ಕರೋನ ಭೀತಿಯ ನಡುವೆ ಶುರುವಾಯ್ತು 18 ದಿನಗಳ ಸಂಸತ್ ಅಧಿವೇಶನ
ನವದೆಹಲಿ, ಸೆಪ್ಟೆಂಬರ್ 14: ದೇಶವನ್ನು ನಿರಂತರವಾಗಿ ಕಾಡುತ್ತಿರುವ ಕರೋನ ಭೀತಿಯ ನಡುವೆಯೂ 18 ದಿನಗಳ ಸಂಸತ್ತಿನ ಮುಂಗಾರು ಅಧಿವೇಶನ ಇಂದು ಶುರುವಾಗಿದ್ದು, ಅಕ್ಟೋಬರ್ 1ರವರೆಗೂ ನಡೆಯಲಿದೆ.
ಇದೇ ಮೊದಲ ಬಾರಿಗೆ ದೇಶದ ಸಂಸತ್ ಅಧಿವೇಶನವೂ ಭಿನ್ನವಾಗಿ ನಡೆಯುತ್ತಿದೆ . ಈ ಬಾರಿಯ ಸಂಸತ್ತಿನ ಅಧಿವೇಶನವನ್ನು ಕರೋನ ಕಾರಣಕ್ಕಾಗಿ ಎರಡು ಪಾಳಿಯಲ್ಲಿ ನಡೆಸಲಾಗುತ್ತಿದೆ. ಬೆಳಿಗ್ಗೆ 9ರಿಂದ ಮಧ್ಯಾಹ್ನ 1ರವರೆಗೆ ರಾಜ್ಯಸಭೆ, ಮಧ್ಯಾಹ್ನ 3ರಿಂದ ಸಂಜೆ 7ರವರೆಗೆ ಲೋಕಸಭೆ ನಡೆಯಲಿದೆ.
ಈ ಬಾರಿ ಭಾರತ- ಚೀನಾ ಗಡಿ ತಂಟೆ , ಉದ್ವಿಗ್ನತೆ, ಆರ್ಥಿಕ ಬಿಕ್ಕಟ್ಟು, ಜಿಡಿಪಿ ಕುಸಿತ, ಹೆಚ್ಚುತ್ತಿರುವ ಕೊರೋನಾ ಸೇರಿದಂತೆ ಹಲವು ಮಹತ್ವದ ವಿಷಯ ಚರ್ಚೆಯಾಗಲಿದೆ ಎನ್ನಲಾಗಿದೆ