ಬೈಲಹೊಂಗಲ

ಭಾರತ ಸಂವಿದಾನ ಶ್ರೇಷ್ಠ ಸಂವಿದಾನ: ಉಳ್ಳೇಗಡ್ಡಿ

ಭಾರತ ಸಂವಿದಾನ ಶ್ರೇಷ್ಠ ಸಂವಿದಾನ: ಉಳ್ಳೇಗಡ್ಡಿ

ಬೈಲಹೊಂಗಲ 27: ಜಗತ್ತಿನ ಎಲ್ಲ ಅಂಶಗಳನ್ನು ಹೊಂದಿದ ನಮ್ಮ ಸಂವಿದಾನ ಶ್ರೇಷ್ಠ ಸಂವಿದಾನ ಎಂದು ಉಪವಿಭಾಗಾಧಿಕಾರಿ ಈಶ್ವರ ಉಳ್ಳೇಗಡ್ಡಿ ಹೇಳಿದರು.ಅವರು  ಪಟ್ಟಣದ ಪುರಸಭೆಯ ಶೂರ ಸಂಗೊಳ್ಳಿ ರಾಯಣ್ಣ  ಪ್ರೌಢ ಶಾಲೆಯ ಮೈದಾನದಲ್ಲಿ  ಜರುಗಿದ ಗಣರಾಜ್ಯೋತ್ಸವ ದ್ವಜಾರೋಹಣ ನೆರವೇರಿಸಿ ಮಾತನಾಡಿ, ಭಾರತೀಯ ಸಂವಿಧಾನ ಪ್ರತಿಯೊಬ್ಬರಿಗೂ ಅನ್ಯಾಯ ಸರಿಪಡಿಸಿಕೊಳ್ಳುವ ಪರಮಾಧಿಕಾರವನ್ನು ನೀಡಿದೆ. ಸಾಮಾಜಿಕ ನ್ಯಾಯ ಕಟ್ಟ ಕಡೆ ವ್ಯಕ್ತಿಗೂ ಮುಟ್ಟಬೇಕು ಎನ್ನುವ ಉದ್ದೇಶ ಸಂವಿಧಾನ ಶಿಲ್ಪಿ ಅಂಬೇಡ್ಕರ ಅವರದಾಗಿತ್ತು ಎಂದರು.

 ಶಾಸಕ ಮಹಾಂತೇಶ ಕೌಜಲಗಿ, ತಹಶೀಲ್ದಾರ ದೊಡ್ಡಪ್ಪ ಹೂಗಾರ, ಡಿವಾಯ್‍ಎಸ್‍ಪಿ ಶಿವಾನಂದ ಕಟಗಿ, ಪುರಸಭೆ ಅಧ್ಯಕ್ಷ ಬಾಬು ಕುಡಸೋಮನ್ನವರ,ಉಪಾಧ್ಯಕ್ಷೆ ಶಶಿಕಲಾ ಹೊಸಮನಿ, ತಾ.ಪಂ ಅಧ್ಯಕ್ಷೆ ಪಾರ್ವತಿ ನರೇಂದ್ರ, ತಾ.ಪಂ ಇಓ ಸುಭಾಶ ಸಂಪಗಾವಿ, ಪುರಸಭೆ ಮುಖ್ಯಾಧಿಕಾರಿ ಕವಿರಾಜ ನಾಗನೂರ,ಜಿ.ಪಂ, ತಾ.ಪಂ, ಪುರಸಭೆ ಸದಸ್ಯರು, ಶಾಲಾ, ಕಾಲೇಜು ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು. ಪಥ ಸಂಚಲನ- ಪಿಎಸ್‍ಐ ಈರಪ್ಪ ರಿತ್ತಿ ನೇತೃತ್ವದಲ್ಲಿ  ಪೋಲಿಸದಳ, ಗೃಹ ರಕ್ಷಕದಳ, ಎನ್.ಸಿ.ಸಿ. ದಳ ಆಕರ್ಷಕ ಪಥ ಸಂಚಲನ ನಡೆಯಿತು. ತಹಶೀಲ್ದಾರ ಡಾ.ದೊಡ್ಡಪ್ಪ ಹೂಗಾರ ಸ್ವಾಗತಿಸಿದರು. ಶಿಕ್ಷಕ ಬಸವರಾಜ ಭರಮಣ್ಣವರ ನಿರೂಪಿಸಿದರು. ಬಿಇಓ ಗುರುನಾಥ ಹೂಗಾರ ವಂದಿಸಿದರು.

ಸುದ್ದಿ ಓದಿ