ನೂತನ ಪದಾಧಿಕಾರಿಗಳ ಪದಗ್ರಹಣ
ಬೈಲಹೊಂಗಲ 05: ಪಟ್ಟಣದ ನ್ಯಾಯವಾದಿಗಳ ಸಂಘದ ವಾರ್ಷಿಕ ಮಹಾಸಭೆ, ಸಂಘಕ್ಕೆ ನೂತವಾಗಿ ಆಯ್ಕೆಯಾದ ಪದಾಧಿಕಾರಿಗಳ ಪದಗೃಹಣ, ಸಾಧಕ ನ್ಯಾಯವಾದಿಗಳ ಸನ್ಮಾನ ಕಾರ್ಯಕ್ರಮ ಜರುಗಿತು. ಸಂಘದ ನಿಕಟಪೂರ್ವ ಅಧ್ಯಕ್ಷ ಎಂ.ಆರ್. ಮೆಳವಂಕಿ, ಪ್ರಧಾನ ಕಾರ್ಯದರ್ಶಿ ದುಂಡೇಶ ಗರಗದ ಮಾತನಾಡಿ, ಕೊವಿಡ್ ಸಂಕಷ್ಟದ ಮಧ್ಯೆಯು ಸಂಘದ ಸದಸ್ಯರ ಸಮಸ್ಯೆಗಳಿಗೆ ಸ್ಪಂದಿಸುತ್ತಾ, ನ್ಯಾಯವಾದಿಗಳಿಗೆ ಅನೇಕ ಸವಲತ್ತುಗಳನ್ನು ನೀಡಲಾಗಿದೆ. ನ್ಯಾಯಾಲಯದ ಸಂಘಕ್ಕೆ ಲಾ ಛೆಂಬರ್ ನಿರ್ಮಿಸಲು ನ್ಯಾಯಾಂಗ ಇಲಾಖೆಯನ್ನು ಒತ್ತಾಯಿಸಿದ್ದರಿಂದ ಸರಕಾರದಿಂದ 10 ಕೋಟಿ ರೂ. ಅನುಮೊದನೆಯಾಗಿದೆ ಎಂದರು. ವಾರ್ಷಿಕ ಮಹಾಸಭೆಯ ವರದಿ ಮಂಡಿಸಿ ಅನುಮೊದನೆ ಪಡೆಯಲಾಯಿತು.ಮೂರನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾದ ಎಸ್.ಬಿ. ಆನಿಗೋಳ, ಉಪಾಧ್ಯಕ್ಷ ಮಂಜುನಾಥ ಸೋಮನ್ನವರ, ಪ್ರಧಾನ ಕಾರ್ಯದರ್ಶಿ ಸಂತೋಷ ಭಾಂವಿ, ಪ್ರಧಾನ ಕಾರ್ಯದರ್ಶಿಯಾಗಿ ಸಂಧಾನದಂತೆ ಎರಡನೆ ಅವಧಿಗೆ ನೇಮಕಗೊಂಡ ಆಯ್.ಎಫ್. ತಡಸಲ, ಸಹ ಕಾರ್ಯದರ್ಶಿ ಎಂ.ಎಂ. ಅಲ್ಲಯ್ಯನವರಮಠ, ಖಜಾಂಚಿ ಜೆ.ಎಸ್. ಹುಕ್ಕೇರಿಮಠ, ಸದಸ್ಯರಾದ ಜಯಶ್ರೀ ಬೂದಿಹಾಳ, ಸುಜಾತಾ ಮಾಳಗಿ, ಶಾಂತಾ ಸಿದ್ರಾಮನ್ನವರ, ವಿಶ್ವನಾಥ ಪೂಜೇರ, ಈರಣ್ಣ ಹುಣಶೀಕಟ್ಟಿ, ಬಿ.ಎನ್. ಲಕ್ಕನಗೌಡರ ಸನ್ಮಾನಿಸಿ ಅಧಿಕಾರ ಹಸ್ತಾಂತರಿಸಲಾಯಿತು. ನಿವೃತ್ತ ಶಿರಸ್ತೆದಾರ ಡಿ.ಎಫ್.ಬಡಿಗೇರ, ಡಿ.ಎಸ್. ಹೊಗರ್ತಿ, ಎಂ.ಎಂ.ಸೋಪಿನ, ಸಿ.ಎಚ್. ಹೊಸಮನಿ, ಎಸ್.ಬಿ. ರೊಟ್ಟಿ, ಪರ್ತಕರ್ತರನ್ನು ಸನ್ಮಾನಿಸಲಾಯಿತು. ನೂತನ ಅಧ್ಯಕ್ಷ ಎಸ್.ಬಿ ಆನಿಗೋಳ ಮಾತನಾಡಿ, ಸಂಘವನ್ನು ಅಭಿವೃದ್ದಿಪಡಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವದು ಎಂದರು. ನ್ಯಾಯವಾದಿಗಳ ಸಹಕಾರಿ ಸಂಘದ ಅಧ್ಯಕ್ಷ ಶ್ರೀಶೈ¯ ಅಬ್ಬಾಯಿ, ಹಿರಿಯ ನ್ಯಾಯವಾದಿಗಳಾದ ಎ.ಆಯ. ಅಥಣಿ, ಎಸ್.ಎಸ್. ಮಠದ, ಸಿ.ಎಸ್. ಚಿಕ್ಕನಗೌಡರ, ಬಿ.ಎಂ. ಮೂಲಿಮನಿ, ಎಸ್.ಜಿ. ಬೂದಯ್ಯನವರಮಠ, ಬಿ.ಬಿ. ಹುಲಮನಿ, ಆರ್.ಜಿ.ಮೇಲಿನಮನಿ, ಅರುಣ ಯಲಿಗಾರ, ಗಿರೀಜಾ ಆಲಕಟ್ಟಿ, ಪ್ರೇಮಾ ಬಡಿಗೇರ, ವಿಜಯಲಕ್ಷ್ಮೀ ಹಿರೇಮಠ, ದೀಪಕ ಸಂಗೊಳ್ಳಿ, ರಮೇಶ ಪತ್ತಾರ, ರಮೇಶ ಕುರಬರ, ಎಸ್.ಸಿ.ಕರೀಕಟ್ಟಿ, ಆರ್.ಎಸ್. ಪಟ್ಟಣಶೆಟ್ಟಿ, ಅನೀಲ ಕರಬನ್ನವರ, ಬಿ.ಆರ್. ಹರಿದಾಸ, ಅನೀಲ ಕರಬನ್ನವರ, ವಿ.ಸಿ. ಸಂಗೊಳ್ಳಿ ಇತರರು ಇದ್ದರು.