ಶಿಗ್ಗಾವ್

ಸಾರ್ವಜನಿಕರ ಅನುಕೂಲಗೋಸ್ಕರ ರಾಕ್ ಗಾರ್ಡನ್ ಬಸ್ ಸಂಚಾರಕ್ಕೆ ಚಾಲನೆ

ಸಾರ್ವಜನಿಕರ ಅನುಕೂಲಗೋಸ್ಕರ ರಾಕ್ ಗಾರ್ಡನ್ ಬಸ್ ಸಂಚಾರಕ್ಕೆ ಚಾಲನೆ

ಶಿಗ್ಗಾವಿ 17: ಪ್ರತಿ ದಿನ ಕರ್ತವ್ಯ ನಿರ್ವಹಣೆಗೆ ಹುಬ್ಬಳ್ಳಿ-ಉತ್ಸವ ರಾಕ್ ಗಾರ್ಡನ್‌-ಹಾನಗಲ್ ಮಾರ್ಗ ಮಧ್ಯೆ ಓಡಾಡುವ ಸರಕಾರಿ-ಅರೆ ಸರಕಾರಿ ನೌಕರರು ಹಾಗೂ ಸಾರ್ವಜನಿಕರ ಅನುಕೂಲಗೋಸ್ಕರ ನಮ್ಮ ಸಂಸ್ಥೆಯು ಹೆಚ್ಚುವರಿ ಬಸ್ಸೊಂದನ್ನು ಪ್ರಾರಂಭಿಸಿದೆ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಡಾ.ಬಸವರಾಜ ಕೆಲ್ಗಾರ್ ಹೇಳಿದರು. 

ತಾಲೂಕಿನ ಗೊಟಗೋಡಿಯ ಉತ್ಸವ ರಾಕ್ ಗಾರ್ಡನ್ ಎದುರು ಗುರುವಾರ ಸಂಜೆ ಹೆಚ್ಚುವರಿ ಬಸ್ ಸಂಚಾರ ಸೇವೆಗೆ ಹಸಿರು ನಿಶಾನೆ ತೋರಿಸಿ ಮಾತನಾಡಿ ದೇಶದ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಕರ್ನಾಟಕವನ್ನು ಗುರುತಿಸುವಂತೆ ಮಾಡಿರುವ ಉತ್ಸವ ರಾಕ್ ಗಾರ್ಡನ್ ಮಾರ್ಗವಾಗಿ ಬಸ್ ಸಂಚರಿಸಲಿದೆ.ಈ ಬಸ್ ಶೆಟ್ಲ್‌ ಸೇವೆ ಹೊಂದಿದ್ದು ಪ್ರತಿ ದಿನ ಹುಬ್ಬಳ್ಳಿ-ಉತ್ಸವ ರಾಕ್ ಗಾರ್ಡನ್‌-ಹಾನಗಲ್ ಮಧ್ಯೆ ಕರ್ತವ್ಯ ನಿರ್ವಹಣೆಗೆ ಓಡಾಡುವವರಿಗೆ ಹಾಗೂ ಸಾರ್ವಜನಿಕರಿಗೆ ಉಪಯುಕ್ತಕಾರಿ ಆಗಿದೆ ಎಂದು ಡಾ.ಬಸವರಾಜ ಕೆಲ್ಗಾರ್ ತಿಳಿಸಿದರು. 

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಉಪಾಧ್ಯಕ್ಷ  ಶಿವಾನಂದ ಮ್ಯಾಗೇರಿ ಮಾತನಾಡಿ ನಮ್ಮ ಸಂಸ್ಥೆಯು ಲಾಭದ ದೃಷ್ಟಿಕೋನ ಹೊಂದಿರದೆ ಜನರಿಗೆ ಆರೋಗ್ಯಕರ-ಸುರಕ್ಷಿತ ಪ್ರವಾಸ ಒದಗಿಸುವ ಕೆಲಸದಲ್ಲಿ ತೊಡಗಿದೆ.ಎಲ್ಲರೂ ಹೆಚ್ಚುವರಿ ಬಸ್ ಸೇವೆಯ ಪ್ರಯೋಜನ ಪಡೆಯಬೇಕು ಎಂದು ತಿಳಿಸಿದರು. 

ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ನವೀನ್ ಸವಣೂರ, ಕೆಆರ್‌ಡಿಸಿ ನಿರ್ದೇಶಕ ತಿಪ್ಪಣ್ಣ ಸಾತಣ್ಣವರ, ವನಹಳ್ಳಿ ಗ್ರಾಪಂ ಅಧ್ಯಕ್ಷೆ ತಿಪ್ಪವ್ವ ಮಣಿಕಟ್ಟಿ, ಉಪಾಧ್ಯಕ್ಷ ಯಲ್ಲಪ್ಪ ಸಿಂಧೆ, ಶ್ರೀಕಾಂತ ದುಂಡಿಗೌಡರ, ಕೊಟ್ರೇಶ ಮಾಸ್ತರ್ ಬೆಳಗಲಿ, ಕಲಾವಿದ ಬಸವರಾಜ ಶಿಗ್ಗಾಂವ, ಜಾನಪದ ವಿವಿಯ ಸಹಾಯಕ ಪ್ರೊಫೆಸರ್ ಡಾ.ಮಲ್ಲಿಕಾರ್ಜುನ ಮಾಲಪಡೆ, ಗಾರ್ಡನ್ ಆಡಳಿತ ನಿರ್ದೇಶಕ ಪ್ರಕಾಶ ದಾಸನೂರ, ನಿರ್ದೇಶಕ ಆನಂದಗೌಡ ಪಾಟೀಲ ಸೇರಿದಂತೆ ಗಣ್ಯರು-ಗ್ರಾಮಸ್ಥರು ಭಾಗವಹಿಸಿದ್ದರು.ಸಹಾಯಕ ಪ್ರೊಫೆಸರ್ ಶರೀಫ ಮಾಕಪ್ಪನವರ ಸ್ವಾಗತಿಸಿದರು.ಗಾರ್ಡನ್ ನಿರ್ದೇಶಕ ಬಸವರಾಜ ಮಡಿವಾಳರ ವಂದಿಸಿದರು. 


ಸುದ್ದಿ ಓದಿ