ದೇಶದ ಸಾಂಸ್ಕೃತಿಕ ಐಕಾನ್ ಕಪಿಲಾ ವಾತ್ಸ್ಯಾಯನ್ ವಿಧಿವಶ
ನವದೆಹಲಿ, ಸೆ 16: ಭಾರತದ ಖ್ಯಾತ ಶಾಸ್ತ್ರೀಯ
ನರ್ತಕಿ, ವಿದ್ವಾಂಸೆ, ಬರಹಗಾರ್ತಿ ಮತ್ತು ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತ ಕಪಿಲಾ ವಾತ್ಸ್ಯಾಯನ್
ಬುಧವಾರ ಇಲ್ಲಿ ನಿಧನರಾಗಿದ್ದಾರೆ. ಅವರಿಗೆ 91 ವರ್ಷ
ವಯಸ್ಸಾಗಿತ್ತು.
ಇಂದಿರಾ ಗಾಂಧಿ ರಾಷ್ಟ್ರೀಯ ಕಲಾ ಕೇಂದ್ರದ ಸ್ಥಾಪಕ ನಿರ್ದೇಶಕರಾಗಿದ್ದ ವಾತ್ಸಾಯನ್ ವಯಸ್ಸಿಗೆ ಸಂಬಂಧಿಸಿದ ಕಾಯಿಲೆಗಳಿಂದ ಬಳಲುತ್ತಿದ್ದರು ಎನ್ನಲಾಗಿದೆ.
1928 ಡಿಸೆಂಬರ್ 25 ರಂದು ಜನಿಸಿದ ಅವರು, ಶಿಕ್ಷಣದಲ್ಲಿ ಸ್ನಾತಕೋತ್ತರ ಪದವಿಗಾಗಿ ಮಿಚಿಗನ್ ವಿಶ್ವವಿದ್ಯಾಲಯಕ್ಕೆ ಹೋಗುವ ಮೊದಲು ದೆಹಲಿ ವಿಶ್ವವಿದ್ಯಾಲಯದಿಂದ ಇಂಗ್ಲಿಷ್ ಸಾಹಿತ್ಯವನ್ನು ಅಧ್ಯಯನ ಮಾಡಿದರು. ನಂತರ ಅವರು ಬನಾರಸ್ ಹಿಂದೂ ವಿಶ್ವವಿದ್ಯಾಲಯದಿಂದ ಪಿಎಚ್ಡಿ ಮಾಡಿದರು.
1987 ರಲ್ಲಿ, ಅವರು ರಾಷ್ಟ್ರೀಯ ರಾಜಧಾನಿಯಲ್ಲಿ ಪ್ರಖ್ಯಾತ ಇಂದಿರಾಗಾಂಧಿ ರಾಷ್ಟ್ರೀಯ ಕಲಾ ಕೇಂದ್ರವನ್ನು ಸ್ಥಾಪಿಸಿದ ಅವರು 1993 ರಲ್ಲಿ ಸಂಸ್ಥೆಯ ನಿರ್ದೇಶಕರಾಗಿ ನೇಮಕಗೊಂಡರು.
2005 ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನೇತೃತ್ವದ ಕೇಂದ್ರ ಪ್ರಗತಿಪರ ಒಕ್ಕೂಟದ ಸರ್ಕಾರದ ಅವಧಿಯಲ್ಲಿ, ವಾತ್ಸಾಯನ್ ಅವರನ್ನು ಮಾನವ ಸಂಪನ್ಮೂಲ ಮತ್ತು ಅಭಿವೃದ್ಧಿ ಸಚಿವಾಲಯದ ಕಾರ್ಯದರ್ಶಿಯಾಗಿ ನೇಮಿಸಲಾಯಿತು ಮತ್ತು 2006 ರಲ್ಲಿ ರಾಜ್ಯಸಭಾ ಸದಸ್ಯರಾಗಿ ನಾಮನಿರ್ದೇಶನಗೊಂಡ ನಂತರ ಸಂಸತ್ತಿನಲ್ಲಿ ಸ್ಥಾನ ಪಡೆದರು. ಆದರೆ ಕೆಲವೇ ತಿಂಗಳುಗಳಲ್ಲಿ, ಅವರು ರಾಜೀನಾಮೆ ನೀಡಿದರು. ಕಪಿಲಾ ವಾತ್ಸ್ಯಾಯನ್ ಅವರನ್ನು 2007 ರಲ್ಲಿ ಮತ್ತೆ ಹಿರಿಯರ ಸದನಕ್ಕೆ ನೇಮಿಸಲಾಗಿತ್ತು.