರ್ ನಾಗೇಶ್ವರ ರಾವ್ ಸಿನಿಮಾ ತೆಲುಗು, ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗಲಿದೆ.

ಇತ್ತೀಚೆಗಷ್ಟೇ ರವಿತೇಜಾ ಅವರು ಆರ್‌ಟಿ 70 ಪ್ರೊಜೆಕ್ಟ್ ಘೋಷಣೆ ಮಾಡಿದ್ದರು. ಉಳಿದಂತೆ ‘ಖಿಲಾಡಿ’, ‘ರಮಾ ರಾವ್ ಆನ್ ಡುಟಿ’, ‘ಧಮಾಕಾ’ ಚಿತ್ರಗಳು ಬಿಡುಗಡೆಯಾಗಬೇಕಿದೆ.

ಸುದ್ದಿ ಓದಿ