ರಾಷ್ಟ್ರೀಯ

ಭಾರತದಲ್ಲಿಯೇ ಎಕೆ -47 ಬಂದೂಕು ತಯಾರಿಕೆ...!

ಭಾರತದಲ್ಲಿಯೇ    ಎಕೆ -47  ಬಂದೂಕು  ತಯಾರಿಕೆ...!

ಮಾಸ್ಕೋ, ಸೆಪ್ಟೆಂಬರ್ 4: ಭಾರತದಲ್ಲಿ ಎಕೆ-47  203   ಅತ್ಯಾಧುನಿಕ  ರೈಫಲ್    ಉತ್ಪಾದನೆಗೆ  ಸಂಬಂಧಿಸಿದಂತೆ  ಭಾರತ, ರಷ್ಯಾ ದೇಶಗಳ ನಡುವೆ   ಮಹತ್ವದ ಒಪ್ಪಂದ  ಏರ್ಪಟ್ಟಿದೆ.

ಪ್ರಸ್ತುತ  ಮೂರು ದಿನಗಳ  ಅಧಿಕೃತ  ರಷ್ಯಾ  ಭೇಟಿಯಲ್ಲಿರುವ ಭಾರತ ರಕ್ಷಣಾ ಸಚಿವ ರಾಜನಾಥ್ ಸಿಂಗ್  ಒಪ್ಪಂದಕ್ಕೆ ಸಮ್ಮತಿ ಸೂಚಿಸಿದ್ದಾರೆ   ಎಂದು ರಷ್ಯಾ ಮಾಧ್ಯಮಗಳು ವರದಿಮಾಡಿವೆ.

ಇಂಡೊ ರಷ್ಯಾ ರೈಫಲ್ಸ್  ಸಂಸ್ಥೆಯ  ಜಂಟಿ ಸಹಭಾಗಿತ್ವದಲ್ಲಿ  ಬಂದೂಕು ತಯಾರಿಸಲಿದ್ದಾರೆ. ಆರ್ಡ್‌ನೆನ್ಸ್ ಫ್ಯಾಕ್ಟರಿ ಬೋರ್ಡ್, ಕಲ್ನೋಶಿಕೋವ್ ಕನ್ಸರ್ನ್ ಮತ್ತು ರೋಸೊಬೊರೊನೆಕ್ಸ್‌ಪೋರ್ಟ್  ಈ ಜಂಟಿ ಉದ್ಯಮದಲ್ಲಿ (ಜೆವಿ) ಪಾಲುದಾರರಾಗಿದ್ದಾರೆ. ಆರ್ಡಿನೆನ್ಸ್ ಫ್ಯಾಕ್ಟರಿ ಮಂಡಳಿ  ಜಂಟಿ ಸಹಭಾಗಿತ್ವದಲ್ಲಿ  ಬಹುಪಾಲು (ಶೇಕಡಾ 50.5) ಪಾಲನ್ನು ಹೊಂದಲಿದೆ.  ಎಕೆ -47 ಗಳನ್ನು ಉತ್ತರ ಪ್ರದೇಶದ  ಕೊರ್ವಾ  ಶಸ್ತ್ರಾಸ್ತ್ರ  ಕಾರ್ಖಾನೆಯಲ್ಲಿ ತಯಾರಿಸಲಾಗುವುದು.

ಸುದ್ದಿ ಓದಿ