ದಿ. ಮುಸ್ಲಿಮ್ ಬ್ಯಾಂಕ್ ವಾರ್ಷಿಕ ಮಹಾಸಭೆ ಇಂದು
ತಾಳಿಕೋಟಿ: ಪಟ್ಟಣದ ಮುಸ್ಲಿಮ್ ಸಮಾಜದ ಪ್ರತಿಷ್ಠಿತ ದಿ. ಮುಸ್ಲಿಮ್ ಕೋ-ಆಪರೇಟಿವ್ ಬ್ಯಾಂಕ್ ಲಿ., ಇದರ 2022-23ನೇ ಸಾಲಿನ 87ನೇ ವಾರ್ಷಿಕ ಸರ್ವಸಾಧಾರಣ ಸಭೆ ಇಂದು (ಜು. 22) ನಡೆಯಲಿದೆ ಎಂದು ಬ್ಯಾಂಕಿನ ವ್ಯವಸ್ಥಾಪಕ ಎನ್.ಎ. ಖಾಜಿ ತಿಳಿಸಿದ್ದಾರೆ.
ಪಟ್ಟಣದ ಈದಗಾ ಶಾದಿ ಹಾಲ್ನಲ್ಲಿ ಮುಂಜಾನೆ 11-00 ಗಂಟೆಗೆ ಜರುಗಲಿರುವ ಈ ಸಭೆಯ ಅಧ್ಯಕ್ಷತೆಯನ್ನು ಬ್ಯಾಂಕಿನ ಚೇರಮನ್ ಇಬ್ರಾಹೀಂ ಕೆ. ಮನ್ಸೂರ ವಹಿಸುವರು. ಬ್ಯಾಂಕಿನ ಎಲ್ಲ ನಿರ್ದೇಶಕರು ಉಪಸ್ಥಿತರಿರುವರು.
ಸದರಿ ಸಭೆಯಲ್ಲಿ ಬ್ಯಾಂಕಿನ ಎಲ್ಲ ಸದಸ್ಯರು ನಿಗಧಿತ ಸಮಯಕ್ಕೆ ಹಾಜರಾಗಿ ಬ್ಯಾಂಕಿನ ಅಭಿವೃದ್ಧಿಗೆ ಸಹಾಯಕವಾಗುವ ಹಾಗೂ ಸಭೆಯ ಮುಂದೆ ಬರಲಿರುವ ವಿಷಯಗಳ ಕುರಿತು ಚರ್ಚಿಸಿ ಸೂಕ್ತ ನಿರ್ಣಯಗಳನ್ನು ತೆಗೆದುಕೊಳ್ಳಬೇಕೆಂದು ಕೇಳಿಕೊಂಡಿದ್ದಾರೆ.
ಪ್ರತಿಭಾ ಪುರಸ್ಕಾರ: ಇದೇ ಸಮಯದಲ್ಲಿ ಬ್ಯಾಂಕು ಶಿಕ್ಷಣಕ್ಕಾಗಿ ಪ್ರೋತ್ಸಾಹ ನೀಡುವ ಉದ್ದೇಶದಿಂದ ಶೇರುದಾರರ ಮಕ್ಕಳಿಗೆ ಸನ್ 2022-23ನೇ ಸಾಲಿನ ಎಸ್.ಎಸ್.ಎಲ್.ಸಿ.ಯಲ್ಲಿ ಕನಿಷ್ಟ ಶೇ. 90 ಮತ್ತು ಪಿಯುಸಿಯಲ್ಲಿ ಶೇ. 85 ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ನೆನಪಿನ ಕಾಣಿಕೆ ಹಾಗೂ ಪ್ರೋತ್ಸಾಹಧನ ನೀಡಲಾಗುವುದು.