ರಾಷ್ಟ್ರೀಯ

ಸೋನಿಯಾ, ರಾಹುಲ್‌ ವಿದೇಶದಿಂದ ಮರಳುವಷ್ಟರಲ್ಲಿ ಕಾಂಗ್ರೆಸ್‌ ರೂಪುರೇಷೆ ಬದಲಾಗಲಿದೆ; ಬಿಜೆಪಿ

ಸೋನಿಯಾ, ರಾಹುಲ್‌ ವಿದೇಶದಿಂದ ಮರಳುವಷ್ಟರಲ್ಲಿ ಕಾಂಗ್ರೆಸ್‌ ರೂಪುರೇಷೆ ಬದಲಾಗಲಿದೆ; ಬಿಜೆಪಿ

ಹೈದರಾಬಾದ್‌, ಸೆಪ್ಟೆಂಬರ್ 16: ಭಾರತದಿಂದ ಕಾಂಗ್ರೆಸ್‌ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಪುತ್ರ, ಸಂಸದ ರಾಹುಲ್‌ ಗಾಂಧಿ ಹೊರತೆರಳಿದ ನಂತರ ಪಕ್ಷ ಇದೇ ರೂಪ ಮತ್ತು ಆಕಾರದಲ್ಲಿ ಉಳಿಯುವುದಿಲ್ಲ ಎಂದು ತೆಲಂಗಾಣ ಬಿಜೆಪಿ ಘಟಕ ಬುಧವಾರ ತಿಳಿಸಿದೆ. 

ತಾಯಿ ಮತ್ತು ಮಗ ಭಾರತಕ್ಕೆ ಮರಳಿದಾಗ ಅವರಿಗೆ ಅಚ್ಚರಿ ಕಾದಿರಲಿದೆ ಎಂದು ಪಕ್ಷದ ರಾಜ್ಯ ಮುಖ್ಯ ವಕ್ತಾರ ಕೆ.ಕೃಷ್ಣಸಾಗರ್‌ ರಾವ್‌ ಹೇಳಿಕೆಯಲ್ಲಿ ಅಭಿಪ್ರಾಯಪಟ್ಟಿದ್ದಾರೆ. 

ಕಾಂಗ್ರೆಸ್ ಪಕ್ಷದೊಳಗಿನ ಬಿರುಕು ಈಗ ಸಾರ್ವಜನಿಕವಾಗಿ ಬಯಲಾಗಿದೆ. ಎಲ್ಲಾ ಕಾಂಗ್ರೆಸ್‌ ರಾಜ್ಯ ಘಟಕಗಳಲ್ಲಿ ಅನೇಕ ಹಿರಿಯ ನಾಯಕರು ಈ ಅಲುಗಾಡುತ್ತಿರುವ ರಾಷ್ಟ್ರೀಯ ಪಕ್ಷವನ್ನು ತ್ಯಜಿಸಲು ಸಕ್ರಿಯ ಪ್ರಯತ್ನ ನಡೆಸುತ್ತಿದ್ದಾರೆ ಎಂದಿದ್ದಾರೆ. 

ದೇಶದಲ್ಲಿ ಕೋವಿಡ್‌-19 ಮತ್ತು ಗಡಿಯಲ್ಲಿ ಚೀನಾ ಸೇನೆಯ ಘರ್ಷಣೆಯಂತಹ ಸಮಸ್ಯೆಗಳಿರುವಾಗ, ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಸಂಸತ್ತಿನ ಚರ್ಚೆಯಲ್ಲಿ ಪಾಲ್ಗೊಳ್ಳಬೇಕಲ್ಲವೇ? ಬದಲಾಗಿ ಅವರು ಅನಾರೋಗ್ಯದ ಕಾರಣದಿಂದ ವಿದೇಶಕ್ಕೆ ತೆರಳಲಿದ್ದಾರೆ. ಆದರೆ, ಅವರೊಂದಿಗೆ ರಾಹುಲ್‌ ಗಾಂಧಿ ಕೂಡ ಅಮೆರಿಕಕ್ಕೆ ಪ್ರಯಾಣ ಬೆಳೆಸುತ್ತಿರುವುದೇಕೆ ಎಂದು ಪ್ರಶ್ನಿಸಿದ್ದಾರೆ.

ಪ್ರಮುಖ ವಿಪಕ್ಷವಾಗಿರುವ ಕಾಂಗ್ರೆಸ್‌ಗೆ ತಮ್ಮ ಪಾತ್ರ ಮತ್ತು ಜವಾಬ್ದಾರಿಯ ಅರಿವಿಲ್ಲವೇ?ಇಂತಹ ಸವಾಲಿನ ಸಮಯದಲ್ಲಿ ಪಕ್ಷದ ಹಿರಿಯ ನಾಯಕರು ಗೈರಾಗಿರುವುದು ಅವರ ಬೇಜವಾಬ್ದಾರಿತನವನ್ನು ತೋರಿಸುತ್ತದೆ. ರಾಷ್ಟ್ರೀಯ ರಾಜಕಾರಣದಲ್ಲಿ ಕಾಂಗ್ರೆಸ್ ಇನ್ನೂ ಪ್ರಸ್ತುತವಾಗಿ ಉಳಿಯಬಲ್ಲದೇ? ಮುಂದಿನ ದಿನಗಳಲ್ಲಿ ಪಕ್ಷ ಅಸ್ತಿತ್ವ ಉಳಿಸಿಕೊಳ್ಳಬಹುದೇ ಎಂದು ಲೇವಡಿ ಮಾಡಿದ್ದಾರೆ.

ಸುದ್ದಿ ಓದಿ