ಕೇಂದ್ರ ಸಚಿವ ಕ್ಷಮಯಾಚಿಸಬೇಕು. ಸಮತಾ ಸೈನಿಕ ದಳದ ಕಾರ್ಯಧ್ಯಕ್ಷ ಕೆ ಪೃಥ್ವಿರಾಜ್ ಒತ್ತಾಯ
ಬಳ್ಳಾರಿ : ಜೂ (25)ರಂದು ದಲಿತರನ್ನು ಅವಮಾನ ಮಾಡುವ ರೀತಿಯಲ್ಲಿ ಭಾಷಣೆ ಮಾಡಿದ ಕೇಂದ್ರ ಸಚಿವ ನಾರಾಯಣಸ್ವಾಮಿ ಕೂಡಲೇ ದಲಿತ ಸಮಾಜವನ್ನು ಕ್ಷಮಯಾಚಿಸಬೇಕು ಎಂದು ಕರ್ನಾಟಕ ಸಮತಾ ಸೈನಿಕ ದಳ ಕಲ್ಯಾಣ ಕರ್ನಾಟಕ ವಿಭಾಗಿಯ ಕಾರ್ಯಾಧ್ಯಕ್ಷ, ಕೆ ಪೃಥ್ವಿರಾಜ್ ದೊಡ್ಡಮನೆ ಪತ್ರಿಕಾ ಪ್ರಕಟಣೆ ಮುಖಾಂತರ ಒತ್ತಾಯಿಸಿದರು.
ಇತ್ತೀಚಿಗೆ ಚಿತ್ರದುರ್ಗದಲ್ಲಿ ಕೇಂದ್ರ ಸಚಿವ ನಾರಾಯಣಸ್ವಾಮಿ ಅವರು ದಲಿತರನ್ನು ಒಂದು ಬಿರಿಯಾನಿ ಮೂಲಕ ಮತಾಂತರ ಮಾಡಲಾಗುತ್ತದೆ ಎಂದು ಹೇಳಿಕೆ ನೀಡಿ ದಲಿತರಿಗೆ ಅವಮಾನ ಮಾಡಿದ್ದಾರೆ ಎಂದರು. ಬೌದ್ಧ ಧರ್ಮಕ್ಕೆ ಮತಾಂತರಗೊಂಡ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಪರೋಕ್ಷವಾಗಿ ಅವನ ಅವಮಾನ ಮಾಡಿದಂತಾಗುತ್ತದೆ.
ಅಂದರೆ ಬಾಬಾ ಸಾಹೇಬರು ಹಾಗೂ ಅವರ ಅನುಯಾಯಿಗಳು ಪಾಕೆಟ್ ಬಿರಿಯಾನಿಗಾಗಿ ಅಥವಾ ಯಾವುದು ಅಮಿಷಕ್ಕೆ ಬಲಿಯಾಗಿದ್ದಾರೆ ಎಂದು. ಪೂಜ್ಯಮಹಾತ್ಮ ಗಾಂಧೀಜಿ ಅವರು ಈಶ್ವರ ಅಲ್ಲಾ ತೆರೆ ನಾಮ್ ಎಲ್ಲಾ ಗ್ರಂಥಗಳನ್ನು ಗೌರವಿಸುತ್ತಿದ್ದರು ಎಂದು ಅವರು ವಿವರಣೆ ನೀಡಿದ್ದಾರೆ ಎಂದಿಗೂ ನಮ್ಮ ನಾಡಿನ ಜನ ಸಾಮಾನ್ಯರು ಯಾವುದೇ ಜಾತಿಯವರಾದರು ಕುಲ ಮತಗಳ ಗತಿತವಾಗಿ ಭಾರತದಲ್ಲಿ ಧಾರ್ಮಿಕತೆ ಅನುಸರಿಸುತ್ತಿದ್ದಾರೆ ಎಂದರು.
ಹಿಂದಿನ ಬಿಜೆಪಿ ಸರ್ಕಾರ ಜಾರಿಗೊಳಿಸಿದ್ದ ಮತಾಂತರ ನಿಷೇಧ ಕಾಯ್ದೆಯನ್ನು ಈಗಿನ ಕಾಂಗ್ರೆಸ್ ಸರ್ಕಾರ ರದ್ದು ಮಾಡಿ ಸಕಲರಿಗೆ ಧಾರ್ಮಿಕ ಸ್ವಾತಂತ್ರ್ಯ ವಾತಾವರಣವನ್ನು ಕಲ್ಪಿಸಬೇಕೆಂದು ಅವರು ಈ ಸಂದರ್ಭದಲ್ಲಿ ಒತ್ತಾಯಿಸಿದ್ದಾರೆ.