ಆಧುನಿಕ ಭಾರತ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದ ದಿ ರಾಜೀವಗಾಂಧಿ: ಮಣ್ಣಣ್ಣವರ
ಶಿಗ್ಗಾವಿ 21: ಆಧುನಿಕ ಭಾರತ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದ, ಭಾರತದ ಡಿಜಿಟಲ್ ಕ್ರಾಂತಿಯ ಹರಿಕಾರ, ದೇಶದ ಐಕ್ಯತೆ ಮತ್ತು ಸಮಗ್ರತೆಗಾಗಿ ತಮ್ಮ ಪ್ರಾಣವನ್ನೇ ಅರ್ಿಸಿದ, ಮಾಜಿ ಪ್ರಧಾನಿ 'ಭಾರತ ರತ್ನ' ರಾಜೀವ್ ಗಾಂಧಿ ಅವರ 79ಜನ್ಮ ದಿನದಂದು ಪಟ್ಟಣದಲ್ಲಿ ರಾಜೀವ್ ಗಾಂಧಿ ಅವರ ಭಾವಚಿತ್ರಕ್ಕೆ ಗೌರವ ಸಲ್ಲಿಸುವ ಮೂಲಕ ಸ್ಮರಿಸಲಾಯಿತು ಇಂದಿನ ತಂತ್ರಜ್ಞಾನ ಡಿಜಿಟಲ್ ಆವಿಷ್ಕಾರ ಅವುಗಳನ್ನು ಅವರು ಪ್ರಧಾನಿಯಾಗಿದ್ದಾಗಲೇ ಗುರುತಿಸಿ ತಂತ್ರಜ್ಞಾನದ ಬೆಳಕಿನ ಭಾರತದಲ್ಲಿ ಹೆಜ್ಜೆ ಇಡುವಂತೆ ಮಾಡಿದವರು ಅದರ ಪರಿಣಾಮ ಇಂದು ಭಾರತ ತಂತ್ರಜ್ಞಾನದಲ್ಲಿ ಮುಂದುವರೆದಿದೆ ಜೊತೆಗೆ ರಾಜ್ಯದ ಮಾಜಿ ಮುಖ್ಯಮಂತ್ರಿಗಳು ಬಡವರ ಪಾಲಿನ ಬೆಳಕಾಗಿದ್ದ ದಿವಂಗತ ಡಿ ದೇವರಾಜು ಅರಸು ಅವರ ಸ್ಮರಣೆಯನ್ನು ಕೂಡ ಪ್ರತಿಯೊಬ್ಬರೂ ಮಾಡಬೇಕಾಗಿದೆ ಎಂದು ಪಕ್ಷದ ವಕ್ತಾರ ಮಂಜುನಾಥ ಮಣ್ಣಣ್ಣವರ್ ಹೇಳಿದರು.
ತಾಲೂಕ ಯುವ ಕಾಂಗ್ರೆಸ್ನ ಅಧ್ಯಕ್ಷ ನಿಸಾರ್ ಅಹ್ಮದ್ ತೋಕಲ್ಲಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಎಸ್ ಟಿ ಘಟಕದ ಅಧ್ಯಕ್ಷ ಅಶೋಕ್ ಓಲೆಕಾರ್, ಮಾಜಿ ಗ್ರಾಮ ಪಂಚಾಯತಿ ಸದಸ್ಯ ಇರ್ಫಾನ್ ಕೊಲ್ಲಾಪುರ, ರುದ್ರೇಶ್ ಗುಡಿಗೇರಿ, ದೇವೇಂದ್ರ ಸಿಕಂದರ್ ಇನ್ನು ಹಲವಾರು ಜನ ಉಪಸ್ಥಿತರಿದ್ದರು.