ರಾಷ್ಟ್ರೀಯ

ಬಾಲಕಿ ಅಪಹರಣ, ಅತ್ಯಾಚಾರ: ಇಬ್ಬರು ಯುವಕರ ಬಂಧನ

ಬಾಲಕಿ ಅಪಹರಣ,  ಅತ್ಯಾಚಾರ: ಇಬ್ಬರು ಯುವಕರ ಬಂಧನ

ಶ್ರೀನಗರ, ನವೆಂಬರ್ 4: ಕುಲ್ಗಾಂನಲ್ಲಿ ಬಾಲಕಿಯನ್ನು ಅಪಹರಿಸಿ, ಅತ್ಯಾಚಾರ ಮಾಡಿದ  ಕಾರಣಕ್ಕಾಗಿ ಇಬ್ಬರು ಯುವಕರನ್ನು ಬಂಧಿಸಲಾಗಿದೆ

ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಸ್ಥಳೀಯರು ಮಂಗಳವಾರ ಕುಲ್ಗಂನಲ್ಲಿ ಭಾರಿ ಪ್ರತಿಭಟನೆ ನಡೆಸಿದ ನಂತರ ಆರೋಪಿಗಳ ವಿರುದ್ದ ಕ್ರಮ  ಕೈಗೊಳ್ಳಲಾಗಿದೆ. 

ವಿವಾಹ ಸಮಾರಂಭದಲ್ಲಿ ಪಾಲ್ಗೊಳ್ಳಲು ಬಾಲಕಿ ಕುಲ್ಗಾಂನ ಅಖಾಲ್ ಪ್ರದೇಶಕ್ಕೆ  ಹೋಗಿದ್ದಾಗ ಇಬ್ಬರು ಯುವಕರು ಅಪಹರಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬಂಧಿತ "ಆರೋಪಿಗಳನ್ನು ಆದಿಲ್ ದಾರ್ ಮತ್ತು ವಾಸಿಮ್ ದಾರ್ ಎಂದು ಗುರುತಿಸಲಾಗಿದೆ, ಆಕೆಯನ್ನು ಪಕ್ಕದ ತೋಟಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿಸಲಾಗಿದೆ ಅವರು ಹೇಳಿದರು.

ಬಾಲಕಿಯನ್ನು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ  ಸ್ಥಳೀಯರು ಪತ್ತೆ ಮಾಡಿದ್ದು ನಂತರ  ತಕ್ಷಣ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿಂದ ಗಂಭೀರ ಸ್ಥಿತಿಯಲ್ಲಿರುವ ಶ್ರೀನಗರದ ಆಸ್ಪತ್ರೆಗೆ ದಾಖಲು ಮಾಡಿ ನಂತರ  ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅವರು ಹೇಳಿದರು. 

ಅಪರಾಧಿಗಳಿಗೆ ಮರಣದಂಡನೆ ವಿಧಿಸಬೇಕೆಂದು ಒತ್ತಾಯಿಸಿ ಬಾಲಕಿ ಮತ್ತು ಇತರ ಗ್ರಾಮಸ್ಥರ ಸಂಬಂಧಿಕರು  ಪ್ರತಿಭಟನೆ ನಡೆಸಿ ಕುಲ್ಗಂ-ಯಾರಿಪೋರಾ ರಸ್ತೆಯನ್ನು ತಡೆ ಚಳವಳಿ ನಡೆಸಿದ್ದರು.   

ಸುದ್ದಿ ಓದಿ