ರಾಣೆಬೆನ್ನೂರ

ಗಾಯತ್ರಿ ಮಂತ್ರಕ್ಕೆ ಅಗಾಧ ದಿವ್ಯ ಶಕ್ತಿಯಿದೆ

ಗಾಯತ್ರಿ ಮಂತ್ರಕ್ಕೆ ಅಗಾಧ ದಿವ್ಯ ಶಕ್ತಿಯಿದೆ

ರಾಣಿಬೆನ್ನೂರ 31:  ಗಾಯತ್ರಿ ಮಂತ್ರಕ್ಕೆ ಅಗಾಧವಾದ ದಿವ್ಯ ಶಕ್ತಿ ಇದೆ, ಪ್ರತಿದಿನ ಮನೆಯಲ್ಲಿ ಈ ಮಂತ್ರವನ್ನು ಶ್ರದ್ಧೆ ಹಾಗೂ ಭಕ್ತಿಯಿಂದ ಪಠಿಸಿದರೆ ಜೀವ ನದ ಸಮಸ್ಯೆಗಳು ನಿವಾರಣೆ ಯಾಗುತ್ತವೆ. ಜೊತೆಗೆ ಮಾನಸಿಕ ನೆಮ್ಮದಿ, ಏಕಾಗ್ರರತೆ, ಶಾಂತಿ ಹಾಗೂ ಸಮಾಧಾನಗಳು ದೊರೆಯಲಿವೆ ಎಂದು ವೀರಾ ಪುರ ಹಿರೇಮಠದ ಡಾಽ ಮರುಳಸಿದ್ದ ಪಂಡಿ ತಾರಾಧ್ಯ ಶಿವಾಚಾರ್ಯರು ಹೇಳಿದರು. 

ರವಿವಾರ ಸ್ಥಳೀಯ ಬಿಎಜೆಎಸ್ ಎಸ್ ಮಹಾವಿದ್ಯಾಲಯದ ಆವರಣದಲ್ಲಿ ಕೋಟಿ ಗಾಯತ್ರಿ ಮಹಾ ಯಜ್ಞದ 16ನೇ ವಾರ್ಷಿಕೋತ್ಸವ ಸಮಾರಂಭದ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ಗಾಯಿತ್ರಿ ಮಂತ್ರಕ್ಕೆ ದೇವಾನು ದೇವತೆಗಳ ಇತಿಹಾಸವಿದೆ. ಈ ಮಂತ್ರವನ್ನು ಬ್ರಾಹ್ಮಿ ಮುಹೂರ್ತದಲ್ಲಿ ಪಠಿಸುವದರಿಂದ ಆರೋಗ್ಯ ಮತ್ತು ಮನಸ್ಸಿನ ಮೇಲೆ ಅನೇಕ ಲಾಭಗಳು ಉಂಟಾಗಲಿವೆ ಎಂದು ನುಡಿದರು. 

ಸ್ಥಳೀಯ ರಾಮಕೃಷ್ಣ ವಿವೇಕಾನಂದ ಆಶ್ರಮದ ಪ್ರಕಾಶಾನಂದಜೀ ಮಹಾರಾಜ್, ಓಡಿಸಾದ ಜಗನ್ನಾಥಪುರಿ ಸ್ವಾಮೀಜಿ, ಶಂಕರಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು. ಮಾಜಿ ಸಚಿವ ರುದ್ರಪ್ಪ ಲಮಾ ಣಿ, ಆಡಳಿತಾಧಿಕಾರಿ ಡಾಽ ಆರ್‌.ಎಂ. ಕುಬೇರ​‍್ಪ, ಸುರೇಶ ಬಣಕಾರ, ದತ್ತಾತ್ರಯ ನಾಡಿಗೇರ ಸೇರಿದಂತೆ ಕಾಲೇಜಿನ ಉಪ ನ್ಯಾಸಕರು ಮತ್ತು ಸಿಬ್ಬಂದಿ ವರ್ಗ ಇದ್ದರು. ಇದಕ್ಕೂ ಮುನ್ನ ಗಾಯತ್ರಿ ಮಹಾಯಜ್ಞದ ವಾಷಿಕೋತ್ಸವದ ಅಂಗವಾಗಿ ಹೋಮ, ಹವನ, ಪೂರ್ಣಾಹುತಿ ಸಲ್ಲಿಸುವ ಮೂಲಕ ಇತರ ಪ್ರಜಾ ಹಾಗೂ ಧಾರ್ಮಿಕ ವಿಧಿ ವಿಧಾನಗಳು ಜರುಗಿದವು. 


ಸುದ್ದಿ ಓದಿ