ಸಿರುಗುಪ್ಪ

ಬಿಜೆಪಿ ಜಾತಿಗಳ ನಡುವೆ ವಿಷಬೀಜ ಬಿತ್ತುತ್ತಿದೆ’ : ಖಾಜಿಸಾಬ

ಬಿಜೆಪಿ ಜಾತಿಗಳ ನಡುವೆ ವಿಷಬೀಜ ಬಿತ್ತುತ್ತಿದೆ’ : ಖಾಜಿಸಾಬ

ಲೋಕದರ್ಶನ ವರದಿ 

ಸಿರುಗುಪ್ಪ 26: ಬಿಜೆಪಿ ಸರ್ಕಾರಕ್ಕೆ ಅಭಿವದ್ಧಿಯ ಪರಿಕಲ್ಪನೆ ಇಲ್ಲ ಮಕ್ಕಳ ಶೈಕ್ಷಣಿಕ ಪ್ರಗತಿಯ ಬಗ್ಗೆಯೂ ಕಿಂಚಿತ್ತೂ ಕಾಳಜಿ ವಹಿಸುತ್ತಿಲ್ಲ ಎಂದು ಸರ್ವರ ಗುರುಗಳಾದ ಸರ್ ಖಾಜಿ ಸೈಯದ್ ಅಬ್ದುಲ್ ರಜಾಕ್ ಖಾದ್ರಿ ಅಶ್ರಫಿ ಅವರು ಬೇಸರ ವ್ಯಕ್ತಪಡಿಸಿದರು.  


ಪತ್ರಕರ್ತರೊಂದಿಗೆ ಅವರು ಮಾತನಾಡಿ ಸಿರುಗುಪ್ಪ ನಗರದ ಜಾಮ ಶಾಹಿ ಮಸೀದಿ ಹತ್ತಿರದ ಅಲ್ಪಸಂಖ್ಯಾತರ  ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಇದೆ ಶಾಲೆಗೆ ಆಟದ ಮೈದಾನ ಇಲ್ಲ ಕಾಂಪೌಂಡ್ ಇಲ್ಲ ರಿಪೇರಿಯೂ ಮಾಡಿಲ್ಲ ಶಾಲೆ ಪಕ್ಕದಲ್ಲಿ ಜನರು ಅಡ್ಡವಾಗಿಮನೆಗಳನ್ನು ಕಟ್ಟಿಕೊಂಡಿದ್ದು ಕಂಪೌಂಡ್ ಇಲ್ಲದೆ ಮಕ್ಕಳು ಶಾಲೆಗೆ ಹೋಗಲು ತೊಂದರೆಯಾಗುತ್ತದೆ. ಕಾಂಪೌಂಡ್ ನಿರ್ಮಿಸಬೇಕು ಸುಸಜ್ಜಿತ ಶಾಲೆಯನ್ನಾಗಿ ರಿಪೇರಿ ಮಾಡಬೇಕು ಏಕೆಂದರೆ ಈ ಶಾಲೆ ಬಗ್ಗೆ ಸಾಕಷ್ಟು ಬಾರಿ ರಿಪೇರಿ ಮಾಡಲು ಕಂಪೌಂಡ್ ನಿರ್ಮಿಸಲು ಮನವಿ ಮಾಡಿದರೂ ಸಾರ್ಥಕವಿಲ್ಲದಂತಾಗಿದೆ.  

       ಬಿಜೆಪಿ ಸರ್ಕಾರ ಈವರೆಗೂ ಕೊರೊನಾ ಕಾಯಿಲೆ ಎದುರಿಸಿ ಕಾಲಹರಣ ಮಾಡಿದೆ ಈಗ ಬಿಜೆಪಿಯವರು ಜಾತಿ ಜಾತಿಗಳ ನಡುವೆ ವಿಷಬೀಜ ಬಿತ್ತುತ್ತಾ ಚುನಾವಣೆಯಲ್ಲಿ ಗೆಲ್ಲಲು ತಂತ್ರಗಾರಿಕೆ ಮಾಡುತ್ತಿದ್ದಾರೆ. ಅಭಿವೃದ್ಧಿಯ ಬಗ್ಗೆ ಕಲ್ಪನೆ ಇಲ್ಲದಂತಾಗಿದೆ ಎಂದು ಖಾಜಿಸಾಬ ಅವರು ವಿಷಾದಿಸಿದರು. ಸಮಾಜದ ಹಿತ ಚಿಂತಕರು ಸಾಕ್ಷರತಾ ಹಾಜಿ ಎ. ಅಬ್ದುಲ್ ನಬಿ, ಹಾಜಿ ಹಂಡಿ ಹುಸೇನ್ ಬಾಷಾ, ಹಂಡಿ  ಹಾಶಿಮ್, ಖತೀಬ್ ಜಹೀರುದ್ದೀನ್ ಬಾಬು,ಡಾ ಮೊಹಮ್ಮದ್ ಅಲಿ,ಮೊಹಮ್ಮದ್ ನೌಶಾದ್ ಅಲಿ,ಮೊಹಮ್ಮದ್ ಖಲೀಲ್ ಅವರು ಮಾತನಾಡುತ್ತಾ ಬಾಲ್ಯದಲ್ಲಿ ಮಕ್ಕಳು ತಮ್ಮ ಹಕ್ಕುಗಳ ಕುರಿತಾದ ವಿದ್ಯಾರ್ಜನೆ ಜ್ಞಾನದಿಂದ ವಂಚಿತರಾದರೆ ಭವಿಷ್ಯದಲ್ಲಿ  ಅವರಿಗೆ ಲಭಿಸಬಹುದಾದ ಪ್ರಯೋಜನಗಳಿಂದ ವಂಚಿತ ರಾಗ ಬೇಕಾಗುತ್ತದೆ ಎಂದು ಅವರು ಸಲಹೆ ನೀಡಿದರು. 


ಸುದ್ದಿ ಓದಿ