ಕುಷ್ಟಗಿ

ಮದ್ದಾನೇಶ್ವರ ಜಾತ್ರಾ ಮಹೋತ್ಸವ, ಅಡ್ಡಪಲ್ಲಕ್ಕಿ ಮಹೋತ್ಸವ ಸಂಪನ್ನ

ಮದ್ದಾನೇಶ್ವರ ಜಾತ್ರಾ ಮಹೋತ್ಸವ, ಅಡ್ಡಪಲ್ಲಕ್ಕಿ ಮಹೋತ್ಸವ ಸಂಪನ್ನ

ಕುಷ್ಟಗಿ 26: ಪಟ್ಟಣದ ಶ್ರೀ ಗುರು ಮದ್ದಾನೇಶ್ವರ ಜಾತ್ರಾ ಮಹೋತ್ಸವ ಹಾಗೂ ಸಾಮೂಹಿಕ ವಿವಾಹ ಶನಿವಾರ ವಿಜೃಂಭಣೆಯಿಂದ ಜರುಗಿತು.  

ಬೆಳಗ್ಗೆ ಶ್ರೀಗುರು ಮದ್ದಾನೇಶ್ವರ ಕರ್ತೃಗದ್ದುಗೆಗೆ ಮಹೇಶಸ್ವಾಮಿ ಹಾಗೂ ಕಾಶಯ್ಯ ಹಿರೇಮಠ ಇವರಿಂದ ಮಹಾ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ ಹಾಗೂ ವಿವಿಧ ಪುಷ್ಪಗಳಿಂದ ಅಲಂಕರಿಸಿ ವಿಶೇಷ ಪೂಜೆ ಮಾಡಲಾಯಿತು.  

 ಅಕ್ಕನ ಬಳಗದವರಿಂದ ಕುಂಭಮೇಳ ಹಾಗೂ ಡೊಳ್ಳು, ಭಜನೆ, ಕೋಲಾಟ ಕಳಸ ಕನ್ನಡಿಗಳ ಜೊತೆಗೆ ಪಟ್ಟಣದ ವಿವಿಧ ರಸ್ತೆಗಳ ಮೂಲಕ ಯಲಬುರ್ಗಾದ ಸಿದ್ದರಾಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಅಡ್ಡಪಲ್ಲಕ್ಕಿ ಮಹೋತ್ಸವ ಜರಗಿತು. ಮಧ್ಯಾಹ್ನ 12ಗಂಟೆಗೆ ಸಾರ್ವಜನಿಕ ಅನ್ನಸಂತರೆ​‍್ಣ ಜರಗಿತು. ಸಂಜೆ 5ಗಂಟೆಗೆ ಶ್ರೀ ಗುರು ಮದ್ದಾನೇಶ್ವರ ಮಹಾರಥೋತ್ಸವ ಅತ್ಯಂತ ಸಡಗರ ಸಂಭ್ರಮದಿಂದ ನಡೆಯಿತು. ನಂತರ ಕಲರ್ಸ್‌ ಕನ್ನಡ ವಾಹಿನಿ ಕನ್ನಡ ಕೋಗಿಲೆ ವಿಜೇತ ಕುಮಾರ ಅರ್ಜುನ್ ಇಟಗಿ ಹಾಗೂ ತಂಡದಿಂದ ಸಂಗೀತ ಕಾರ್ಯಕ್ರಮ ನಡೆಯಿತು.  

ಈ ಸಂದರ್ಭದಲ್ಲಿ ಚಳಗೇರಿಯ ವೀರ ಸಂಗಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ನೀಡಶೇಸಿಯ ಚನ್ನಬಸವ ಶಿವಾಚಾರ್ಯ ಮಹಾಸ್ವಾಮಿಗಳು, ಮಂಗಳೂರಿನ ಸಿದ್ದಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು,  ಕೋತಬಾಳದ ಗಂಗಾಧರ ಮಹಾಸ್ವಾಮಿಗಳು, ಮೈನಳ್ಳಿಯ ಸಿದ್ದೇಶ್ವರ ಮಹಾಸ್ವಾಮಿಗಳು, ಜಿಗೇರಿಯ ಗುರುಸಿದ್ದ ಶಿವಾಚಾರ್ಯರು, ಕುಕನೂರಿನ ಮಹಾದೇವಯ್ಯ ದೇವರು, ಕರಿಬಸವ ಶಿವಾಚಾರ್ಯ ಮಹಾಸ್ವಾಮಿಗಳು ಸಾನಿಧ್ಯ ವಹಿಸಿದ್ದರು. 


ಸುದ್ದಿ ಓದಿ