ಕೇರಳ ಸಿಎಂ ವಿರುದ್ಧ ಅವಿಶ್ವಾಸ ನಿರ್ಣಯ; ಚರ್ಚಿಸಲು ಐದು ಗಂಟೆಗಳ ಅವಕಾಶ ನೀಡಿದ ಸ್ಪೀಕರ್
ತಿರುವನಂತಪುರಂ, ಆಗಸ್ಟ್ 24: ಕೇರಳದ ಸಿಪಿಐ-ಎಂ ನೇತೃತ್ವದ ಸರ್ಕಾರದ ವಿರುದ್ಧ ವಿಪಕ್ಷಗಳು ಮಂಡಿಸಿರುವ ಅವಿಶ್ವಾಸ ನಿರ್ಣಯದ ಕುರಿತು ಐದು ಗಂಟೆಗಳ ಕಾಲ ಚರ್ಚಿಸಲು ವಿಧಾನಸಭಾ ಸ್ಪೀಕರ್ ಪಿ.ಶ್ರೀರಾಮಕೃಷ್ಣನ್ ಅನುಮತಿ ನೀಡಿದ್ದಾರೆ.
ಸೋಮವಾರ ಆರಂಭಗೊಂಡ ಒಂದು ದಿನದ ವಿಶೇಷ ವಿಧಾನಸಭಾ ಅಧಿವೇಶನದಲ್ಲಿ ಕಾಂಗ್ರೆಸ್ ಸದಸ್ಯ ವಿ.ಡಿ.ಸತೀಸನ್ ಅವರು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದರು.
ಈ ನಿರ್ಣಯದ ಕುರಿತು ಚರ್ಚೆಗೆ ಹಣಕಾಸು ಮಸೂದೆ ಮಂಡಿಸಿ, ಇತರ ಕಲಾಪಗಳು ಪೂರ್ಣಗೊಂಡ ನಂತರ ಅವಕಾಶ ನೀಡುವುದಾಗಿ ಸ್ಪೀಕರ್್ ತಿಳಿಸಿದರು.
ಆದರೆ, ಅವಿಶ್ವಾಸ ನಿರ್ಣಯವನ್ನು ಮೊದಲು ಪರಿಗಣಿಸಬೇಕು ಎಂದು ವಿಪಕ್ಷ ನಾಯಕ ರಮೇಶ್ ಚೆನ್ನಿಥಾಲ ಅವರ ಮನವಿಯನ್ನು ಸ್ಪೀಕರ್ ಪರಿಗಣಿಸಲಿಲ್ಲ.
ಚಿನ್ನದ ಕಳ್ಳಸಾಗಾಣಿಕೆ ಪ್ರಕರಣದ ಪ್ರಮುಖ ಆರೋಪಿ ಸ್ವಪ್ನಾ ಸುರೇಶ್ ಅವರೊಂದಿಗಿನ ಸಂಪರ್ಕ ಹೊಂದಿರುವ ಆರೋಪ ಎದುರಿಸುತ್ತಿರುವ ಮುಖ್ಯಮಂತ್ರಿಗಳು ರಾಜೀನಾಮೆ ನೀಡಬೇಕು ಎಂದು ವಿಪಕ್ಷಗಳು ಒತ್ತಾಯಿಸಿವೆ.