ರಾಷ್ಟ್ರೀಯ

ಹತ್ರಾಸ್‍ ಪ್ರಕರಣ : ಎಸ್‍ಐಟಿ ತನಿಖೆಗೆ ಯೋಗಿ ಆದಿತ್ಯನಾಥ್ ಘೋಷಣೆ

ಹತ್ರಾಸ್‍ ಪ್ರಕರಣ : ಎಸ್‍ಐಟಿ ತನಿಖೆಗೆ ಯೋಗಿ ಆದಿತ್ಯನಾಥ್ ಘೋಷಣೆ

ಲಖನೌ, ಸೆ 30: ಹತ್ರಾಸ್ ಸಾಮೂಹಿಕ ಅತ್ಯಾಚಾರ ಹಾಗೂ ದಲಿತ ಸಂತ್ರಸ್ತೆಯ ಶವವನ್ನು ಬಲವಂತವಾಗಿ ದಹಿಸಿರುವ ಆರೋಪ ಕೇಳಿಬಂದಿದ್ದು, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಭೀಕರ ಘಟನೆಯ ತನಿಖೆಗಾಗಿ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ಸ್ಥಾಪಿಸುವುದಾಗಿ ಬುಧವಾರ ಘೋಷಿಸಿದ್ದಾರೆ.

ಈ ಬಗ್ಗೆ ತನಿಖೆ ನಡೆಸಲು ಮೂವರು ಸದಸ್ಯರ ಎಸ್‌ಐಟಿ ಸ್ಥಾಪಿಸುವ ಬಗ್ಗೆ ಮುಖ್ಯಮಂತ್ರಿಯವರು ಇಂದು ಬೆಳಿಗ್ಗೆ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಎಸ್‌ಐಟಿ ತಂಡದ ನೇತೃತ್ವವನ್ನು ಗೃಹ ಕಾರ್ಯದರ್ಶಿ ಭಗವಾನ್ ಸ್ವರೂಪ್ ವಹಿಸಿಕೊಳ್ಳಲಿದ್ದು, ಡಿಐಜಿ ಚಂದ್ರ ಪ್ರಕಾಶ್ ಮತ್ತು ಕಮಾಂಡೆಂಟ್ ಪಿಎಸಿ ಆಗ್ರಾ ಎಂ.ಎಸ್ ಪೂನಂ ಸದಸ್ಯರಾಗಿರುತ್ತಾರೆ.  ತನಿಖಾ ವರದಿಯನ್ನು ಸಲ್ಲಿಸಲು ಅವರು ಎಸ್‌ಐಟಿಗೆ ಒಂದು ವಾರ ಕಾಲಾವಕಾಶ ನೀಡಿದ್ದಾರೆ.

ಈ ಪ್ರಕರಣದ ವಿಚಾರಣೆಗೆ ಸರ್ಕಾರ ಈಗಾಗಲೇ ಫಾಸ್ಟ್ ಟ್ರ್ಯಾಕ್ ನ್ಯಾಯಾಲಯದಲ್ಲಿ ಆದೇಶ ನೀಡಿದ್ದು, ಸಂತ್ರಸ್ತೆಯ ಕುಟುಂಬಕ್ಕೆ 10 ಲಕ್ಷ ರೂ. ನೀಡುವಂತೆ ಸೂಚಿಸಿದೆ.  ಏತನ್ಮಧ್ಯೆ, ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.

ಸುದ್ದಿ ಓದಿ