ಆಲಗೂರ್ ಧರಿದೇವಿ ಜಾತ್ರಾ ಮಹೋತ್ಸವ ನಾಳೆಯಿಂದ ಎರಡು ದಿನ ಅದ್ಧೂರಿಯಾಗಿ ನಡೆಯಲಿದೆ
ಲೋಕದರ್ಶನ ವರದಿ,
ಜಮಖಂಡಿ 13 : ತಾಲ್ಲೂಕಿನ ಆಲಗೂರ ಗ್ರಾಮದ ಕೃಷ್ಣಾ ನದಿ ತಟದ ಧರಿನಗರದಲ್ಲಿ ಧರಿದೇವ ಹಾಗೂ ಜಗನ್ಮಾತೆ ಜಕ್ಕಮ್ಮದೇವಿಯ ಜಾತ್ರಾ ಮಹೋತ್ಸವ ನ, 14 ಮತ್ತು 15 ರಂದು ಜರುಗಲಿದೆ ಎಂದು ಆಲಗೂರ ಧರಿದೇವರ ಮಠದ ಶಾಂತಮೂರ್ತಿ ಲಕ್ಷ್ಮಣಮುತ್ಯಾ ಹೇಳಿದರು. ನ, 14 ರಂದು ಬೆಳಿಗ್ಗೆ 5ಕ್ಕೆ ಪಂಚಾಮೃತ ಅಭೀಷೇಕ, ಮಧ್ಯಾಹ್ನ 12 ಗಂಟೆಗೆ ಅನ್ನಪ್ರಸಾದ, ಸಂಜೆ 5ಕ್ಕೆ ಚಂದಪ್ಪ ತಿಮ್ಮಣ್ಣ ನರಸಗೊಂಡ ಇವರ ಮನೆಯಿಂದ ನಂದಿಕೋಲ ತರುವುದು, ರಾತ್ರಿ ಸುಪ್ರಸಿದ್ದ ಡೊಳ್ಳಿನ ಪದಗಳು ಇರುತ್ತವೆ.
ನ.15 ರಂದು ಬೆಳಿಗ್ಗೆ 5ಕ್ಕೆ ಪಂಚಾಮೃತ ಅಭಿಷೇಕ ಹಾಗೂ ಜಕ್ಕಮ್ಮದೇವಿಯ ಉಡಿತುಂಬುವದು, 5, 30ಕ್ಕೆ ವೀರಭದ್ರೇಶ್ವರ ಅಗ್ನಿಪುಟ ಮಾಡುವದು, 8 ಗಂಟೆಗೆ ತೇರಿಗೆ ಕಳಸ ಏರಿಸುವುದು, 9,20ಕ್ಕೆ 1008 ಮುತ್ತೈದೆಯರಿಂದ ರೋಟ್ಟಿ ಬುತ್ತಿ ಜಾತ್ರೆ, 10ಕ್ಕೆ ಧರ್ಮಸಭೆ, 10,30 ಗಂಟೆಗೆ ಸಾವಳಗಿ ಭಕ್ತರಿಂದ ಜಕ್ಕಮ್ಮದೇವಿಗೆ ಆಯರಿ ಬರುವುದು, 12 ಗಂಟೆಗೆ 108 ಕುಂಭಮೇಳಗಳೊಂದಿಗೆ ವಾಲಗ ಮೇಳ, ಕರಡಿ ಮೇಳ, ಗೊಂಬೆ ಕುಣಿತ ಸೇರಿದಂತೆ ಸಕಲ ವಾಧ್ಯ ಮೆಳಗಳ ಮೂಲಕ ಪಲ್ಲಕ್ಕಿ ಉತ್ಸವವು ಕೃಷ್ಣಾನದಿಗೆ ಹೋಗಿ ಬರುವುದು ಎಂದರು.
ಮಧ್ಯಾಹ್ನ 1 ಗಂಟೆಗೆ ರಥೋತ್ಸವ ಜರಗುವದು, 2.20 ಕ್ಕೆ ಅಗ್ನಿ ಹಾಯುವದು. ಮಹಿಳೆಯರಿಗೆ ಉಡಿ ತುಂಬುವದು, ರಾತ್ರಿ 10 ಕ್ಕೆ ಜೈ ಮಾತೃಭೂಮಿ ಕಲಾ ಸಂಘ, ಲಕ್ಷೇಶ್ವರ ಇವರಿಂದ ಕ್ರಾಂತೀವೀರ ಸಂಗೊಳ್ಳಿ ರಾಯಣ್ಣ, ಕ್ರಾಂತಿಕಿಡಿ ರಾಣಿ ಕಿತ್ತೂರ ಚನ್ನಮ್ಮ ನಾಟಕ ಜರಗುತ್ತದೆ, ವಿವಿಧ ಗ್ರಾಮಗಳಿಂದ ಪಲ್ಲಕ್ಕಿಗಳು ಆಗಮಿಸಲಿವೆ ಎಂದು ತಿಳಿಸಿದ್ದಾರೆ.